ಇಲ್ಲೊಂದಷ್ಟು ಆರೋಪಗಳಿವೆ…

September 29, 2008 at 6:37 am | In ನಿಮ್ಮೊಂದಿಗೆ | 14 Comments
Tags: ,

ನಾನು ನೆಟ್ ತೆಗೆಸಿ ನಾಲ್ಕು ತಿಂಗಳಾಗ್ತಾ ಬಂತು. ಅವತ್ತಿಂದ ರೆಗ್ಯುಲರ್ರಾಗಿ ಮೇಲ್ ಚೆಕ್ ಮಾಡಲು ಸಾಧ್ಯವೇ ಆಗ್ತಿಲ್ಲ. ಕೆಲಸ ಮಾಡೋದ್ ಬಿಟ್ಟು ಚಾಟ್ ಮಾಡ್ಕೊಂಡು ಕೂರ್ತಾರೆ ಅಂತಲೋ ಏನೋ ಆಫೀಸಲ್ಲೂ ಬ್ಲಾಕ್ ಮಾಡಿಬಿಟ್ಟಿದಾರೆ ನೋಡಿ! ಅದಕ್ಕೇ.
ಹಾಗೂ, ನೆನ್ನೆ ಸಂಜೆ ಸೈಬರ್ ನತ್ತ ಹೆಜ್ಜೆ ಹಾಕಿದೆ. ಆಮೇಲೆ ‘ಯಾಕಪ್ಪಾ ಬೇಕಿತ್ತು ಈ ಉಸಾಬರಿ’ ಅಂತ ಬೇಸರಪಟ್ಕೊಂಡು ಉಳಿದ ಸಮಯ ಹಾಳು ಮಾಡ್ಕೊಂಡೆ.
ಕಾರಣ, ಸ್ವಲ್ಪ ಗಂಭೀರವಾಗಿದೆ.

ಒಬ್ಬ ಪುಣ್ಯಾತ್ಮರು ಮೇಲ್ ಮಾಡಿದ್ದರು. (ಅವರನ್ನು ವೈಯಕ್ತಿಕವಾಗಿ ತರಾಟೆಗೆ ತೆಗೆದ್ಕೊಳ್ಳುವ ಉದ್ದೇಶ ನನ್ನದಲ್ಲ ಮತ್ತು ಅದರಿಂದ ಉಪಯೋಗವೂ ಇಲ್ಲವಾದ್ದರಿಂದ ಹೆಸರು, ಐಡಿಗಳನ್ನು ಇಲ್ಲಿ ನಮೂದಿಸುತ್ತಿಲ್ಲ). ಅವರದೊಂದಷ್ಟು ಆರೋಪ. ಅವರ ಪ್ರಕಾರ;
* ಭಾಮಿನಿ ಷಟ್ಪದಿ ಬರೆದ ನಾನು ಮತೀಯ ದುರಂತಗಳ ಬಗ್ಗೆ ನನ್ನದೊಂದು ಸತ್ತ ದನಿ (ಹತ್ತು-ಹನ್ನೆರಡು ದಿನಗಳ ಕೆಳಗೆ ನನ್ನ ಬ್ಲಾಗಲ್ಲಿ ಬರೆದಿದ್ದು) ಥರದ ಲೇಖನಗಳನ್ನು ಮತ್ತೆ ಮತ್ತೆ ಬರೀತಿರೋದು ನನ್ನ ಹಿಪಾಕ್ರಸಿಯನ್ನು ಸೂಚಿಸುತ್ತದೆ.
* ಪೌರಾಣಿಕ ಪಾತ್ರಗಳನ್ನು ಇಟ್ಟುಕೊಂಡು ಕಥೆ ಹೆಣೆದಿರುವ ನಾನು ಇಸ್ಕಾನ್ ನಲ್ಲಿ ಕೆಲಸ ಮಾಡ್ತಿರೋದು ನನಗೆ ಬದ್ಧತೆಯಿಲ್ಲ ಎಂಬುದನ್ನ ಸಾಬೀತುಪಡಿಸುತ್ತೆ.
* ಇಷ್ಟಕ್ಕೂ ನನಗೆ ಭಾಮಿನಿ ಷಟ್ಪದಿಗಾಗಿ ಅನಗತ್ಯ ಪ್ರಚಾರ ಸಿಕ್ಕಿದ್ದು, ಅದೊಂದು ನೀರಮೇಲಿನ ಗುಳ್ಳೆಯ ಥರದ ಜನಪ್ರಿಯತೆಯಷ್ಟೆ. ಬ್ಲಾಗಿಗೆ ಬರುವ ಕಮೆಂಟುಗಳೂ ಕೇವಲ ಗೆಳೆಯರ ಬಳಗದ್ದು ಮಾತ್ರ. ಅಷ್ಟಾದರೂ ನಾನು ಟಾಪ್ ಬ್ಲಾಗರ್ ಎಂದು ಬೀಗುತ್ತಿದ್ದೇನೆ!!
ಎಲ್ಲಕ್ಕಿಂತ ಮುಖ್ಯ ಆರೋಪ- * ನಾನು ಕೋಮುವಾದಿಗಳ ಪರ ಬರೆಯುತ್ತ ಬ್ಲಾಗ್ ಮಾಧ್ಯಮದ ಸ್ವಾಸ್ಥ್ಯ ಕದಡಲು ಪ್ರಯತ್ನಿಸುತ್ತಿದ್ದೇನೆ. ಗುಂಪುಗಾರಿಕೆ ಹುಟ್ಟುಹಾಕುತ್ತಿದ್ದೇನೆ.

ಇವನ್ನೆಲ್ಲ ನಿಮ್ಮ ಬಳಿ ಹೇಳ್ಕೊಳ್ಳುವ ಮುನ್ನ ಅದರ ಅಗತ್ಯ ಇದೆಯಾ, ಇದನ್ನೂ ವಿವಾದ ಹುಟ್ಟುಹಾಕುವ ಸ್ಟಂಟ್ ಎಂದುಬಿಟ್ಟರೆ ಏನು ಮಾಡೋದು? ಅಂತ ಯೋಚಿಸಿದೆ. ಆದರೆ ಇಲ್ಲಿ ಬ್ಲಾಗಿಂಗಿಗೆ ಸಂಬಂಧಪಟ್ಟ ಆರೋಪಗಳು ಇದ್ದುದರಿಂದ ನಿಮ್ಮ ಜತೆ ಒಂದು ಮಾತು ಹೇಳಿನೋಡುವಾ ಅನಿಸಿತು.

ಈ ಮೇಲಿನ ಆರೋಪಗಳಿಗೆ ಖಂಡಿತ ಉತ್ತರಗಳಿವೆ. ಆದರೆ ಅದನ್ನು ಕೊಡುತ್ತ ಕೂರುವುದು ಸಮಯ ಹಾಳುಮಾಡಿದಂತೆ ಅನಿಸ್ತಿದೆ. ಒಂದೊಮ್ಮೆ ನಿಮಗೆಲ್ಲರಿಗೂ ಅವು ನಿಜವೆನಿಸಿದಲ್ಲಿ, ದಯವಿಟ್ಟು ನಿಮ್ಮನಿಮ್ಮ ಬ್ಲಾಗ್ ರೋಲುಗಳಿಂದ ನನ್ನ ಲಿಂಕು ತೆಗೆದುಬಿಡಿ. ಯಾರೂ ಓದದೆ ರಿಜೆಕ್ಟ್ ಮಾಡಿಬಿಡಿ.

ಯಾಕೆಂದರೆ,
ಯಾರೇನೇ ಹೇಳಿದರೂ ಬರೆಯದೆ ಸುಮ್ಮನಿರುವುದು ನನ್ನಿಂದಾಗದ ಕೆಲಸ.

ನಾಲ್ಕು ಮಾತು- ನಾಲ್ಕು ಮಂದಿಯ ಪ್ರತಿಕ್ರಿಯೆ

September 27, 2008 at 7:45 am | In ನಿಮ್ಮೊಂದಿಗೆ | 3 Comments
Tags: ,

ಈ ಲೇಖನದಲ್ಲಿ ಹೇಳಿದ್ದೆ. ನನಗೆ ಚರ್ಚೆ ಬೇಕು, ಸರಿ ತಪ್ಪು ತಿಳಿಯಬೇಕು ಅಂತೆಲ್ಲಾ. ಅದಕ್ಕೆ ಸರಿಯಾಗಿ, ನನ್ಒಂದು ಕಥೆ, ನಾಲ್ಕು ಮಾತಿಗೆ ನಾಲ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ನನ್ನ ಉತ್ತರಗಳೂ ಇವೆ. ಇದರ ಮೂಲಕ ವಿಷಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅದನ್ನು ಪ್ರತ್ಯೇಕವಾಗಿ ಹಾಕ್ತಿದೇನೆ. ಆಸಕ್ತಿಯಿದ್ದವರು ಮುಂದುವರೆಸಬಹುದು.

ಚೇತನಾ,
ವಿಶ್ವಮಾನವರ ಬಗ್ಗೆ ಯಾಕ್ರಿ ತಲೆ ಕೆಡಿಸ್ಕೋತೀರಾ??
ಗಾಂಧೀಜಿಯ ರಾಮರಾಜ್ಯ,ಕುವೆಂಪುರವ ವಿಶ್ವಮಾನವ ಕಲ್ಪನೆ ಎಲ್ಲ ಪುಸ್ತಕದಲ್ಲಿದ್ರೇನೆ ಚೆನ್ನ.
ಕಾನೂನು ಕೈಗೆತ್ತಿದರ ಬಗ್ಗೆ ಆಕ್ಶೇಪ ಎತ್ತೋರು ತುಂಬಾ ಜನ ಸಿಗ್ತಾರೆ.
ಕೊಲೆ ಮಾಡಿದವರು ಕೂಡ ಒಳ್ಳೆಯ ಲಾಯರ್ ಸಹಾಯ ಪಡೆದರೆ ಹೊರಗೆ ಬರಬಹುದು .ಪಾಪ ಪಿಕ್ ಪಾಕೆಟ್ ಮಾಡಿದವನು ಸಾಯೋ ತನಕ (ಕೆಲವೊಂದು ಪ್ರಕರಣಗಳಲ್ಲಿ ಏನೂ ತಪ್ಪು ಮಾಡದವನು ಕೂಡಾ!) ಜೈಲಿನಲ್ಲಿ ಕೊಳೆಯಿತ್ತಿರುವ ಉದಾಹರಣೆಗಳೂ ಇವೆ .
ಮತಾಂತರ ಮಾಡೋರ ಮೇಲೆ ಮೊಕದ್ದಮೆ ಹಾಕಿದ್ರೆ ಅವರನ್ನು ಬಿಡಿಸಲು ಎಲ್ಲಿಂದ ಎಷ್ಟು ಡಾಲರ್ ಗಳು ಬರುತ್ತವೆ ಅನ್ನೋದು ಎಲ್ಲರಿಗೂ ಗೊತ್ತು.

ನಾನೊಂದು ಮಾತು ಹೇಳ್ತೀನಿ ಬೇಜಾರು ಮಾಡ್ಕೋಬೇಡಿ .ನೀವು ಈ ಬಗ್ಗೆ ಎಷ್ಟೇ ಚರ್ಚೆ ಮಾಡಿದ್ರು ನಿಮ್ಮ ಧೋರಣೆಯನ್ನು ವಿರೋಧಿಸುವ ಬುದ್ಧಿಜೀವಿಗಳು ಸಿಕ್ಕೇ ಸಿಕ್ತಾರೆ.ಹಾಗೇ ಆ ಬುದ್ಧಿಜೀವಿಗಳೂ ಹಿಂದುಗಳು ಅನ್ನೋದೂ ನಮ್ಮೆಲ್ಲರ ಸೌಭಾಗ್ಯ.

ಮಂಗಳೂರಿನಲ್ಲಿ ಮತಾಂತರ ಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ರೂ ಆ ಹಲ್ಲೆಯನ್ನು ಕ್ರಿಶ್ಚಿಯನ್ ಸಮುದಾಯದ ಮೇಲೆ ಆದ ಹಲ್ಲೆ ಅಂತಲೇ ಬಿಂಬಿಸಲಾಗುತ್ತಿದೆ.You can not convince all the people all the time.

- ಸಂದೀಪ್ ಕಾಮತ್

 Chetana,

Very wise decision. It is high time, this issue was debated and discussed thread bare. Hope you get enough particiapation to make this debate a success.

>>ಸರ್ವೇ ಭವನ್ತು ಸುಖಿನಃ ಸರ್ವೇ ಸನ್ತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯನ್ತು ಮಾ ಕಶ್ಚಿದ್ ದುಃಖ ಭಾಗ್ಭವೇತ್|| >>

This is what our culture tells us, but the other side do not believe in this and that is where the problem lies. They believe in the game of numbers and are interested to achieve the numbers by any and all means.

To me it looks very foolish when people argue about the supremacy of their belief system as opposed to another belief system.

Mayura.

ಚೇತನಾ,
-ನೀವು ಬರೆದ ಮೊದಲಿನ ಲೇಖನ ಓದಿದ ಮೇಲೆ ನನಗೆ ತುಂಬಾ ದಿನಗಳಿನ್ದ ಅನ್ನಿಸುತ್ತಿದ್ದನ್ನು ನನ್ನ blogನಲ್ಲಿ ಬರೆದಿದ್ದೇನೆ. ಸಮಯವಿದ್ದರೆ ನೋಡಿ.
-” ಜಾತಿ ಆಧಾರಿತ ಭಯೋತ್ಪಾದನೆ……….” ಬಗೆಗಿನ ಮಾಹಿತಿ ಪ್ರಕಟಿಸಿ. ನನಗೂ ತಿಳಿದುಕೊಳ್ಳುವ ಆಸೆಯಿದೆ.
sandeep,
“ಗಾಂಧೀಜಿಯ ರಾಮರಾಜ್ಯ,” ಅದು ಹೇಗೆ ಸಾಧಿಸಬಹುದು ಎಂಬುದರ ಬಗ್ಗೆಯೂ ಅವರು ಹೇಳಿದ್ದಾರೆ. ಅದು ಕಲ್ಪನೆಯಲ್ಲ. ಸಮಯ ಸಿಕ್ಕಲ್ಲಿ ಗಾಂಧಿ ಅಜ್ಜನ ವಿಚಾರಗಳ ಬಗ್ಗೆ ಓದಿ, ಅಮೇಲೆ ಹೀಗೆಲ್ಲ ಹೇಳಿ. ( ನನ್ನ ಈ ಕಾಮೆನ್ಟ್ ವಿಷಯಾಂತರ ಮಾಡುತ್ತದೆ ಎಂದು ಗೊತ್ತಿದ್ದರು ಹೀಗೆ ಬರೆಯಬೇಕಾಯಿತು ( )

