ನಿನ್ನ ಗಂಡೆದೆ ಹೀಗೆ…

November 6, 2008 at 5:28 am | In ಕನವರಿಕೆ | 19 Comments

ನಿನ್ನೆದೆಯಲ್ಲಿ ಮುಖವಿಟ್ಟಾಗ
ಒಳಗೆಲ್ಲ ಏನೊ ಅರಳಿದ ಸದ್ದು.
ನಿದ್ದೆಯ ಮಗು ನಕ್ಕ ಹಾಗೆ,
ಹಾಗೇ ಸಣ್ಣ ನಿರುಮ್ಮಳ.

ಕೂದಲ ನಡುವೆ ಬೆರಳು ತೂರಿ
ನೀ ತಲೆಯನುಜ್ಜುವಾಗ
ಸಾವಿರ ದಳದ ಮೊಗ್ಗು ಬಿರಿದು,
ಸಹಸ್ರಾರ ಚಟಪಟ.

ಜಗದ ಬೆರಗು ಹರಿಯುವಂತೆ
ತುಳುಕುತ್ತ ನಗುವ
ನಿನ್ನ ಗಂಡೆದೆ ಹೀಗೆ,
ಅಮ್ಮನ ತೊಡೆಯ ಹಾಗೆ…

Blog at WordPress.com. | Theme: Pool by Borja Fernandez.
Entries and comments feeds.