- ನೀಲಾಂಜಲ

ಅಕ್ಕಾ,
ಈ ಸಂಪೂರ್ಣ ಘಟನೆಯ ಬಗೆಗಿನ ನನ್ನ ಗ್ರಹಿಕೆಗಳು ಇವು.
‘ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಮಾಡುತ್ತಿರುವ ಮುಸ್ಲಿಂ ಉಗ್ರಗಾಮಿಗಳು ಹಾಗೂ ಅವರ ಕೃತ್ಯಕ್ಕೆ ನೆರವನ್ನು, ಬೆಂಬಲವನ್ನೂ ನೀಡುವ ನಮ್ಮ ದೇಶದ ‘ಕೆಲವು’ ಮುಸ್ಲೀಮರ ಕೃತ್ಯದಿಂದ ಇಡೀ ಸಮುದಾಯವನ್ನು ನಿಂದನೆಗೆ ಒಳ ಮಾಡುವುದು ತಪ್ಪು. ಇದರಿಂದ ಸಾಮಾನ್ಯ ಮುಸಲ್ಮಾನರು ಹಾಗೂ ಮತಾಂಧತೆಯ ಸೋಂಕು ಇಲ್ಲದವರೂ ಸಹ ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಅವರೂ ಅನಿವಾರ್ಯವಾಗಿ ಭಯೋತ್ಪಾದನೆಯನ್ನು ಒಪ್ಪಿಕೊಳ್ಳುತ್ತಾರೆ. ಇದರಿಂದಾಗಿಯೇ ಬಾಬ್ರಿ ಮಸೀದಿ ಕೆಡವಿದಾಗ, ಗುಜರಾಥದಲ್ಲಿ ಕೋಮು ದಳ್ಳುರಿ ಸಂಭವಿಸಿದಾಗ ಭಯೋತ್ಪಾದನೆ ಹೆಚ್ಚುತ್ತದೆ’ – ಇದು ‘ವಿಶ್ವಮಾನವ, ಬುದ್ಧಿಜೀವಿಗಳ’ ನೈಜ ಕಾಳಜಿಯ ವಾದ. ಇದನ್ನು ಒಪ್ಪಿಕೊಳ್ಳೋಣ, ಇದರಲ್ಲಿ ಆಕ್ಷೇಪ ಪಡಿಸುವಂತಹ ಸಂಗತಿಗಳ್ಯಾವುವೂ ಇಲ್ಲ.
ಈಗ ಇನ್ನೊಂದು ವರ್ಷನ್ ಗಮನಿಸೋಣ. ‘ಫ್ಯಾಸಿಸಂ ಅನ್ನು ಆರಾಧಿಸುವ, ರಕ್ತದೋಕುಳಿ ನಡೆಸಲು ಹೊಂಚು ಹಾಕುವ ಭಜರಂಗದಳ, ಶ್ರೀ ರಾಮ ಸೇನೆ, ವಿ.ಎಚ್.ಪಿ, ವಿಶ್ವ ಹಿಂದೂ ಪರಿಷತ್ತುಗಳು ಹಾಗೂ ದಲಿತರನ್ನು ದಮನಗೈಯ್ಯುವ **ಪುರೋಹಿತಶಾಹಿ** ಜನರು ದೇಶದ ಐಕ್ಯತೆಗೆ ಮಾರಕ. ದಲಿತರನ್ನು ಐದು ಸಾವಿರ ವರ್ಷಗಳಿಂದ ತುಳಿದವರು ಯಾರು ಎಂದು ಹೇಳಬೇಕಿಲ್ಲ. ಈಗ ದಲಿತರು, ಹಿಂದುಳಿದವರು ಮತಾಂತರಗೊಂಡರೆ ಅವರ ಸಾಮಾಜಿಕ ಸ್ಥಾನ ಮಾನ ವೃದ್ಧಿಸುತ್ತದೆ. ಕೆಲಸ ಸಿಕ್ಕುತ್ತದೆ… ಇದನ್ನೂ ವಿರೋಧಿಸುತ್ತಿರುವ ಜನರ ಕೊಳೆತ ಮನಸ್ಥಿತಿಯನ್ನು ಮತಾಂಧತೆ ಎನ್ನದೆ ಇದರಲಾಗದು. ಪ್ರಾರ್ಥನೆ ಮಾಡುವವರ ಮೇಲೆ ಆಕ್ರಮಣ ಮಾಡುವವರ ‘ಧರ್ಮ’ ಎಂಥದ್ದು?’ ಇದೂ ನಮ್ಮ ವಿಶ್ವಮಾನವರ ಹೇಳಿಕೆ.
ಮೊದಲ ಹೇಳಿಕೆಯಲ್ಲಿ ಕಾಣುವ ಕಾಳಜಿಗೂ ಎರಡಾನೆಯ ಹೇಳಿಕೆಯಲ್ಲಿ ಕಾಣುವ ಬೇಜವಾಬ್ದಾರಿಗೂ ಇರುವ ವ್ಯತ್ಯಾಸವನ್ನೇ ಡೈಕಾಟಮಿ ಅನ್ನುವುದು.
ಯಾರೋ ಕೆಲವು ಮಂದಿ ಧರ್ಮದ ಹೆಸರಿನಲ್ಲಿ ಸಂಘಟಿತರಾಗಿ ಮಾಡುವ ಕೆಲಸ ಅವರ ಅಪರಾಧ ಮಾತ್ರ ಅದು ಸಮುದಾಯವೊಂದರ ಅಪರಾಧವಲ್ಲ. ಹೀಗಂತ ಹೇಳುವ ಕಾಂಗ್ರೆಸ್ಸಿನ ಮುತ್ಸದ್ಧಿಗಳು ಹಿಂದೆ ಗೋಡ್ಸೆ ಎಂಬ ಅಡ್ಡನಾಮದ ವ್ಯಕ್ತಿ ಗಾಂಧಿಯನ್ನು ಕೊಂದದ್ದಕ್ಕಾಗಿ ಆ ಸರ್ ನೇಮ್ ಇರುವವರನ್ನೆಲ್ಲಾ ಹಿಂಸಿಸಿದ್ದು, ಈಗಲೂ ಒಂದು ವರ್ಗದ ಜನರ ಬಗ್ಗೆ ಮಾತಾಡುವಾಗ ಗೋಡ್ಸೆ ವಂಶಸ್ಥರು ಎನ್ನುವುದು ಎಲ್ಲಿಯ ವಿಶ್ವಮಾನವತೆ? ಇನ್ನು ಸಿಖ್ ಮಾರಣ ಹೋಮವನ್ನು ಯಾರು ನಡೆಸಿದ್ದು? ಆಗೆಲ್ಲಾ ಯಾಕೆ ಲಾ ಅಂಡ್ ಆರ್ಡರ್ ಕೈಗೆತ್ತಿಕೊಳ್ಳಲಾಯ್ತು? ಹೀಗಿರುವಾಗ ಮತಾಂತರವನ್ನು ತಾತ್ವಿಕವಾಗಿ ವಿರೋಧಿಸುವ ಹಿಂದುಗಳೆಲ್ಲಾ ಕೋಮುವಾದಿಗಳಾಗುತ್ತಾರೆ, ಭಯೋತ್ಪಾದಕರನ್ನು ‘ಭಾಯಿ’ ಎಂದು ಒಪ್ಪಿಕೊಳ್ಳುವವರು ‘ಸಾಮಾನ್ಯ’ ಮುಸ್ಲೀಮರಾಗಿ ಉಳಿಯುತ್ತಾರೆ. ಯಾಕೆ ಹೀಗೆ? ‘ಆರ್ಡರ್’ ಸ್ಪೆಷಲಿಸ್ಟುಗಳಾದ ವಿಶ್ವಮಾನವರು ಉತ್ತರಿಸಬೇಕು.
ಹೌದು ನಮ್ಮ ಯು.ಆರ್.ಎ ಅವರು ಮೂರು ನಾಲ್ಕು ವೇದಿಕೆಗಳಲ್ಲಿ ಉಗ್ರವಾಗಿ ಗಲಭೆಯನ್ನು ವಿರೋಧಿಸಿದ್ದಾರೆ. ಸೆಕ್ಯುಲರಿಸಂನ ಎತ್ತಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಇವರ ವಾದವನ್ನು ಗಮನಿಸಿದರೆ , ಹಿಂದುಳಿದವರ, ದಲಿತರ ಏಳಿಗೆಗಾಗಿ ಸಂವಿಧಾನದಲ್ಲಿ ಮಾಡಿಕೊಟ್ಟಿರುವ ಸವಲತ್ತುಗಳಾದರೂ ಏಕೆ ಬೇಕಿತ್ತು? ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಬುದ್ಧಿ ಇರಬೇಡವಾ? ಎಲ್ಲಾ ದಲಿತರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರು, ಸಾಮಾಜಿಕ ನ್ಯಾಯ ಸಿಕ್ಕದವರೆಲ್ಲಾ ಕ್ರೈಸ್ತ ಧರ್ಮಕ್ಕೆ ಹಾರಿಕೊಂಡು ಬಿಡಿ ಎಂದು ಸಂವಿಧಾನದಲ್ಲಿ ನಮೂದಿಸಿಬಿಡಬಹುದಿತ್ತು. ಎಲ್ಲರಿಗೂ ಮನ್ನಣೆ, ಉದ್ಯೋಗ ಸಿಕ್ಕುತ್ತದೆಯಲ್ಲವೇ ಇದರಿಂದ? ಕ್ರಿಸ್ತನ ಧರ್ಮದಲ್ಲಿ ಯಾರಿಗೂ ಕಷ್ಟಗಳೇ ಇರುವುದಿಲ್ಲ. ಅಲ್ಲಿ ಸಮಾನತೆ ಇರುತ್ತದೆ, ಶಾಂತಿ ಸೌಹಾರ್ದತೆ ಇರುತ್ತದೆ ಲಾ ಅಂಡ್ ಆರ್ಡರ್‌ಗಾಗಿ ಇಷ್ಟೆಲ್ಲಾ ನಮ್ಮ ವಿಶ್ವ ಮಾನವರು ಹಾಗೂ ಸರಕಾರ ತಲೆ ಕೆಡಿಸಿಕೊಳ್ಳುವ ಬದಲು ಇಡೀ ದೇಶವನ್ನೇ ಕ್ರಿಶ್ಚಿಯನ್ ದೇಶ ಎಂದು ಕರೆದುಬಿಟ್ಟರೆ ಸಾಕಲ್ಲವೇ? ಇಷ್ಟೆಲ್ಲಾ ಸಂಘರ್ಷಗಳಿಗೆ ಕಾರಣವಾದದ್ದು ಭಾರತ ಕ್ರೈಸ್ತ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದಿದ್ದೇ ಎಂದು ಹೇಳಿ ಬಿಟ್ಟು ಸ್ವಾತಂತ್ರ್ಯ ಹೋರಾಟ ಮಾಡಿದವರೆಲ್ಲಾ ದುಷ್ಟರು ಎಂದು ಬಿಡಿ ಜ್ಞಾನಪೀಠಿಗಳೇ, ಆಗ ನಿಮ್ಮ ಸೆಕ್ಯುಲರಿಸಂ, ಬುದ್ಧಿಜೀವಿತ್ವ ಎಲ್ಲಕ್ಕೂ ಸಾರ್ಥಕ್ಯ ದಕ್ಕಿ ಅವು ನೇರವಾಗಿ ಸ್ವರ್ಗಕ್ಕೆ ಹೋಗುತ್ತವೆ…                  

supreeth

ಇವು ನನ್ನ ಮಾತುಗಳು…

ನೀಲಾಂಜಲ, ವಿಷಯಾಂತರವಾದರೂ ಪರವಾಗಿಲ್ಲ, ಉತ್ತಮ ವಿಷಯಗಳನ್ನು ಹಂಚಿಕೊಳ್ಳುವುದೇ ನನ್ನ ಇರಾದೆಯಾಗಿದೆ. ಆದ್ದರಿಂದ, ಹೇಳಲಡ್ಡಿಯಿಲ್ಲ. ಖಂಡಿತ ನಾನು ಈ ಬಗ್ಗೆ ಮತ್ತಷ್ಟು ಬರೆಯುವೆ.

ಸಂದೀಪ್,
ನಿಮಗೆ ಬಿಡುವಿದ್ದರೆ, ಆಸಕ್ತಿಯಿದ್ದರೆ ಹೇಳಿ, ಗಾಂಧೀಜಿ ಕುರಿತ ಪುಸ್ತಕಗಳೊಂದಷ್ಟನ್ನು ಪಟ್ಟಿ ಮಾಡಿಕೊಡುತ್ತೇನೆ. ದಯವಿಟ್ಟು ಓದಿ. ಗಾಂಧೀ ತತ್ತ್ವವನ್ನು ಗಂಭೀರವಾಗಿ ಅಧ್ಯಯನ ಮಾಡದೆ ಹೀಗೆಲ್ಲ ಹೇಳಬಾರದು ಅಲ್ವಾ? ಖಂಡಿತ ನಾನು ಕೂಡ ಸಂಪೂರ್ಣವಾಗಿ ತಿಳಿಯುವ ಮುನ್ನ ನಿಮ್ಮ ಹಾಗೇ ಯೋಚಿಸ್ತಿದ್ದೆ. ಗಾಂಧೀ ಚಿಂತನೆಗಳನ್ನ ತಪ್ಪಾಗಿ ಬಿಂಬಿಸ್ತ ಒಂದು ವಿಚಾರಕ್ಕೆ ಮಾತ್ರ ಸೀಮಿತಗೊಳಿಸ್ತಾ ನಮ್ಮ ಹಾದಿ ತಪ್ಪಿಸಿದ್ದು ನಮ್ಮ ದೇಶದ ಪ್ರಮುಖ ರಾಜಕೀಯ ಪಕ್ಷ ಮತ್ತು ಒಂದಷ್ಟು ಜನ ಅದರ ಕೃಪಾಪೋಷಿತ ಚರಿತ್ರಕಾರರು.
ಇನ್ನು ಕುವೆಂಪು… ಖಂಡಿತ ಅವರ ‘ವಿಶ್ವ ಮಾನವ ತತ್ತ್ವ’ ಸಾರ್ವಕಾಲಿಕ, ಆದರಣೀಯ. ಹೇಳಿಕೇಳಿ ಅವರು ನಮ್ಮ ಸ್ವಾಮಿ ವಿವೇಕಾನಂದರ ಶಿಷ್ಯರು. ರಾಮಕೃಷ್ಣಾಶ್ರಮದ ತತ್ತ್ವಗಳನ್ನ ಮೈಗೂಡಿಸಿಕೊಂಡವರು. ಅವರು ಹೇಳಿದ ವಿಶ್ವ ಮಾನವತ್ವವೇ ಹಿಂದೂ ಧರ್ಮದ ಬುನಾದಿಯಾಗಿದೆ. ಪುರೋಹಿತ ಷಾಹಿಯ ಸೋಗಲಾಡಿತನಗಳು, ಕಂದಾಚಾರಗಳನ್ನು ಅವರು ದ್ವೇಷಿಸಿದಷ್ಟೇ ತೀವ್ರವಾಗಿ ಮತಾಂತರ ಮತ್ತು ಕ್ರೈಸ್ತರ ಆಟಾಟೋಪವನ್ನೂ ಖಂಡಿಸುತ್ತಿದ್ದರು ಎನ್ನುವುದನ್ನು ಅವರ ಕೃತಿಗಳಲ್ಲಿ ಗ್ರಹಿಸಬಹುದು. ಮತಾಂತರವಾಗ ಹೊರಟಿದ್ದವನನ್ನು ತಡೆಯಲು, ಪಾದ್ರಿಯನ್ನು ಬೆದರಿಸಲು ಅವರು ತಮ್ಮ ‘ಮಲೆಗಳಲ್ಲಿ ಮದುಮಗಳು ’ ಪಾತ್ರಗಳ ಮೂಲಕ ಬಂದೂಕು ಹಿಡಿಸುತ್ತಾರೆ! (ಹೆದರಿಸಲು ಮಾತ್ರ).

ಸಂದೀಪ್, ನಿಮ್ಮ ಚಿಂತನೆಗಳು, ಭಾವನೆಗಳು ಗಟ್ಟಿಯಾಗಿವೆ. ಖುಷಿಯಾಯ್ತು. ಇನ್ನೊಂಚೂರು ಪ್ರಬುದ್ಧವಾಗಿಬಿಟ್ಟರೆ (ಹೀಗೆ ಹೇಳಬಾರದಿತ್ತೆನಿಸಿದರೆ ಸಾರಿ) ನೀವು ಸಮರ್ಥರಾಗಿಬಿಡುತ್ತೀರಿ!

ಮಯೂರ,
ನಿಜ. ತಾವಾಗಿಯೇ ಎತ್ತರದವರೆಂದು ಗುರುತಿಸಿಕೊಳ್ಳಲು ಸಾಧ್ಯವಾಗದವರು ಮತ್ತೊಬ್ಬರನ್ನು ಹೂತು ಅವರ ಗೋರಿಯ ಮೇಲೆ ನಿಂತು ‘ನನ್ನ ಎತ್ತರ ಅಳೆಯಿರಿ’ ಎನ್ನುತ್ತಾರೆ. ಇದು ಎಲ್ಲಾ ಕಾಲ/ ಕ್ಷೇತ್ರಕ್ಕೂ ಅಪ್ಲೇ ಆಗುತ್ತದೆ.

- ಚೇತನಾ

ಸುಪ್ರೀತ್ ಎತ್ತಿಕೊಟ್ಟ ಮಾತುಗಳು ಚರ್ಚೆಯ ಹರವನ್ನು ಮತ್ತಷ್ಟು ವಿಸ್ತಾರಗೊಳಿಸಿದೆ. ಥ್ಯಾಂಕ್ಸ್ ಟು ಸುಪ್ರೀ.
ನನ್ನ ಕೆಲವು ಮಾತುಗಳನ್ನ ನಿಮ್ಮ ಜೊತೆ ಹಂಚಿಕೊಳ್ಳುವೆ.

* ಇವತ್ತು ವೀರಪ್ಪ ಮೊಯ್ಲಿ ಸ್ಟೇಟ್ ಮೆಂಟ್ ನೋಡಿದೆ. ಗೋಧ್ರಾ ಘಟನೆ ಕುರಿತು ನಾನಾವತಿ ಆಯೋಗ ನೀಡಿದ ವರದಿಗೆ ಪ್ರತಿಕ್ರಿಯಿಸಿರುವ ಅವರು, ಬೇರೆ ದೇಶದಲ್ಲಾಗಿದ್ದರೆ ಮೋದಿಯನ್ನು ಗಲ್ಲಿಗೇರಿಸ್ತಿದ್ದರು ಎಂದು ಹೇಳಿದ್ದಾರೆ.ಗೋಧ್ರಾನಂತರದ ಘಟನೆಗಳು ಕರಸೇವಕರ ಸಜೀವ ದಹನದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿತ್ತು. ನಿಜ. ಈ ಸಂದರ್ಭದಲ್ಲಿ ಅನೇಕ ಕ್ರೂರ ಹಿಂಸೆಗಳು ಜರುಗಿದವು. ಅದು ಖಂಡನೀಯ. ಆದರೆ ಒಟ್ಟು ಘಟನೆಯನ್ನು ಗಮನಿಸದೆ ಒಟ್ಟಾರೆ ಹಿಂದೂವನ್ನು ಮಾತ್ರ ತಪ್ಪಿಸ್ಥನ ಜಾಗದಲ್ಲಿ ನಿಲ್ಲಿಸೋದನ್ನ ನಾನು ಖಂಡಿಸ್ತೇನೆ.
ಒಂದು ಸಂಗತಿ ನಾವು ಗಮನಿಸಬೇಕು. ಇಲ್ಲಿ ಸಾಮೂಹಿಕ ಪ್ರಚೋದನೆಗೆ ಸಾಮೂಹಿಕ ಪ್ರತಿಕ್ರಿಯೆ ನಡೆದಿತ್ತು. ಆದರೆ,
ಇಂದಿರಾ ಹತ್ಯೆಯಾದಾಗ ಕಾಂಗ್ರೆಸಿಗರು ಇಡಿಯ ಸಿಖ್ ಸಮುದಾಯದ ಮೇಲೆ ಮುಗಿಬಿದ್ದರಲ್ಲ, ಅತೀವ ಪ್ರಮಾಣದ ಜೀವ ಹನಿಯಾದವಲ್ಲ, ಆಗ ಯಾಕೆ ರಾಜೀವ್ ರನ್ನು (ಆಗ ಅವರೇ ತಾನೇ ಪ್ರಧಾನಿಯಾಗಿದ್ದು?) ಯಾರೂ ಪ್ರಶ್ನಿಸಲಿಲ್ಲ? ಯಾಕೆ ಅವರನ್ನು ಗಲ್ಲಿಗೇರಿಸುವ ಉತ್ಸಾಹ ಯಾರಿಗೂ ಮೂಡಲಿಲ್ಲ?
ತಮ್ಮ ಇತಿಹಾಸ ಮರೆತು ಮಾತಾಡೋದು ಇದೆಲ್ಲಿಯ ಜಾಣತನ!?

ಕರ್ನಾಟಕದಲ್ಲಿ ಮತಾಂತರ ನಡೆಯುತ್ತಿದ್ದ ಜಾಗಗಳಲ್ಲಿ ಗಲಭೆಯಾಗಿದ್ದಕ್ಕೆ ಅಮೆರಿಕದ ಕ್ರೈಸ್ತರು ನಮ್ಮ ಪ್ರಧಾನಿಯೆದುರು ಜಾಥಾ ನಡೆಸಿ ಪ್ರತಿಭಟನೆ ತೋರಿಸ್ತಾರೆ… ಹಿಂದೂಗಳು- ಸಾವಿರಾರು ವರ್ಷಗಳ ಮಾತು ಬಿಡಿ, ಸ್ವಾತಂತ್ರ್ಯಾನಂತರದ ಅರವತ್ತು ವರ್ಷಗಳಿಂದಲೂ ಹಿಂಸೆ ಅನುಭವಿಸ್ತಲೇ ಬಂದಿದ್ದಾರೆ, ಯಾಕೆ ಯಾರ ಸಹಾನುಭೂತಿ, ಬೆಂಬಲ, ಭರವಸೆಗಳು ಸಿಕ್ಕೋಲ್ಲ? ಪಕ್ಷನಿಷ್ಟ ಹಿಂದೂಗಳು ಹೇಗಿದ್ದರೂ ಮತ ಹಾಕ್ತಾರೆ, ಮುಸ್ಲಿಂ/ ಕ್ರೈಸ್ತರ ಮತಗಳು ಕಳೆದುಹೋಗುತ್ತದೆಂದು ಭಯವೇ? ಚಿಂತಕರೆನಿಸಿಕೊಂದವರಿಗೆ ತಾವೆಲ್ಲಿ ‘ಗೊಡ್ಡು ಆಚಾರದವರು’ ಎನಿಸಿಕೊಂಡುಬಿಡುವೆವೋ ಎಂಬ ಚಿಂತೆಯೇ?

* ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಅಸಮಾನತೆ ತೊಲಗುತ್ತದೆಯೆಂದಾದರೆ, ‘ದಲಿತ ಕ್ರೈಸ್ತರು’ ಯಾಕಿದ್ದಾರೆ? ‘ಶಾಂತಿ- ಪ್ರೀತಿಯನ್ನು ಬೋಧಿಸುವ ಧರ್ಮದ ಮೇಲೆ ದಾಳಿ ಖಂಡನೀಯ’ ಅನ್ನುತ್ತಿದ್ದಾರಲ್ಲ, ಶತಶತಮಾನಗಳಿಂದ ಇವರು ಮತಾಂತರ ನಡೆಸಲಿಕ್ಕಾಗಿ, ಲೂಟಿ ಹೊಡೆಯಲಿಕ್ಕಾಗಿ ಏಸುದೇವನ ಹೆಸರನ್ನು ದುರುಪಯೋಗಪಡಿಸ್ಕೊಳ್ತಿರೋದನ್ನು ಒಪ್ಪಬೇಕೇನು?
ಇದೇನೂ ಹಳೆಯ ಕಥೆಯಲ್ಲ, ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಭಯೋತ್ಪಾದನೆ ಯಾವ ಮಟ್ಟಕ್ಕೆ ಹೋಗಿದೆ, ಅದರ ಕುಮ್ಮಕ್ಕು ಯಾರದು ಎಂಬುದು ಗೊತ್ತಿಲ್ಲವೇ?

ಹ್ಹ! ನಾಲ್ಕು ಪುಂಡರು ಕಲ್ಲು ಹೊಡೆದ ಮಾತ್ರಕ್ಕೆ ರಾತ್ರೋರಾತ್ರಿ ಹಿಂದೂಗಳು ಭಯೋತ್ಪಾದಕರಾಗಿಹೋದರಲ್ಲವೆ?

* ಮೊನ್ನೆ ಹಿಂದೂ ಸಂತರ ತಂಡ ಮಾತುಕಥೆ ನಡೆಸಿ ‘ಮತ್ತೆ ಚರ್ಚುಗಳ ಮೇಲೆ ದಾಳಿಯದರೆ ಇಪ್ಪತ್ತ ನಾಲ್ಕು ಗಂಟೆ ಉಪವಾಸ ಕುಳಿತು ಪ್ರತಿಭಟಿಸುವೆವು’ ಎಂದು ಹೇಳಿಕೆ ಕೊಟ್ಟಿತು.
ಇಷ್ಟು ಮಾತ್ರದ ಸಹಾನುಭೂತಿ ನಮಗೆ ಯಾವಾಗ ಸಿಕ್ಕಿದೆ ಹೇಳಿ? ಯಾವ ಧರ್ಮಗುರುಗಳು ನಮ್ಮ ಮೇಲೆ ದಾಳಿಯಾದಾಗ ಇಂಥದೊಂದು ಹೇಳಿಕೆ ಕೊಟ್ಟಿದ್ದಾರೆ?

ಇಲ್ಲಿ, ಧರ್ಮ- ಧರ್ಮಗಳ ನಡುವೆ ಕಿಚ್ಚು ಹಚ್ಚುವುದು, ಕೆಸರೆರೆಚಾಟ ನಡೆಸೋದು ನನ್ನ ಉದ್ದೇಶವಲ್ಲ. ಈಗಾಗಲೇ ನೆಲೆ ಕಳೆದುಕೊಂಡು ಅನಾಥನಾಗುತ್ತಿರುವ ಹಿಂದೂವನ್ನು ಸುಖಾಸುಮ್ಮನೆ ದೂಷಿಸೋದನ್ನ ಸಹಿಸಿಕೊಂದ ಸುಮ್ಮನಿರಲಾಗೋದಿಲ್ಲ ಅಷ್ಟೇ.

- ವಂದೇ,

ಚೇತನಾ ತೀರ್ಥಹಳ್ಳಿ

ಒಂದು ಕಥೆ, ನಾಲ್ಕು ಮಾತು…

September 26, 2008 at 9:54 am | In ನಿಮ್ಮೊಂದಿಗೆ | 6 Comments
Tags: ,

ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು.  ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು.  

ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು ಬೀರುವುದು ಮೊದಲಾದ ಉಪಟಳ ನೀಡತೊಡಗಿದರು. ಇದು ಎಷ್ಟು ಹೆಚ್ಚಾಯ್ತೆಂದರೆ, ಸರ್ಪ ಸದಾ ಹುತ್ತದೊಳಗೆ ಅಡಗಿ  ಕೂರುವ ಸ್ಥಿತಿ ಬಂತು. ಇದರಿಂದಾಗಿ ಅದಕ್ಕೆ ಆಹಾರ ಒದಗುವುದು ದುಸ್ತರವಾಗತೊಡಗಿತು. ಬಲಹೀನನಾದ ಸರ್ಪ ಹುತ್ತದೊಳಗೆ ಕುಳಿತಿದ್ದರೆ, ಹುಡುಗರು ಹುತ್ತದ ಬಾಯಿಗೆ ಮರಳು ಸುರಿದು, ಮತ್ತಷ್ಟು ಹಿಂಸೆ ಕೊಟ್ಟರು. ಇವೆಲ್ಲವನ್ನೂ ಸಹಿಸಿಕೊಳ್ಳುತ್ತ ಅದು ದಿನೇ ದಿನೇ ಸೊರಗತೊಡಗಿತು.

ಭೂಲೋಕ ಸಂಚಾರ ಮಾಡುತ್ತಿದ್ದ ನಾರದರು, ತಮ್ಮ ಸರ್ಪಶಿಷ್ಯನನ್ನು ಹುಡುಕಿಕೊಂಡು ಬಂದರು. ಹುತ್ತದಲ್ಲಿ ಎರೆಹುಳುವಿನಂತೆ ವಿಲಿಗುಟ್ಟುತ್ತ ಬಿದ್ದಿದ್ದ ಅದನ್ನು ಕಂಡು ಕನಿಕರಪಟ್ಟರು. ಅದರ ದುರವಸ್ಥೆಗೆ ಕಾರಣ ವಿಚಾರಿಸಿದರು. ಆಗ ಸರ್ಪ, ತನ್ನ ಸಾಧುತ್ತ್ವವೇ ಇಂಥಹ ಪರಿಸ್ಥಿತಿ ಒದಗಿಸಿತು ಎಂದು ಹೇಳಿತು.

 ಅದಕ್ಕುತ್ತರವಾಗಿ ನಾರದರು,

“ಹಿಂಸೆಯನ್ನು ಬಿಡುವುದೆಂದರೆ ಸ್ವರಕ್ಷಣೆಯನ್ನು ಕೈ ಬಿಡುವುದಲ್ಲ. ನೀನು ಕಚ್ಚುವುದನ್ನು ಬಿಡುವುದು ಸರಿಯೇ, ಆದರೆ ಹೆಡೆಬಿಚ್ಚಿ ಭುಸುಗುಟ್ಟುವುದನ್ನು ಬಿಡಬೇಡ. ಆಗ ಈ ಹುಡುಗರು ನಿನ್ನನ್ನು ನೋಡಿ ಭಯಪಡುತ್ತಾರೆ. ನಿನಗೆ ತೊಂದರೆ ಕೊಡುವುದಿಲ್ಲ” ಎಂದು ಉಪದೇಶಿಸಿ, ಹರಸಿ ಹೊರಟುಹೋದರು.
~

ಈ ಕಥೆ ಹೇಳಲು ಇದು ಸಕಾಲ ಅನಿಸಿತು. ತಡೆಯಲಾಗಲಿಲ್ಲ. ಅದಕ್ಕೇ, ನಿಮಗೆಲ್ಲ ಗೊತ್ತಿರಬಹುದಾದರೂ ಹೇಳಬೇಕಾಯಿತು. ಯಾವುದೇ ಕಥೆಯಾಗಲಿ, ಅದು ಕೆಲವು ಸಂದರ್ಭಗಳಲ್ಲಿ ವಿಶೇಷ ಬಲ ಪಡೆದುಬಿಡುತ್ತದೆ ಅಲ್ಲವೆ?

‘ವಿಶ್ವ ಮಾನವ’ರು ನನ್ನ ‘ಮತೀಯ ದುರಂತಗಳ ಬಗ್ಗೆ ನನ್ನದೊಂದು ಸತ್ತ ದನಿ’ ಲೇಖನಕ್ಕೆ ಪ್ರತಿಕ್ರಿಯೆ ಬರೆದು ಒಂದೆರಡು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರ ಏನು ಅಂತ ಕೊಡೋದು?  ಜಾತಿ ಆಧಾರಿತ ಭಯೋತ್ಪಾದನೆ ನಮ್ಮ ದೇಶದಲ್ಲಿ ಎಲ್ಲೆಲ್ಲಿ ನಡೀತಿದೆ, ಯಾರಿಂದ ನಡೀತಿದೆ, ಯಾಕಾಗಿ ನಡೀತಿದೆ ಅಂತ ಚರ್ಚಿಸೋಕೆ ಇದು ಸಕಾಲವಲ್ಲವೆ? ನಿಮಗೆ ಆಸಕ್ತಿ ಇದೆಯೇ? ನಿಮಗೆಲ್ಲ ಪುರುಸೊತ್ತಿದ್ದರೆ ನಾನಂತೂ ತಯಾರಾಗಿರುವೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ಮಾಡಿರುವುದರಿಂದ ಬಲವಾದ ದಾಖಲೆಗಳ ಸಹಿತ ಮಾಹಿತಿ ನೀಡಬಲ್ಲೆ. ಬಿಡೀ. ಅದೇನೂ ದೊಡ್ಡ ಸಂಗತಿಯಲ್ಲ. ಜಗತ್ತು ಕೀ ಬೋರ್ಡಿನ ಮೇಲೆ ನಲಿದಾಡುವ ಈ ದಿನಗಳಲ್ಲಿ ಯಾರೂ ಕಷ್ಟ ಪಡಬೇಕಾಗಿಲ್ಲ.

ಆದರೂ, ಚರ್ಚಿಸಬೇಕನಿಸುತ್ತದೆ. ಯಾಕೆ ಹೀಗಾಗುತ್ತಿದೆ, ಯಾಕೆ ಧರ್ಮದ ಹೆಸರಲ್ಲಿ ದೇಶ ಹೊತ್ತುರಿಯುತ್ತದೆ ಎಂದೆಲ್ಲ ಮಾತಾಡಿಕೊಂಡು ಮುಂದಿನ ಪೀಳಿಗೆ ಇದರತ್ತ ತಲೆ ಹಾಕದ ಹಾಗೆ ಮಾಡಬೇಕನಿಸುತ್ತದೆ. ಕುಂತತ್ರ ರಾಜಕಾರಣಕ್ಕಾಗಿ ನಾವು- ಜನ ಸಾಮಾನ್ಯರೆಲ್ಲರೂ ದಂಡ ತೆರಬೇಕಾಗುತ್ತಲೇ ಇದ್ದರೂ ಇದಕ್ಕೊಂದು ಅಂತಿಮ ಪರಿಹಾರ ಸಿಗದಿರುವುದರ ಬಗ್ಗೆ, ಅದರ ಹಿಂದಿನ ಕಾರಣದ ಬಗ್ಗೆ ಚಿಂತಿಸಬೇಕೆನಿಸುತ್ತದೆ. ನನ್ನ ಓರಗೆಯ ನೀವೆಲ್ಲ ಈ ಬಗ್ಗೆ ಏನು ಯೋಚಿಸುತ್ತಿದ್ದೀರಿ? ಕೇಳಬೇಕೆನಿಸುತ್ತದೆ.

ಆದರೇನು ಮಾಡಲಿ? ಈ ಬಗ್ಗೆ ನಿಮ್ಮಲ್ಲಿ ಕೇಳಿದರೆ ನೀವೇನು ಹೇಳುವಿರೋ ಎಂದುಕೊಂಡು ಸುಮ್ಮನಿದ್ದೇನೆ.

ಸರ್ವೇ ಭವನ್ತು ಸುಖಿನಃ ಸರ್ವೇ ಸನ್ತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯನ್ತು ಮಾ ಕಶ್ಚಿದ್ ದುಃಖ ಭಾಗ್ಭವೇತ್||  ಅಷ್ಟೇ.

ಅಂವ, ‘ನಗ್ಬೇಕೂ ಅಂದ್ರೆ ಮದ್ವೆ ಆಗ್ಬೇಕು ಸಾರ್!’ ಅಂದ!!

September 20, 2008 at 7:24 am | In ಕಡ ತಂದಿದ್ದು... | 11 Comments
Tags:

ಇದೊಬ್ಬ ಗೆಳೆಯ ಬರೆದಿದ್ದು. ಇಂಥದ್ದು ಬಹಳ ಬರೆದಿದಾನೆ. ಅದೆಲ್ಲ ಗಂಡಸ್ರ ಗೋಳಂತೆ. ಹಾಗಂದಿದಾನೆ. ನಿಮಗೂ ನನ್ ಬ್ಲಾಗಲ್ಲಿ ಹೆಂಗಸರ ಸುಖದುಃಖ ಓದಿಯೋದಿ ಬೇಜಾರ್ ಬಂದಿರಬಹುದಲ್ವ? ಅದಕ್ಕೆ ಇದನ್ನ ಇಲ್ಲಿ ಹಾಕ್ತಿದೇನೆ. ಮುಂದೆಯೂ ರೆಗ್ಯುಲರ್ರಾಗಿ ಹಾಕುವ ಇರಾದೆ ಇದೆ. ಆಗಲಾದ್ರೂ ನೀವು ನಂಗೆ ಕೊಟ್ಟಿರುವ ‘ಬಿರುದು- ಬಾವಲಿ’ಗಳನ್ನ ವಾಪಸ್ ತೊಗೊಳ್ತೀರೇನೋ ಅನ್ನುವ ದೂರದ ಆಸೆ ನಂದು!

~

ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ ಯಾವಾಗ್ಲೂ ಅನುಮಾನ. ನೀನು ಇಂಟೆಲಿಜೆನ್ಸ್ ಗ್ರೂಪ್ನಲ್ಲಿರಬೇಕಿತ್ತು” ಅಂತ ಕಿಚಾಯಿಸ್ತಲೇ ಇರ್ತಿದ್ರು. ನಾನೂ ಸುಮ್ಮನಾಗಿಬಿಡ್ತಿದ್ದೆ.

ಮೊನ್ನೆ ಮಾತ್ರ ನನ್ನಿಂದ ಸುಮ್ಮನಿರಲಿಕ್ಕಾಗಲೇ ಇಲ್ಲ. ಘಟ್ಟದ ಕಡಿದಾದ ರಸ್ತೆಯಲ್ಲಿ ನಮ್ಮ ಗಾಡಿ ದಾಟುವಾಗ ರಾತ್ರಿ ಒಂದೂವರೆ. ಜೊತೆಗಿದ್ದವರಿಗೆಲ್ಲ ಕಂಠಮಟ್ಟ ನಿದ್ದೆ, ಅಷ್ಟೇ ಎಣ್ಣೆ. ‘ ರಾತ್ರಿ ಎಲ್ರೂ ಮಲಗಿಬಿಡಬೇಡ್ರೋ, ಡ್ರೈವರ್ರೂ ತಾಚಿ ಮಾಡಿಬಿಡ್ತಾನೆ! ಆಮೇಲೆ, ಬೆಳಗ್ಗೆ ಶೂಟಿಂಗೂ ಇಲ್ಲ… ಷರಟಿಂಗೂ ಇಲ್ಲ!!’ ಅಂದಿದ್ರು ಪ್ರೊಡ್ಯೂಸರ್ರು. ಅದಕ್ಕೇ, ಘಟ್ಟದ ಬೋರು ಬೋರು ರಸ್ತೇಲೂ ಡ್ರೈವರ್ ಮಹೇಶಂಗೆ ಸಾಥ್ ಕೊಡೋದಕ್ಕೆ ನಾನು ಗಂಟು ಬಿದ್ದಿದ್ದೆ.

ಮೊಬೈಲ್ ರಿಂಗಾಯ್ತು. ಸರಿಯಲ್ಲದ ಹೊತ್ನಲ್ಲಿ ಹೆಂಡ್ತಿ ಕರೆ ಮಾಡೋಲ್ಲ. ಎಲ್ರೂ ಮಲಗಿರೋ ಹೊತ್ತು, ಕರರಕರೆ ಮಾಡೋದು ಸೆಟ್ ಅಪ್ ಗಳೇ! ಮಹೇಶನತ್ತ ತಿರುಗಿದೆ. ಅವನ ಕಂಗಳಲ್ಲಿ ಮುಚ್ಚಿಡಲೆತ್ನಿಸುವ ಭಯಾನಕ ಅಸಹನೆ. ನೀವೆಣಿಸೋ ಅಂಥಾದ್ದೇನಿಲ್ಲ ಬಿಡಿ! ಅನ್ನುವ ಭಾವ. ಆಮೇಲೆ ಭಾಳ ಹೊತ್ತು ಗಾಡಿ ಓಡಿಸ್ಲಿಲ್ಲ. ಸ್ವಲ್ಪ ದೂರದಲ್ಲೇ ಕಾರಿಂದ ಇಳಿದು, ಬದಿಗೆ ಬಂದು ನಿಂತ. ಪಾಪಿ! ಸಿಗರೇಟೂ ಸೇದದವನು!! ನಾನೇ ಒಂದು ದಮ್ ಎಳೆದು, ಅವನ ನಗುವಿನ ಹಿಂದಿದ್ದ ಅಳುವನ್ನ ಕೆಣಕಿದೆ. ಮಹೇಶ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.

ಮನೆಗೆಲಸಕ್ಕೆ ಬರತಿದ್ದ ತಾಯಮ್ಮನ ಮುದ್ದಾದ ಮಗಳು ಚಂದ್ರಿಯ ಬಗ್ಗೆ ಹೇಳಿದ. ಅವಳೊಡನೆ ತಾನು ನೋಡಿದ ಒಂದೇ ಒಂದು ಸಿನೆಮಾ ಬಗ್ಗೆ ಹೇಳಿದ. ಕೊನೆಗೆ, ಅಮ್ಮ ಸಾಯುವಾಗ ಅಣ್ಣನ ಮಗಳನ್ನೇ ಮದುವೆಯಾಗೋದಾಗಿ ಮಾತು ತೊಗೊಂಡಿದ್ದು,  ಅಮ್ಮ ಹೇಳಿದಾಳೆ ಅಂತ ಹಳ್ಳಕ್ಕೆ ಬೀಳ್ಬೇಡ   ಅಂತ ತಮ್ಮ ಹೇಳಿದ್ದು, ಚಂದ್ರಿಯ ಕ್ಷಮೆ ಕೇಳಿ ಮಾವನ ಮಗಳಿಗೆ ತಾಳಿ ಕಟ್ಟಿದ್ದು, ಎಲ್ಲವನ್ನೂ ಹೇಳಿಕೊಂಡ.  ಅವತ್ತು ಚಂದ್ರಿಯ ಕಂಗಳು ನಿಗಿನಿಗಿ ಕೆಂಡವಾಗಿದ್ದನ್ನ ನೆನಸ್ಕೊಂಡ.

ಎಲ್ಲ ಸರಿ ಹೋಯ್ತಲ್ಲ? ಮತ್ಯಾಕ್ ನೋವು? ಅಂದಿದ್ದಕ್ಕೆ, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ.

ಮೊದಲ ರಾತ್ರಿ ದಿವ್ಯ ರಾತ್ರಿ. ಆಸೆ- ಆಶೋತ್ತರಗಳ ಕಲಸುಮೇಲೋಗರ ಅದು. ಎಷ್ಟೋ ದಿನ ಅಮುಕಿಕೊಂಡಿದ್ದ ಕನಸು ಪೂರ್ಣವಾಗೋ ದಿನ. ಪೂರ್ ಮಹೇಶ! ಹಾಸಿಗೆ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತ ಕೂತ ಹೆಂಡತಿ…. ಮುಟ್ಟಿದರೆ ಚೀರುತಿದ್ದವಳು.  ಮಹೇಶ ಹೈರಾಣಾದ. ಮೊದಲ ರಾತ್ರಿ, ನೆಲದ ರಾತ್ರಿಯಾಯ್ತು. ಹಾಲು, ಸೇಬು, ಚೆಲ್ಲಾಪಿಲ್ಲಿಯಾದ ಹೂವಿನ ಹಾಸಿಗೆ, ಬೆಳಗಿನ ಜಾವದ ಮೈಮುರಿತ, ಎಲ್ಲವೂ ಕನಸಾಗಿಯೇ ಉಳಿಯಿತು.

ಅವನೂ ಕಾರಣ ಕೇಳಲಿಲ್ಲ. ಅವಳೂ ಹೇಳಲಿಲ್ಲ. ಬೆಳಗ್ಗೆ ಮನೆಯಿಂದ ಹೊರಟವನು ಸಂಜೆ ವಾಪಸು ಬರತಿದ್ದ. ‘ ನೀರು ಕಾಯಿಸ್ಲಾ? ಆಕೆ ಕೇಳ್ತಿದ್ದಳು. ಆಕಾಶ ನೋಡುತ್ತ ಹುಂ ಗುಟ್ಟುತ್ತಿದ್ದ.

ಊಟ? ಕೇಳಿದರೆ, ‘ಊಹೂಂ’ ಅಂತಿದ್ದ. ಎಣಿಸಿಟ್ಟರೆ ನಾಲ್ಕೇ ಮಾತು.

ಕಾರಿನ ಮಿರರಿನಲ್ಲಿ ಕೈಕೈ ಹಿಡಿದು ಪಿಸುಗುಟ್ಟುವ ಜೋಡಿಗಳು! ಕಂಡಾಗೆಲ್ಲ ಮಹೇಶನ ಜೀವ ಝಲ್ಲೆನ್ನುತ್ತಿತ್ತು. ತನ್ನ ರೋಮ ನಿಮಿರಿ ನಿಲ್ಲಿಸುವ ಅವಳಿಲ್ಲದೇ ಖಿನ್ನನಾಗುತ್ತಿದ್ದ. ಬರೀ ಪ್ರಶ್ನೆಗಳು. ನಿದ್ರೆಗೆ ಜಾರುವುದೊಂದೇ ಉತ್ತರವೆನಿಸಿತು.

ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದುಕೊಂಡವನಿಗೆ, ಅಸ್ಪಷ್ಟವಾಗಿ ಕೇಳ್ತಿತ್ತು. ಒಟ್ಟು ಮೂವತ್ತೆಂಟು ಮಾತ್ರೆಗಳು. ಬದುಕಿದ್ದೇ ಪುಣ್ಯ!

ಮನೇಲಿ ರಾದ್ಧಾಂತ. ನಾನು ಮೊದ್ಲೇ ಹೇಳಿರಲಿಲ್ವಾ? ಅಂದ ತಮ್ಮ.  ಅತ್ತೆ- ಮಾವ ಮಗಳಿಗೆ ಬುದ್ಧಿವಾದ ಹೇಳಿದರು.

ಇವಳನ್ನ ಮದುವೆಯಾಗಿ ನಾನು ಷಂಡನಾದೆ. ನಾಲ್ಕು ವರ್ಷವಾದ್ರೂ ಒಂದು ಮಗುವಿಲ್ಲ. ಎಲ್ರೂ ಛೇಡಿಸ್ತಿದ್ದಾರೆ ಅಂದ. ಅವಳು ಎದ್ದಳು. ಅಷ್ಟೇ ತಾನೆ? ಬಾ ಮಲಗ್ತೀನಿ. ಮಗು ಕೊಟ್ ಬಿಡು ಅಂದ್ಲು. ಯಾರಿಗೆಷ್ಟು ಅರ್ಥವಾಯ್ತೋ? ಸಮಸ್ಯೆ ತೀರ್ತು ಅಂತ ಚೆನ್ನಾಗಿ ಉಂಡು ಹೊರಟ್ರು.

ಅವತ್ತು ರಾತ್ರಿ… ಅದೇನು ಮೊದಲ ರಾತ್ರಿಯಲ್ಲ. ಅವನು ಮೊದಲೇ ಹಾಸಿಗೆ ಮೇಲೆ ಬಿದ್ದುಕೊಂಡ. ಅರ್ಧ ಮಂಚ ಆಕ್ರಮಿಸಿ. ಅವಳು, ಅವನ ಪಕ್ಕದಲ್ಲೇ ಬಿದ್ದುಕೊಂಡಳು. ಅವನಾಗಿಯೇ ಮುಟ್ಟಲಿಲ್ಲ. ಅವಳೇ ಕೆಣಕಿದಳು. ಮಗು ಬೇಕಂದ್ಯಲ್ಲಾ! ಕೊಡು ಬಾ!!

ಅದಕ್ಕೇ ಕಾಯ್ತಿದ್ದೋನಂತೆ, ಭೋರ್ಗರೆದ, ಬಸವಳಿದು ಬಿದ್ದ.

ನಾನು ಗಾಬರಿಯಾಗಿ ನಿಂತಿದ್ದೆ. ” ಸಾರ್… ಹೆಣವನ್ನೂ ಸಂಭೋಗಿಸಬಹುದು ಗೊತ್ತಾ? ” ನಾನು ಬಿಟ್ಟ ಕಣ್ಣು ಬಿಟ್ಟೇ ಇದ್ದೆ. ” ನಾನು ಅವತ್ತು ಅದನ್ನೇ ಮಾಡಿದ್ದು.” ” ಯಾವ ಜನ್ಮದ ಪುಣ್ಯವೋ? ನನ್ನ ಶ್ರಮದ ಒಂದು ಕಣ ಅವಳ ಗರ್ಭ ಸೇರ್ತು. ನಾನೂ ಅಪ್ಪನಾದೆ! ಹೆರಿಗೆಯಾಗಿ ಈವತ್ತಿಗೆ ಹದಿನೈದು ದಿನ. ಏನಾದ್ರೂ ಬೇಕಿದ್ರೆ ಫೋನ್ ಮಾಡು ಕಳಿಸಿಕೊಡ್ತೀನಿ ಅಂದಿದ್ದೆ. ಒಣ ಜಂಭ ಬೇರೆ. ಯಾರೂ ಇಲ್ಲದ ಹೊತ್ನಲ್ಲಿ ಹೀಗೆ ಕಾಲ್ ಮಾಡ್ತಾಳೆ.”

“ಎಲ್ಲಾ ಚಂದ್ರಿಯ ಶಾಪ ಸಾರ್”.

ಸಿಗರೇಟು ಮುಗಿದು ತುಟಿ ಸುಟ್ಟಿತು. 

ಮದುವೆ ಆಗ್ಬೇಕು ಸಾರ್. ಆಗ ಒಳಗಿನ ದುಃಖ ಕರಗಿಹೋಗತ್ತೆ. ನಗದೇ ಬೇರೆ  ದಾರಿಯೇ ಇರೋಲ್ಲ! ಅಂದವನು ನಗು ನಗುತ್ತಲೇ ಗಾಡಿ ಹತ್ತಿದ. ನಾನೂ ಕೂಡಾ. ಆದ್ರೆ ಈಗ, ಮಲಗ್ಬೇಕಂದ್ರೂ ನಿದ್ದೆಯೇ ಬರಲಿಲ್ಲ. . . . .

- ಚಂದಿರ 

ಮತೀಯ ದುರಂತಗಳ ಬಗ್ಗೆ – ನನ್ನದೊಂದು ಸತ್ತ ದನಿ

September 19, 2008 at 7:59 am | In ನಿಮ್ಮೊಂದಿಗೆ | 16 Comments
Tags: ,

ಇತ್ತೀಚೆಗೆ ಕೆಲವು ದಿನಗಳಿಂದ ಯಾಕೋ ಚಿಪ್ಪಿನೊಳಗೆ ಹುದುಗಿಹೋಗಬೆಕೆನ್ನುವ ಹಂಬಲ ಮತ್ತೆ ತಲೆ ಎತ್ತುತ್ತಿದೆ. ಥೇಟು ಆಮೆಯ ಹಾಗೆ. ಈ ‘ಸುಮ್ಮನಿದ್ದುಬಿಡಬೇಕು’ ಅನ್ನಿಸುವ ಕಾಯಿಲೆ ಕಾಡಬಾರದು ನೋಡಿ ಯಾರಿಗೂ.
ಇತ್ತೀಚೆಗೆ ದೆಹಲಿ ಸ್ಫೋಟವಾಯ್ತಲ್ಲ, ಎದೆ ಉರಿದುಹೋಗಿತ್ತು ಅವತ್ತು. ಹಾಗೆ ಉರಿದಿದ್ದನ್ನ ಬರೆದು ಬಿಸಾಡಬೇಕು ಅಂದ್ಕೊಂಡೆ. ಯಾಕೋ ಸಾಧ್ಯವೇ ಆಗಲಿಲ್ಲ. ಆಮೇಲೆ ಮತಾಂತರದ ಅವಾಂತರವಾಯ್ತಲ್ಲ, ಪ್ರಚೋದನೆ- ಪ್ರತಿಕ್ರಿಯೆಗಳಾದುವಲ್ಲ, ಆಗಲೂ ವಿಪರೀತ ಕಸಿವಿಸಿಯಾಯ್ತು. ಬರೀಬೇಕಂದುಕೊಂಡೆ. ಊಹೂಂ… ಆಗಲಿಲ್ಲ. ಒಳಗೊಳಗೆ ಎದ್ದ ಕೂಗು ಹಾಗೆಹಾಗೇ ಸತ್ತು ಹೋಗುತ್ತಿತ್ತು. ನಾನು ಮತ್ತೆ ಉರುಟುರುಟಿ ಸುತ್ತಿಕೊಳ್ಳುತ್ತ, ಚೆಂಡಿನಂತೆ…

ಇಷ್ಟಕ್ಕೂ ಧರ್ಮವನ್ನು ಮುಂದಿಟ್ಟುಕೊಂಡು ಜಗದಾದ್ಯಂತ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಎಷ್ಟೂಂತ ಬರೀಬಹುದು ಹೇಳಿ? ಓದಿಯೇ ಸಾಕಾಗಿಹೋಗಿದೆ. ಇವತ್ತು ಒಬ್ಬ ಸಾಮಾನ್ಯ ಹಿಂದೂ ಕೂಡ ಸಿಡಿಮಿಡಿಗುಟ್ಟುವ ಹಾಗಾಗಿರುವುದರ ಹಿಂದಿನ ಕಾರಣವನ್ನ ಯಾರಾದರೂ ಯೋಚಿಸಿದ್ದೀರಾ? ಖಂಡಿತ ಯೋಚಿಸಿಯೇ ಇರುತ್ತೀರಿ. ನಾನೂ ಯೋಚಿಸಿದ್ದೇನೆ. ಜಾತಿ ಗೀತಿಗಳ ತಂಟೆಗೇ ಹೋಗದ, ತೀರಾ ಅಮ್ಮ ಬಯ್ತಾಳೆ ಅಂತ ಊರಿಗೆ ಹೋಗುವಾಗ ಎರೆಡೆಳೆ ಜನಿವಾರ ಹಾಕ್ಕೊಳ್ಳುವ ತಮ್ಮ ಕೂಡ ‘ಬಡೀಬೇಕು ನನ್ ಮಕ್ಳಿಗೆ… ನಮ್ ಪಾಡಿಗೆ ನಮ್ಮನ್ನ ಇರೋಕೇ ಬಿಡಲ್ಲ ಅವ್ರು….” ಅಂದಾಗ ಹೌಹಾರಿಹೋಗಿದ್ದೆ.  ಕ್ರಿಸ್ ಮಸ್ಸಿಗೆ ಕೇಕು ತಂದು ಹಂಚುವ, ರಂಜಾನಿಗೆ ಶಾವಿಗೆ ಪಾಯಸ ಮಾಡುವ, ಕತ್ತೆ ನಿಂತರೂ ಕಾಂಗ್ರೆಸ್ಸಿಗೇ ಓಟು ಹಾಕುವ ಅಮ್ಮ ಕೂಡ ‘ಅತಿ ಆಯ್ತು ಕಣೇ ಇವ್ರದ್ದು, ಆ ಬೊಬ್ಬಿ ಹುಡುಗನ್ನ ಕೊಂದೇ ಬಿಟ್ರಲ್ಲ, ಅವ್ರ ಹುಡುಗೀನ ಲವ್ ಮಾಡ್ತಿದ್ದ ಅನ್ನೋ ಒಂದೇ ಕಾರಣಕ್ಕೆ… ಎಷ್ಟ್ ದಿನ ಸಹಿಸ್ಬೇಕೋ ಇವ್ರ ಕರ್ಮಾನ ನಾವಿನ್ನೂ! ಬೇರೆ ದೇಶ ಕೊಟ್ಟಾಗ ಬಾಯ್ಮುಚ್ಕೊಂಡ್ ತೊಲಗ್ ಬೇಕಿತ್ತು’ ಅನ್ನುತ್ತ ಅವಡುಗಚ್ಚಿದಳು.
ಬೇರೆ ಯಾರೋ ದೂರದವರನ್ನ ಎಳೆದು ತರೋದು ಬೇಡ ಅಂತಲೇ ನಾನು ನನ್ನ ಹತ್ತಿರದ ಉದಾಹರಣೆಗಳನ್ನ ಕೊಟ್ಟಿದೇನೆ. ಇಂತಹ ಹಲವಾರು ಜನರ ಒಳಗುದಿಯನ್ನು ನೋಡುತ್ತ ನೋಡುತ್ತ ಮಧ್ಯಮವರ್ಗದ ಹಿಂದೂ ಮಾನಸಿಕತೆಯನ್ನ ಅರಗಿಸ್ಕೊಳ್ಳುವ ಯತ್ನ ಮಾಡ್ತಿದೇನೆ.

ಈಶಾನ್ಯ ರಾಜ್ಯಗಳಲ್ಲಿ ಸ್ವಯಂಸೇವಾ ಕಾರ್ಯಕರ್ತರೊಂದಷ್ಟು ಜನ ಕೆಲಸ ಮಾಡ್ತಿದಾರೆ. ಸಾವರ್ಕರ್, ‘ಮತಾಂತರದಿಂದ ರಾಷ್ಟ್ರ್‍ಆಂತರವಾಗತ್ತೆ’ ಎಂದು ಮುನ್ನುಡಿದಿದ್ದು ಅಲ್ಲಿ ನಿಜವಾಗ್ತಿದೆ. ನಾಗಾಲ್ಯಾಂಡಿನಲ್ಲಿ ‘ಇಂಡಿಯನ್ ಡಾಗ್ಸ್ ನಾಟ್ ಅಲೋವ್ಡ್’ ಅಂತ ಬೋರ್ಡು ಹಾಕ್ಕೊಂಡಿದಾರೆ. ನಮ್ಮ ನಾಡು ಕ್ರಿಸ್ತನಿಗೆ ಸೇರಿದ್ದು ಅಂತಿದಾರೆ.
ನಮ್ಮ ಪರಿಚಿತರೊಬ್ಬರು ಅಲ್ಲಿ ಕೆಲಸ ಮಾಡಿ ವಾಪಸು ಬಂದರು. ಜೊತೆಗಿಬ್ಬರು ಹುಡುಗರನ್ನ ಕರೆತಂದರು. ಒಬ್ಬನ ಹೆಸರು ‘ಚಿ ಮುಂಗ್’ ಅಂತ ನೆನಪು. ಅವರನ್ನಿಲ್ಲಿ ಕಾಲೇಜಿಗೂ ಸೇರಿಸಿದರು. ಒಬ್ಬ ಹೇಗೋ ಅಡ್ಜಸ್ಟ್ ಆದ. ಮತ್ತೊಬ್ಬ ಮಾತ್ರ, ‘ನಾನು ವಾಪಸು ಹೋಗಿ ಮತಾಂತರವಾಗ್ತೇನೆ. ಇಲ್ಲಿ ಓದೋಲ್ಲ’ ಅಂತ ಹಟ ಹಿಡಿದ. ಕಾರಣ ಕೇಳಿದರೆ, ‘ಹಿಂದೂಗಳಲ್ಲಿ ಒಗ್ಗಟ್ಟಿಲ್ಲ, ಜಾತೀಯತೆ ಇದೆ, ಮೇಲು ಕೀಳಿದೆ, ಈ ಧರ್ಮದ ದೇವತೆಗಳೆಲ್ಲ ಕ್ರೂರಿಗಳು, ಲಂಪಟರು…’ ಇತ್ಯಾದಿ ಪಾಠ ಒಪ್ಪಿಸಿದ.
ಖಂಡಿತ ಅಂವ ಹಿಂದೂ ಶಾಸ್ತ್ರ ಗ್ರಂಥಗಳನ್ನ ಓದಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬೈಬಲ್ ಪರಿಚಯವೇ ಅವನಿಗಿರಲಿಲ್ಲ ಅನ್ನೋದು ಸ್ಪಷ್ಟವಾಯ್ತು. ಇದನ್ನ ವಿವರವಾಗಿ ಹೇಳುವ ಅಗತ್ಯವಿಲ್ಲ ಅಲ್ಲವೆ?

ಮಾತೆತ್ತಿದರೆ ಭಜರಂಗಿಗಳು (ಸಮಜಾಯಿಷಿ- ಐ ಹೇಟ್ ದೆಮ್), ವಿಹಿಂಪ, ಸಂಘ ಪರಿವಾರವನ್ನು ದೂರುವ ಮಂದಿಗೆ ಒರಿಸ್ಸಾ ಘಟನೆ ಪಾಠ ಕಲಿಸಿರಬೇಕು(ಈ ಸಂದರ್ಭದಲ್ಲಿ ಮಡಿದವರ ಬಗ್ಗೆ ತೀವ್ರ ಸಂತಾಪವಿದೆ). ಅಲ್ಲಂತೂ ಸಂಘಿಗಳ ಗಂಧ ಗಾಳಿಯೂ ಇಲ್ಲ. ಅಲ್ಲಿ ಕ್ರೈಸ್ತರ ವಿರುದ್ಧ ಸೆಟೆದು ನಿಂತಿದ್ದು ಬುಡಕಟ್ಟು ಜನಂಗದ, ಗುಡ್ಡಗಾಡು ಪ್ರದೇಶದ ಜನ ಸಾಮಾನ್ಯರು! ಅವರ ಪಾಲಿಗೆ ಹಿಂದುತ್ವ ಒಂದು ಅಮಲಲ್ಲ. ಅದು ಶ್ರದ್ಧೆ, ನಂಬಿಕೆ.

ಅನಂತ ಮೂರ್ತಿಯವರ ಅರ್ಟಿಕಲ್ ಗಳನ್ನ ನೋಡಿದೆ. ಕೆಂಡಸಂಪಿಗೆಯಲ್ಲಿ, ಸಂಪದದಲ್ಲಿ, ಋಜುವಾತುವಿನಲ್ಲಿ. ದೊಡ್ಡವರು. ಅವರಿಗೆ ನಾವೇನೂ ಕಮೆಂಟ್ ಮಾಡಬಾರದು. ಪಾಪ. ಅವರಿನ್ನೂ ಗುಜರಾತ್ ಕನವರಿಕೆಯನ್ನೇ ಬಿಟ್ಟಿಲ್ಲ. ಅವರಿಗೆ (ಬಹುಶಃ) ಗ್ರೀನ್ ಕಾರಿಡರ್ ಸಂಗತಿ ಗೊತ್ತಿಲ್ಲ. ಯಾವುದೇ ವ್ಯಕ್ತಿ ಕ್ಷಣಿಕ ಆಮಿಷಕ್ಕೆ ಬಿದ್ದು ಮತಾಂತರಗೊಂಡರೆ ಅದರಿಂದಾಗುವ ವೈಯಕ್ತಿಕ- ಸಾಮಾಜಿಕ ನಷ್ಟದ ಬಗ್ಗೆ ಅರಿವಿಲ್ಲ. ಇವತ್ತು ನೆನ್ನೆ ಕಣ್ ಬಿಡುತ್ತಿರುವ ನಾವು ಹಾಗೆ ಅಪವಾದ ಮಾಡಿದರೆ ದೊಡ್ಡವರೆಲ್ಲ ಏನನ್ನುತ್ತಾರೋ?

ಅದಕ್ಕೇ,
ಏನೂ ಬರೆಯೋದು ಬೇಡವೆಂದು ಸುಮ್ಮನಾಗ್ತಿದೇನೆ. ಯಾರೇನು ಅಂದುಕೊಳ್ತಾರೋ ಅಂತ ಹಿಂಜರಿದು ಮುಖವಾಡ ಹಾಕ್ಕೊಳ್ತಿದೇನೆ.  ಬಚಾವಾಗಲು ಹೆಣಗುವ ಮತ್ತದೇ ಆಮೆಯಂತೆ.

ಕೌಲೇದುರ್ಗದ ಕಥೆ

September 16, 2008 at 5:04 am | In ನೆನಪು | 5 Comments
Tags: , ,

ಮತ್ತೆ ಇದೊಂದು ಹಳೆಯ ಬರಹ. ಸರಿಯಾಗಿ ಒಂದು ವರ್ಷ ಹಿಂದೆ ಬರೆದಿದ್ದು. ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿ ಎಂಟು ತಿಂಗಳು ಕಳೆದಿವೆ. ಆದರೂ ಕವಲೇದುರ್ಗದ ನೆನಪು ತಾಜಾ ಆಗಿದೆ. ಕಾಲು ಮತ್ತೆ ಮತ್ತೆ ಅತ್ತ ಎಳೀತಿದೆ. ನಾವು ಆಗೆಲ್ಲ ಕೊಡಚಾದ್ರಿ, ಬರ್ಕಣ, ಜೋಗಿ ಗುಂಡಿ, ಸಿರಿಮನೆ ಜಲಪಾತ ಅಂತ ಅದೆಷ್ಟು ಸುತ್ತಾಡ್ತಿದ್ದೆವು ಗೊತ್ತಾ? (ಹಳೇ ಹಪ್ಪಟ್ಟು ಕಥೆ ಬಿಡಿ. ಹನ್ನೆರಡು- ಹದಿಮೂರು ವರ್ಷ ಹಿಂದಿನದು!) ಅದನ್ನೆಲ್ಲ ಬರೆಯುವ ಆಸೆ. ಫೋಟೋಗಳಿಲ್ಲ ಅನ್ನೋದು ಕೊರಗು. ಮತ್ತೀಗ ಅಲ್ಲೆಲ್ಲ ನಕ್ಸಲರ ಪಾರುಪತ್ಯ ಇರೋದ್ರಿಂದ ಪ್ರವಾಸ ಕೂಡ ಸುಲಭವಲ್ಲ.

ಇರಲಿ. ಕವಲೇದುರ್ಗ ಓದಿ, ಹೇಗನಿಸಿತು ಹೇಳಿ. ಪ್ರವಾಸ ಕಥನ ಹಳೆ ನೆನಪಿನ ಆಧಾರದ ಮೇಲೆ ಬರೀಬಹುದಾ? ಹೇಳಿ. ನನಗೆ ನಿಮ್ಮ ಸಲಹೆ ಬೇಕು.

ಣ್ಣ ಸೈಕಲ್ಲೊರೆಸಿಟ್ಟುಕೊಂಡು ಬ್ಯಾಟು ಬಾಲು ಕ್ಯಾರಿಯರ್ರಿಗೆ ಸೆಕ್ಕಿಸಿ ತಯಾರಾಗಿ ನಿಂತಿದ್ದ. ಐದಲ್ಲ, ಹತ್ತಲ್ಲ, ಬರೋಬ್ಬರಿ ಇಪ್ಪತ್ತು ಕಿಲೋಮೀಟರು ದೂರ ಅಂವ ಸೈಕಲ್ಲಲ್ಲಿ ಹೊರಟಿದ್ದಕ್ಕೆ ಅಪ್ಪ ರೇಗಾಡಲು ಶುರುವಿಟ್ಟಿದ್ದರು.

‘ಹೆಣಾ ಹೊರಲಿಕ್ಕೆ ಹೋಗ್ತಾನಂತೇನು ಅಂವ ನಗರಕ್ಕೆ?’

‘ಇಲ್ಲ, ಕ್ರಿಕೆಟ್ ಆಡಕ್ಕೆ’ಅಪ್ಪನ ಕೂಗಿಗೆ ಅಣ್ಣ ಹೊಸಿಲ ಮೇಲೆ ನಿಂತು ತಣ್ಣಗೆ ಉತ್ತರಿಸಿದ್ದ.

‘ಹೈದರಾಲಿ ಧೋಕಾ ಮಾಡಿ ನಗರ ಸಂಸ್ಥಾನದ ಮ್ಯಾಲ ಏರಿ ಬಂದಾಗ, ಭಾಳ ದೊಡ್ ಯುದ್ಧ ಆತು. ಮನೆ ಮನೆ, ಕೇರಿಕೇರಿಯಿಂದ ಯುವಕ್ರು, ಮುದುಕ್ರು ಅನ್ದೆ ಎಲ್ರೂ ದಂಡಿಗೆದ್ರು. ಯುದ್ಧದಾಗ್ ಎಷ್ಟ್ ಮಂದಿ ಸತ್ರು ಅಂದ್ರ… ಸತ್ ಸೈನಿಕರ ಹೆಣಾ ಹೊರ್ಲಿಕ್ಕೂ ಹೊರಗಿಂದ ಜನಾನ್ ಕರೆಸ್ಬೇಕಾತು!’ಮಲೆನಾಡಿಗರದಲ್ಲದ ಭಾಷೆಯಲ್ಲಿ ಮಹತ್ತಿನ ಮಠದ ಬಳಿ ಇದ್ದೊಬ್ಬ ಅಯ್ಯ, ಸಂಜಯನ ಕಣ್ಣು ಮಾಡ್ಕೊಂಡು ಏನನ್ನೋ ಕಾಣ್ತಿರೋರ ಹಾಗೆ ಹೇಳ್ತಲೇ ಹೋದರು.durga1.jpg

‘ಕಾವಲು ದುರ್ಗ.’ ಅದು ಹೈದರಾಲಿ ಇಟ್ಟ ಹೆಸರು. ಹೆಣಾ ಹೊರಲಿಕ್ಕೂ ದಿಕ್ಕಿಲ್ಲದ ಹಾಗೆ ನಗರದ ಗಂಡಸರು ವೀರ ಮರಣ ಕಂಡಾಗ ಆತ ತನ್ನ ಸೈನ್ಯವನ್ನು ಅಲ್ಲಿಗೆ ತಂದು, ದುರ್ಗದ ಕೋಟೆಯಲ್ಲಿ ಕಾವಲಿಗಿರಿಸಿದ್ದ. ಕೌಲೇದುರ್ಗ ಅಂತಲೇ ಕರೆಸ್ಕೊಳ್ತಿದ್ದ ಕೋಟೆಯನ್ನ ಕಾವಲು ದುರ್ಗ ಅಂತ ಕರೆದ. ಆದರೇನಂತೆ? ಇವತ್ತಿಗೂ ಜನರ ಬಾಯಿಗೆ ಅದು, ಕೌಲೇದುರ್ಗವೇ. 

 ಆದರೆ ದುರ್ಗಕ್ಕೆ ಹೊಂದಿಕೊಂಡಿದ್ದ ನಗರ ಮಾತ್ರ ಇತ್ತೀಚಿನ ಎಲ್ಲ ಮಲೆನಾಡಿನ ಹಳ್ಳಿಗಳ ಹಾಗೆ ಯುವಕರನ್ನ ಪಟ್ಟಣಗಳಿಗೆ ಅಟ್ಟುತ್ತ, ಬಿದ್ದುಹೋದ ಅಡಿಕೆ ರೇಟಿಗೆ ಹಲುಬುತ್ತ, ಕೈಕೊಟ್ಟ ಶುಂಠಿ, ಉರುಳಾದ ವೆನಿಲ್ಲಾಗಳನ್ನ ಶಪಿಸ್ತಾ, ಮುಟ್ಟುನಿಂತ ಹೆಂಗಸಿನ ಹಾಗೆ ವಟಗುಟ್ಟುತ್ತ ನಿಂತಿದೆ. ಇಂಥಾ ನಗರವಲ್ಲದ ನಗರಕ್ಕೆ ಸೈಕಲ್ಲು ತುಳ್ಕೊಂಡು ಹೋದ ಅಣ್ಣ, ನೆಟ್ಟಾನೇರ ಮನೆಗೆ ಬಂದನಾ? ಇಲ್ಲ. ಅಂವ ಸುತ್ತಾಡಿ ಬಂದು ಬಾಗಿಲು ತಟ್ಟೋ ಹೊತ್ತಿಗೆ ಒಂದೂವರೆ ದಶಕದ ಹಿಂದಿನ ರಾತ್ರಿ ಒಂಭತ್ತು ಗಂಟೆ! ಹಾಗೆ ಬಂದವನ ಮೈ-ಕೈ ಎಲ್ಲ ಕೆಸರು ಕೆಸರು. ಮುಖ-ಮೂತಿ ತರಚು. ‘ತೆಗ್ದಾ ನನ್ ಮಗ ಮರ್ಯಾದೆಯ. ಯಾರ್ ಹತ್ರವೋ ಕಿತ್ತಾಡ್ಕಂಡು ಬಂದಾನ್ನೋಡು…’ ಅಣ್ಣನ ಗಾಯಕ್ಕೆ ಅಪ್ಪನ ಉಪ್ಪು. ತಗೋ! ಶುರುವಾಯ್ತು ಹೈದರಾಲಿ ಯುದ್ಧ!! ಅಮ್ಮ, ವೀರಮ್ಮಾಜಿಯ ಹಾಗೆ ನಡುವೆ ನುಗ್ಗಿ, ಅಪ್ಪನ ಬಲಕ್ಕೆ ಸೋತು ಹೈರಾಣಾದಳು.

ವೀರಮ್ಮಾಜಿ, ಕೆಳದಿ ಸಂಸ್ಥಾನದ ಕೊನೆಯ ರಾಣಿ. ಹೈದರಾಲಿಯನ್ನ ಧೈರ್ಯದಿಂದ ಎದುರಿಸಿ, ಕೊನೆಗೆ ಕೌಲೇದುರ್ಗದ ಕೋಟೆಯಲ್ಲಿ ರಕ್ಷಣೆಯಲ್ಲಿ ಆಶ್ರಯ ಪಡೆದಿದ್ದಳು. ಹೈದರ್ ಆ ಕೋಟೆಯನ್ನ ವಶಪಡಿಸಿಕೊಂಡಿದ್ದು ಅವಳಿಂದ್ಲೇ. ಇವಳಿಗೂ ಹಿಂದೆ, ಕೆಳದಿಯರಾಣಿ ಚೆನ್ನಮ್ಮಾಜಿ ಇದೇ ಕೋಟೆಯಲ್ಲಿಯೇ ಪಟ್ಟಾಭಿಷಿಕ್ತಳಾಗಿದ್ದಳು. ಉಧೋ ಅಂತ ನಡೆದೂ ನಡೆದೂ ದುರ್ಗ ಹತ್ತುತ್ತ ಎಂಥದೋ ಸಾಹಸ ಮಾಡುತ್ತಿದ್ದೇವನ್ನೋ ಹಮ್ಮಿಗೆ ಬಿದ್ದಿದ್ದ ನಮಗೆ, ಇದೇ ಕಾಡುಕೋಟೆಯೊಳಗೆ ಖಡ್ಗ ಹಿಡಿದು ಕಾದಾಡಿದ ಹೆಣ್ಣುಮಕ್ಕಳ ಕಥೆ ಕೇಳಿ ಮುಖ ಮುಚ್ಚಿಕೊಳ್ಳುವಷ್ಟು ನಾಚಿಕೆಯಾಯ್ತು. ಇದರಿಂದ ಇನ್ನೂ ಬೀಗಿದ ಅಯ್ಯ, ಅವರ ಹೋರಾಟದ ಕಥೆಯನ್ನು ಎಳೆಳೆಯಾಗಿ ಬಿಚ್ಚಿಟ್ಟರು.

ಹಾಗೆ ಅವತ್ತು ಅಣ್ಣ ರಗಳೆ ಎಬ್ಬಿಸಿ ಹೋಗಿಬಂದಿದ್ದನಲ್ಲ, ಬಂದು ಬಯ್ಸಿಕೊಂಡವ ಹಾಸಿಗೆ ಮೇಲೆ ಕುಂತು ಉಡಾಫೆ ಕಣ್ಣು ಎಸೀತಾ ಹೇಳಿದ್ದ. ಹೆಂಗೆ ಛಾಕಾಛಕಾ ಹತ್ತಿಳಿದ್ವಿ ಗೊತ್ತಾ ದುರ್ಗಾನ? ಕ್ರಿಕೆಟ್ಟಿನ ನೆವದಲ್ಲಿ ಹಾಳು ಹುಡುಗರು ನಿಧಿ ಹುಡುಕಲಿಕ್ಕೆ ಹೋಗಿದ್ದರು!

ಇವತ್ತಿಗೂ ನಗರದಲ್ಲಿ ಮನೆ ಕಟ್ಟುವಾಗ, ಬಾವಿ ತೋಡುವಾಗ ಬಂಗಾರ ಸಿಗುತ್ತಲೇ ಇರತ್ತಂತೆ. ಹಳೆ ಮನೆ ಗೋಡೇಲಿ, ಫೌಂಡೇಷನ್ನಲ್ಲಿ ಚಿನ್ನದ ನಾಣ್ಯ ಮುಚ್ಚಿಡ್ತಿದ್ದರಂತೆ! ಕೇಳಿದ್ದಕ್ಕೆ ಅಯ್ಯ ನಕ್ಕರು. ಅಷ್ಟೇ.

ಈ ಕೌಲೇ ದುರ್ಗ ಇರೋದು ತೀರ್ಥಹಳ್ಳಿಯಿಂದ ೨೦ ಕಿಲೋಮೀಟರು ದೂರದಲ್ಲಿ. ಸಹಜವಾಗೇ ದುರ್ಗಮವಾದ, ಕಡಿದಾದ ಬೆಟ್ಟಗುಡ್ಡಗಳ ಸ್ಥಳ ಇದು. ಈ ದುರ್ಗದ ಕೆಳಗಿರೋ ’ಕೌಲೆ’ ಅನ್ನುವ ಹಳ್ಳಿಯಿಂದಾಗಿಯೇ ಅದಕ್ಕೆ ಕೌಲೇದುರ್ಗ ಅನ್ನೋ ಹೆಸರು ಬಂದಿದ್ದು. ಪುರಾಣೇತಿಹಾಸದ ಕಾಲದಲ್ಲಿ ಇಲ್ಲಿನ ಅರಣ್ಯಗಳನ್ನ ’ಕಾಮ್ಯಕ ವನ’ ಅಂತ ಕರೆಯಲಾಗ್ತಿತ್ತಂತೆ. ಅಂದಹಾಗೆ, ಕೌಲೇದುರ್ಗವನ್ನ ಕೆಲವು ಶಾಸನಗಳಲ್ಲಿ ’ಭುವನಗಿರಿದುರ್ಗ’ ಅಂತಲೂ ಕರೆಯಲಾಗಿದೆ.  ಇದು, ಕೆಳದಿಯ ಅರಸರು ಇಟ್ಟ ಹೆಸರು.

ಅಂದ ಹಾಗೆ, ಮೊದಲ ಬಾರಿಗೆ ಕೌಲೇದುರ್ಗದ ಮೇಲೊಂದು ಕೋಟೆ ಕಟ್ಟಿಸಿದ್ದು ಬೆಳಗುತ್ತಿ ನಾಡಿನ ಪಾಳೇಗಾರರು. ನಂತರ ಅದು ಕೌಲೆ ಗ್ರಾಮಾಧಿಕಾರಿಗಳಾದ ತೊಲೆತಮ್ಮ-ಮುಂಡಿಗೆ ತಮ್ಮ ಅನ್ನುವ ಸಹೋದರ ಸ್ವಾಧೀನಕ್ಕೆ ಬಂದು, ಅವರು ಕೋಟೆಯನ್ನ ಮತ್ತಷ್ಟು ಭದ್ರಪಡಿಸಿದರು. ಇದು, ಪಾಳೇಗಾರರಿಂದ ವಿಜಯನಗರದ ಕೈಗೆ, ಅವರ ನಂತರದ ಅರಾಜಕತೆಯ ಕಾಲದಲ್ಲಿ ಕೆಳದಿ ಅರಸರ ಕೈಗೆ, ಅವರಿಂದ ಹೈದರನ ವಶಕ್ಕೆ, ಅವನ ಮಗ ಟಿಪ್ಪುವಿನಿಂದ ಆಂಗ್ಲರ ತೆಕ್ಕೆಗೆ ದಾಟಿ ದಾಟಿ, ಭಾರತದೊಡನೆ ತಾನೂ ಸ್ವತಂತ್ರವಾಯ್ತು.

ಕೌಲೇದುರ್ಗ ಕೋಟೆ, ಚಿತ್ರದುರ್ಗದ ಕೋಟೆಯಂತೇ ಏಳು ಸುತ್ತಿನದು. ಸುರಕ್ಷತೆ ಮಾತ್ರವಲ್ಲ ನಿರ್ಮಾಣದ ದೃಷ್ಟಿಯಿಂದಲೂ ಭರ್ಜರಿಯಾಗಿ ಕಾಣುತ್ತದೆ ಇದು. ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ. ದುರ್ಗದ ಬೆಟ್ಟಕ್ಕೆ ಹೋಗುವಾಗ ನಮಗೆ ಮೊದಲು ಸಿಗೋದು ಮಹಾಮಹತ್ತಿನ ಮಠ. ಕೌಲೇದುರ್ಗದ ಇತಿಹಾಸಕ್ಕೂ, ಮಠಕ್ಕೂ , ಕೆಳದಿ ಸಂಸ್ಥಾನಕ್ಕೂ ಬಹಳ ಹಿಂದಿನ ನಂಟು. 

ದುರ್ಗದ ಕಥೆ ಹೇಳೋದೆಂದರೆ, ಮಹತ್ತಿನ ಮಠದವರಿಗೆ ಎಲ್ಲಿಲ್ಲದ ಹುರುಪು. ಅಲ್ಲಿನ ಸ್ವಾಮೀಜಿ, ಕೌಲೇದುರ್ಗದ ಇತಿಹಾಸದ ಮೇಲೆ ಬೆಳಕುಚೆಲ್ಲುವಂಥ ಕಾರ್ಯಕ್ರಮಗಳನ್ನ ನಿರಂತರವಾಗಿ ಹಮ್ಮಿಕೊಳ್ತಿರ್ತಾರೆ.ಈ ಮಠ ದಾಟಿ ಮುಂದೆ ಬಂದರೆ, ಗ್ರಾಮದ ಸುತ್ತ ಇರೋ ರಕ್ಷಣಾಗೋಡೆಗಳನ್ನ ನೋಡಬಹುದು. ಇವು ಕೂಡ ಈಗಲೋ ಆಗಲೋ ಅಂತ ಮೃತ್ಯುಂಜಯ ಜಪ ಮಾಡ್ತಾ ತಮ್ಮ ಪಾಳಿಗೆ ಕಾದು ಕುಂತಿವೆ. ದುರ್ಗದ ಸುತ್ತಲೂ ಹರಡಿನಿಂತ ಕರಿಕಲ್ಲಿನ ಗೋಡೆಗಳು ಒನಕೆಗಾತ್ರದ ಮಲೆಮಳೆಗೆ ಸವಾಲು ಹಾಕೋಹಾಗೆ ಇಪ್ಪತ್ತೈದು-ಮೂವತ್ತು ಅಡಿ ಎತ್ತರಕ್ಕೆ ಎದೆಯುಬ್ಬಿಸಿ ನಿಂತಿವೆ. ಆದರೂ ಎಷ್ಟೂ ಅಂತ ತಡೆದಾವು? ಶತಶತಮಾನಗಳ ಪೆಟ್ಟು, ಕಗ್ಗಲ್ಲನ್ನೂ ಮೆದುವಾಗಿಸುತ್ತ ನಡೆದಿದೆ.shikharesvarada-hebbagilu.jpgಇಲ್ಲಿಂದ ಮುಂದೆ, ಉರುಟು ಕಲ್ಲುಗಳ ಏರುದಾರಿ. ಹೀಗೇ ಹತ್ತುತ್ತ ಹೆಚ್ಚೂಕಡಿಮೆ ಒಂದು ಕಿಲೋಮೀಟರ್ ದೂರ ಬಂದರೆ, ಕೋಟೆಯ ಮೊದಲ ಸುತ್ತಿನ ಹೆಬ್ಬಾಗಿಲು ಬಾಯಿ ಕಳ್ಕೊಂಡು ಸ್ವಾಗತಕ್ಕೆ ಸಜ್ಜಾಗಿ ನಿಂತಿರುತ್ತೆ.

ಈ ಹೆಬ್ಬಾಗಿಲ ಮುಂದೊಂದು ಜಗಲಿ, ಕಾವಲುಗಾರರ ಗೂಡು. ಹೀಗೇ… ಒಂದು, ಎರಡು, ಮೂರು, ನಾಲ್ಕು, ಐದನೇ ಸುತ್ತಿನವರೆಗೂ ತಲೆ ಎತ್ತಿ ನಿಂತಿರುವ ಹೆಬ್ಬಾಗಿಲುಗಳು. ಈ ಕೋಟೆ ಕೈಚಾಚಿ ನಿಂತ ಹಾದಿಯುದ್ದಕ್ಕೂ ದಟ್ಟ ಕಾಡು, ಹಚ್ಚ ಹಸಿರು. ಇದರ ನಡುವಲ್ಲಿ ಕುದುರೆ, ಆನೆ, ಪದಾತಿದಳಗಳಿಗೆ ಸಾಗಲು ಸುಲಭವಾಗುವಂತೆ ದುಂಡುಕಲ್ಲಿನ ಏರು ರಸ್ತೆ.

ಮೂರನೇ ಸುತ್ತಿನ ಹೆಬ್ಬಾಗಿಲ ಮುಂದೊಂದು ನಗಾರಿ ಕಟ್ಟೆ. ಆಗೆಲ್ಲ ಯುದ್ಧಕ್ಕೆ ಮುಂಚೆ, ಅಥವಾ ಅಪಾಯ ಸೂಚನೆ ನೀಡಲಿಕ್ಕಾಗಿ ನಗಾರಿ ಬಡಿತಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನು, ನಾಲ್ಕನೇ ಸುತ್ತಿನ ನಂತರ ಕೊಂಚ ಸುಗಮ ಹಾದಿ. ಮೂರು ಮತ್ತು ನಾಲ್ಕನೇ ಸುತ್ತುಗಳ ನಡುವೆ ಒಂದಷ್ಟು ದೂರ ಮೆಟ್ಟಿಲುಗಳೂ ಇವೆ.ಐದನೇ ಸುತ್ತಿನ ಹೆಬ್ಬಾಗಿಲು ದಾಟಿ ಬಂದ್ರೆ, ಸೀದಾ ಅರಮನೆ ಅಂಗಳದಲ್ಲಿ ಬಂದು ನಿಲ್ತೀವಿ. ಈ ಅರಮನೆಯ ಹತ್ತಿರವೇ ಒಂದು ತೋಪುಖಾನೆ ಇದೆ. ಬಲ ಭಾಗದಲ್ಲಿ ಸ್ವಲ್ಪ ಮೇಲೇರಿ ಹೋದ್ರೆ,  ಶಿಖರೇಶ್ವರ ದೇವಸ್ಥಾನ ಸಿಗುತ್ತೆ. ಇಲ್ಲಿಂದ ಸೂರ್ಯಾಸ್ತ ನೋಡಲಿಕ್ಕೆ ಬಲು ಸೊಗಸು. ಹೀಗೇ ಇನ್ನಷ್ಟು ದೇವಾಲಯಗಳನ್ನ ನಾವು ಕೋಟೆಯುದ್ದಕ್ಕೂ  ನೋಡಬಹುದು.

 ಆದ್ರೆ, ಇಷ್ಟೆಲ್ಲ ನಿರ್ಮಾಣಗಳಾಗಿದ್ದು ಮೂಲ ನಿರ್ಮಾಣಕಾರರಿಂದಲ್ಲ, ಕೆಳದಿಯ ಅರಸರಿಂದ. ಅದರಲ್ಲೂ ಹದಿನಾರನೆಯ ಶತಮಾನದಲ್ಲಿ ಆಳಿದ ವೆಂಕಟಪ್ಪ ನಾಯಕನಿಂದ. ಈತ, ಪಾಳೆಯಗಾರರಿಂದ ಈ ಕೋಟೆಯನ್ನು ಗೆದ್ದುಕೊಂಡಿದ್ದ. ಅಂದಿನ ಆಳರಸರಿಗೆ ಈ ದುರ್ಗಮ ಸುಂದರಿಯೊಂದು ವೀರಪಣ! ವೆಂಕಟಪ್ಪ ನಾಯಕ ಬಹಳ ಬುದ್ಧಿವಂತ ಅರಸ. ಬೆಟ್ಟದ ಮೇಲೆ ನೀರು ಸಂಗ್ರಹಿಸೋ ತೊಟ್ಟಿಗಳನ್ನ ಕಟ್ಟಿಸಿ, ಅಲ್ಲಿಂದ ಕಾಲುವೆ ಮೂಲಕ ಅದು ದೇವಸ್ಥಾನಕ್ಕೆ, ಅರಮನೆಗೆ ಹರಿದು ಬರುವಂತೆ ಏರ್ಪಾಟು ಮಾಡಿಸಿದ್ದ. ಕೋಟೆಯ ಹೊರಗೆ ಅಗ್ರಹಾರ ಕಟ್ಟಿಸಿ, ಅಲ್ಲೊಂದು ಸಮುದಾಯ ಭವನ ಕಟ್ಟಿಸಿದ್ದ. ಅದೇ ಕಲ್ಯಾಣ ಮಹಲ್. ಇದೊಂದು ಅತಿ ಸುಂದರವಾದ ಕಟ್ಟಡವಾಗಿದ್ದು, ಇಂದು ಅದರ ಅವಶೇಷಗಳನ್ನಷ್ಟೆ ನೋಡಬಹುದು.

ಇವಷ್ಟೇ ಅಲ್ಲದೆ, ಈ ದುರ್ಗದ ಒಡಲಲ್ಲಿ ಇನ್ನೂ ಸಾಕಷ್ಟು ದೇವಸ್ಥಾನಗಳು, ಶಾಸನಗಳು, ಸಮಾಧಿಗಳು ಇವೆ. ಕೋಟೆಯ ಹೊರಗೆ, ಅಂದಿನ ಅರಸರು, ಕಿಲ್ಲೇದಾರರು ಕಟ್ಟಿಸಿದ ಕೆರೆಗಳಿದ್ದು, ಅವು ಇಂದಿಗೂ ಉಪಯುಕ್ತವಾಗಿವೆ. ಹೀಗೇ ದುರ್ಗದ ಅಚ್ಚರಿಗಳನ್ನ ನಮ್ಮೆದುರು ಕಾಣಿಸುತ್ತ ನಡೆದ ಅಯ್ಯ, ಅದು ಕೆಳದಿ ಅರಸರ ಟಂಕಸಾಲೆಗೂ ಜಾಗ ನೀಡಿತ್ತೆಂದು ಹೇಳಿದರು. ಆದರೆ, ಅದು ಇಂಥದ್ದೇ ಜಾಗದಲ್ಲಿ ಎಂದೇನೂ ನಿರ್ದಿಷ್ಟವಾಗಿ ತೋರಿಸದೇ, ಆ ಬಗ್ಗೆ ಶಾಸನಗಳಲ್ಲಿ ಹೇಳಲಾಗಿದೆ ಅಂತ ಮಾತಿನ ದಾಖಲೆ ಒದಗಿಸಿದಾಗ, ನಮಗೂ ಇದ್ದಿರಬಹುದು ಅನಿಸಿತು.

 ಇಳಿ ಸಂಜೆಯಾಗಿತ್ತು. ನಾವೀಗ ದುರ್ಗದ ತುತ್ತ ತುದಿಯಲ್ಲಿ. ಏಳುಸುತ್ತಿನ ಕೋಟೆ ಅಮಾಯಕವಾಗಿ ಬಿದ್ದುಕೊಂಡಿತ್ತು. ಯುದ್ಧದ, ರಹಸ್ಯದ, ಪಿತೂರಿಯ, ಸೈನಿಕತನದಲ್ಲಿ ಉಶ್ ಉಶ್ ಆಗಿಹೋದ ಅದೆಷ್ಟೋ ಪ್ರೇಮಗಾಥೆಗಳ, ವಿರಹದುರಿಯ ಕೊಲ್ಯಾಜಿನಂತೆ ಕಂಡಿತು.ಎಡಕ್ಕೆ ತಿರುಗಿದರೆ, ಉರಿದು, ಉರಿಸಿ, ಬೇಯಿಸಿ ಸಾಕಾದ ಸೂರ್ಯ, ತಣ್ಣಗಾಗಲು ಹವಣಿಸ್ತ ಸಮುದ್ರಕ್ಕೆ ಜಾರಲು ಸಜ್ಜಾಗುತ್ತಿದ್ದ. ಇನ್ನೂ ಅಳಿದುಳಿದ ಕೆಂಪು ಕಕ್ಕುತ್ತಲೇ ಇದ್ದ.

 ಆಗುಂಬೆಯಲ್ಲಿ ನಿಂತಾಗ ಖುಶಿ ಕೊಡುವ, ಕವನ ಹುಟ್ಟಿಸುವ ಸೂರ್ಯಾಸ್ತ, ಇಲ್ಲಿ ನೆತ್ತರುಗುಳುತ್ತಿರೋ ಹಾಗೆ ಕಾಣಿಸ್ತಿತ್ತು. ಸೂತಕದ ವಾಸನೆ ಗವ್ವನೆ ಅಡರತೊಡಗಿತು. ಯಾರೋ ಕಳ್ಳು ಕಾಯಿಸಲು ಶುರುವಿಟ್ಟಿದ್ದರು. ಕಥೆ ಹೇಳುತ್ತ ಗಕ್ಕನೆ ನಿಂತ ಅಯ್ಯ, ಸೇವಕರ ವಂಚನೆಯಿಂದ ಸತ್ತ ಕೆಳದಿಯ ಸೋಮಶೇಖರನಾಯಕನ ಪುನರವತಾರದ ಹಾಗೆ, ಏನನ್ನೋ ನೆನೆಯುತ್ತ, ಕಲ್ಲುಕಲ್ಲನ್ನೂ ತಬ್ಬಿಕೊಳ್ಳುತ್ತ, ಗೊಣಗುತ್ತ ಉಳಿದುಬಿಟ್ಟರು.

ಅರೆ! ಅಪ್ಪ ಇವತ್ತು ನಗರಕ್ಕೆ ಹೋಗ್ತೀವಿ ಅಂದಾಗ ಹೆಣಾ ಹೊರಲಿಕ್ಕಾ? ಅಂತ ಕೇಳಲೇ ಇಲ್ಲ! ಆದರೂ ಮನಸ್ಸು ಹೆಣಭಾರವಾಗಿತ್ತು. ದುರ್ಗದ ಭವ್ಯತೆಯ ಹಿಂದಿನ ನರಳುವಿಕೆಗಳು ಕಥೆಯಾಗಿ ಅಲ್ಲಿ ಕುಂತುಬಿಟ್ಟಿತ್ತು. 

ಕೌಲೇ ದುರ್ಗಕ್ಕೆ ಹೋಗುವವರಿಗೆ ಸೂಚನೆ-ಈ ಕವಲೇ ದುರ್ಗಕ್ಕೆ ಹೋಗೋದು ಬಹಳ ಸುಲಭ. ರಾಜ್ಯದ ಬಹುತೇಕ ಪ್ರಮುಖ ನಗರಗಳಿಂದ ಶಿವಮೊಗ್ಗೆಗೆ ಬಸ್ ಸೌಕರ್ಯವಿದ್ದೇ ಇದೆ. ಅಲ್ಲಿಂದ ತೀರ್ಥಹಳ್ಳಿಗೆ ಕೇವಲ ೬೦ ಕಿಲೋಮೀಟರು. ಅಲ್ಲಿಂದ ಕವಲೇದುರ್ಗಕ್ಕೆ ಕೇವಲ ೧೬ ಕಿಲೋಮೀಟರು. ಹದಿನೈದಿಪ್ಪತ್ತು ನಿಮಿಷದ ಪ್ರಯಾಣವಷ್ಟೆ. ತೀರ್ಥಹಳ್ಳಿಯಿಂದ ಗಂಟೆಗೊಂದರಂತೆ ಬಸ್ಸುಗಳೂ ದೊರೆಯುತ್ತವೆ.ಸಮುದ್ರ ಮಟ್ಟದಿಂದ ೫೦೫೬ ಅಡಿ ಎತ್ತರವಿರುವ ದುರ್ಗಕ್ಕೆ ಚಳಿಗಾಲದಲ್ಲಿ ಭೇಟಿಕೊಡುವವರು ಸೂಕ್ತ ವ್ಯವಸ್ಥೆಯೊಂದಿಗೆ ಹೊರಡುವುದೊಳಿತು. ಮಳೆಗಾಲದಲ್ಲಿ ಚಾರಣದ ಸಾಹಸ ಬೇಡ ಅನ್ನೋದು ಸಲಹೆ. ಅದನ್ನ ಮೀರೋದು ಚಾರಣಿಗರ ಹುಮ್ಮಸ್ಸು! ಅಂದಹಾಗೆ, ಕವಲೇದುರ್ಗ ಒಂದು ರುದ್ರ ರಮಣೀಯ ಸ್ಥಳ. ಗುಂಪಾಗಿ ಹೋಗುವುದು ಉಚಿತ. ದಯವಿಟ್ಟು ತಿಂಡಿ ತೀರ್ಥ (ಎಲ್ಲ ಬಗೆಯ) ಕೊಂಡೊಯ್ದ ಪ್ಲಾಸ್ಟಿಕ್ ಕಂಟೈನರ್ ಗಳನ್ನು ಅಲ್ಲೇ ಬಿಸುಟು ತಣ್ಣಗೆ ಮಲಗಿರುವ ನಿಸರ್ಗಕ್ಕೆ ಧಕ್ಕೆ ತರಬಾರದಾಗಿ ವಿನಂತಿ.

(ಚಿತ್ರಗಳು-ವಿನಾಯಕ ಗುಜ್ಜಾರ್, ತೀರ್ಥಹಳ್ಳಿ)

ನೆಲದಡಿಯ ನದಿಯೆಡೆಗೆ…

September 15, 2008 at 6:08 am | In ನಿಮ್ಮೊಂದಿಗೆ | Leave a Comment
Tags: ,

ನನ್ನ ಪ್ರಿಯ ಸ್ನೇಹಿತರೊಬ್ಬರು ಒಂದು ಹೊಸ ಬ್ಲಾಗ್ ಶುರು ಮಾಡಿದಾರೆ. ಹೆಸರು- ಇನಿಗ್ಮಾ.

“ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ!

~ ಹೀಗನ್ನುತ್ತಾರೆ ಈ ಬ್ಲಾಗಿನ ಸಂಪಾದಕರು. ಈಗಿನ್ನೂ ಇದರ ಶುರುವಾತು ಅಷ್ಟೇ. ಮುಂದೆ ಅವರು ವಿಭಿನ್ನ ಓದನ್ನ ನಮಗಿಲ್ಲಿ ಕಟ್ಟಿಕೊಡಲಿರುವುದನ್ನು ನೀವೇ ನೋಡುವಿರಿ.

ಸದ್ಯಕ್ಕೆ ಈ ಬ್ಲಾಗಿನಲ್ಲಿ ಎರಡು ಕವಿತೆಗಳಿವೆ. ಚೆಂದದೊಂದು ಲೇಖನವಿದೆ. (ಸ್ನೇಹದ ಅಭಿಮಾನಕ್ಕೆ ನನ್ನದೊಂದು ಲೇಖನ ಕೂಡ ಹಾಕಿರುವರು)

ನಿಜಕ್ಕೂ ಇನ್ನು ಮುಂದೆ ನೀವು ರೆಗ್ಯುಲರ್ರಾಗಿ ನೋಡಬಹುದಾದ ಬ್ಲಾಗ್ ಇದು ಅನ್ನುವುದು ನನ್ನ ಭರವಸೆ! ಆಸಕ್ತಿಯಿದ್ದರೆ ಭೇಟಿ ಕೊಡಿ:

http://enigmaa.wordpress.com

- ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

‘ಬಸ್ಸಿನ ಹೆಂಗಸು’- ಒಂದು ಗಟ್ಟಿ ಚರ್ಚೆ

September 11, 2008 at 5:14 am | In ನಿಮ್ಮೊಂದಿಗೆ | 5 Comments
Tags:

ನಿಮಗೆ ಗೊತ್ತು. ‘ಬಸ್ಸಿನ ಹೆಂಗಸು ಮತ್ತು ಬಿಳಿ ಬಿಳೀ ಸೀರೆಯ ಹುಡುಗಿಯರು’ ಲೇಖನದ ಪ್ರತಿಕ್ರಿಯೆಗಳು ಚರ್ಚೆಯಾಗಿ, ‘ಪೊರಕೆ ಎಲ್ಲಿದೆ?- ಮತ್ತೊಂದು ಚರ್ಚೆ’ ಎಂಬ ಶಿರೋನಾಮೆಯೊಂದಿಗೆ ಮುಂದುವರೆದಿದ್ದು. ಅಲ್ಲಿಂದಲೂ ಮುಂದುವರೆದು ಇದೀಗ ಚರ್ಚೆ ಬಹಳ ಸತ್ವಶಾಲಿಯಾಗಿ, ಗಟ್ಟಿಯಾಗಿ ಬೆಳೆದುನಿಂತಿದೆ ಸುಪ್ರೀತ್, ಹೇಮ ಶ್ರೀ, ಶ್ರೀಪ್ರಿಯೆ, ಸಂದೀಪ್ ಮತ್ತು ವಿಕೆ ಅವರು ಸಾಕಷ್ಟು ಸಂಗತಿಗಳನ್ನೊಳಗೊಂಡ ಸುದೀರ್ಘ ಪ್ರತಿಕ್ರಿಯೆಗಳನ್ನು ಬರೆದು ಚರ್ಚೆ ಮುಂದುವರೆಸಿದ್ದಾರೆ. ಅವೆಲ್ಲವನ್ನೂ ನಿಮ್ಮ ಅವಗಾಹನೆಗಾಗಿ ಪ್ರತ್ಯೇಕ ಪೋಸ್ಟ್ ಮೂಲಕ ಪೋಸ್ಟ್ ಮಾಡಿರುವೆ.

ನಿಮ್ಮ ಪ್ರತಿಕ್ರಿಯೆಗೆ, ಪಾಲ್ಗೊಳ್ಳುವಿಕೆಗೆ ನಾನು ಆಭಾರಿ. ನಿಮ್ಮೊಡನೆ ಈ ಸಂಗತಿ ಹಂಚಿಕೊಂಡ ನನಗೆ ಸಾಕಷ್ಟು ಸಮಾಧಾನ ದೊರಕಿದೆ.

- ಚೇತನಾ ತಿರ್ಥಹಳ್ಳಿ

‘ನೀವು ಸ್ತ್ರೀಪರ ದನಿಯನ್ನು ಅನುಮಾನ ಮತ್ತು ವ್ಯಂಗ್ಯದಿಂದ ನೋಡುತ್ತಿರುವಿರಿ ಎಂದು ನನಗನಿಸುತ್ತಿದೆ’ ಅನ್ನೋ ಆರೋಪ ವಿಕಾಸ್ ಮೇಲೆ ಹಾಕಿದ್ದು ಸರಿ ಅನ್ನಿಸಿಲ್ಲ.
ಒಂದು ಮಾತು ನಾವು ಮನದಟ್ಟು ಮಾಡಿಕೊಳ್ಳಲೇ ಬೇಕು – ಸ್ತ್ರೀ ಸಂವೇದನೆಗಳು ಯಾವತ್ತಿದ್ರೂನೀವು ಸ್ತ್ರೀಯರಿಗೇ ಅರ್ಥ ಆಗ್ಬೇಕು .ನಾವು ಗಂಡಸರು ಎಷ್ಟು ಜನ್ಮ ಎತ್ತಿದರೂ ನಮಗೆ ಅದು ಅರ್ಥ ಆಗಲ್ಲ.
ಹೆರಿಗೆ ನೋವಿನ ಬಗ್ಗೆ ನೀವು ನೂರು ಪುಟಗಳಷ್ಟು ಪ್ರಭಂದ ಬರೆದರೂ ನಾವು ಪುರುಷರು ಅದನ್ನು ಅರ್ಥ ಮಾಡಿಕೊಳ್ಳೋದು ಅಸಾಧ್ಯ ;ಅಷ್ಟೇ ಯಾಕೆ ಹೆರಿಗೆ ನೋವು ಏನೆಂದು ಕಾಲೇಜು ಹುಡುಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ನಾ?
We can only sympathise not empathise!
ಋತುಚಕ್ರ ,ಋತುಭಂದಗಳನ್ನು ನಾವು ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳಬಹುದಷ್ಟೆ ,ಅನುಭವಿಸೋದು ಸಾಧ್ಯ ಇಲ್ಲ.(ಗಂಡು ಗೈನೊಕಾಲಜಿಸ್ಟ್ ಆಗಿದ್ರೂ!).
ಸ್ತ್ರೀ ಸಂವೇದನೆಗಳು ಚೆನ್ನಾಗಿ ಅರ್ಥ ಆಗುತ್ತೆ ಅಂತ ಯಾರಾದ್ರೂ ಗಂಡಸು ನಿಮ್ಮ ಹತ್ರ ಹೇಳಿದ್ರೆ ಅವರಿಂದ ಹುಷಾರಾಗಿರಿ -ನಿಮ್ಮನ್ನು ಯಾಮಾರಿಸ್ತಿರಬಹುದು ಅವರು!
ಸ್ತ್ರೀ ಸಂವೇದನೆಗಳ ಬಗ್ಗೆ ಬರೆದು Phd ಪಡೆದವರು,ಅದರ ಬಗ್ಗೆ ಕಥೆ ,ಕಾದಂಬರಿ ಬರೆದವ್ರಿಗೂ ನಿಜವಾಗಿಯೂ ಅಂಥ ಕಾಳಜಿ ಇರೋದು ಸಂಶಯ.
ನನ್ನ ಪ್ರಕಾರ ಅನ್ಯಾಯ ಯಾರಿಗೇ ನಡೆದರೂ ಅದು ಅನ್ಯಾಯ -ಅದನ್ನು ’ಸಾಧ್ಯವಾದಲ್ಲಿ’ ಪ್ರತಿಭಟಿಸಲೇ ಬೇಕು.ಇದಕ್ಕೆ ಜಾತಿ,ಮತ,ಲಿಂಗ ಭೇದ ಇರಲೇ ಕೂಡದು.
ನನಗಂತೂ ಸ್ತ್ರೀ ಸಂವೇದನೆಗಳು ಅರ್ಥ ಆಗೋದೇ ಇಲ್ಲ! ನನ್ಗೆ ಅರ್ಥ ಆಗೋದು ಒಂದೇ ಭಾಷೆ ಅದು ಮಾನವೀಯತೆ! ಅದಕ್ಕೆ ಜಾತಿ,ಲಿಂಗಗಳ ಭೇದವಿಲ್ಲ.
ಹೆಂಗಸರಿಗಾಗುವ ಅನ್ಯಾಯಗಳ ಬಗ್ಗೆ ದನಿ ಎತ್ತುವವರನ್ನು ಕಂಡ್ರೆ ನಾನು ಯಾವತ್ತೂ ನಗಲ್ಲ .ಆದ್ರೆ ’ಬರೀ ಹೆಂಗಸ’ರ ಪರವಷ್ಟೇ ಅವನು ದನಿ ಎತ್ತುತ್ತಾ ಇದ್ರೆ ಅನುಮಾನ ಪಡಬೇಕಷ್ಟೆ.
ಬಸ್ಸಿನಲ್ಲಿ ಆ ಹೆಣ್ಣಿಗಾದ ಕಿರುಕಳದ ಬಗ್ಗೆ ನನಗೂ ಕಾಳಜಿ ಇದೆ .ಆದ್ರೆ ದುಡ್ಡು ಮಡಗಿ ಹೋಗ್ಲಾ ಅನ್ನೋದು ಅಸಹಾಯಕತೆ ಖಂಡಿತ ಅಲ್ಲ .ಅದು ನಿಮ್ಮ ’ಮುಗ್ಧತೆ’ ! ಆ ಹೆಂಗಸು ಅಷ್ಟೆಲ್ಲಾ ಕಿರುಕುಳ ಸಹಿಸಿಕೊಂಡು ಇಳಿದು ಹೋಗಿದ್ರೆ ಅದು ಇತಿಹಾಸದಲ್ಲಿ ’ಇನ್ನೊಂದು ಲೈಂಗಿಕ ಕಿರುಕುಳದ ಸಾಲಿಗೆ ಸೇರಿ ಹೋಗ್ತಾ ಇತ್ತು .ಆದ್ರೆ ಆ ಕುಡುಕ ಏನಾದ್ರೂ ಹಣ ನೀಡಿ ಹೋಗಿದ್ರೆ ಅದರ ಪರಿಣಾಮ ಏನಾಗ್ತಾ ಇತ್ತು??ನಾಳೆ ಇನ್ನೊಂದಿಷ್ಟು ಕುಡುಕರು ಜೋಬಲ್ಲಿ ಪುಡಿ ಕಾಸಿಟ್ಟು ಬರ್ತಾ ಇದ್ರು ಅದೇ ಬಸ್ಸಿಗೆ.
ನೀವು ಸ್ತ್ರೀ ಪರ ಕಾಳಜಿ ವಹಿಸಿ .ನನ್ನದೇನೂ ಅಭ್ಯಂತರ ಇಲ್ಲ ಆದ್ರೆ ’ಬರೀ’ ಸ್ತ್ರೀ ಪರ ಕಾಳಜಿ ವಹಿಸಬೇಡಿ ಪ್ಲೀಸ್

ಸಂದೀಪ್ ಕಾಮತ್

 

ಚೇತನಾ,

ಇಲ್ಲಿ ಚೇತನಾ ಯಾರು, ಏನು ಬರೆದಿದ್ದಾರೆ/ಬರೆದಿಲ್ಲ/ಬರೆಯಬಲ್ಲರು ಎಂಬಂಥ ವಿಷಯಗಳು ಯಾಕೆ ಪದೇ ಪದೆ ಬರುತ್ತವೊ ಅರ್ಥವಾಗುತ್ತಿಲ್ಲ. ಯಾವುದೇ ಚರ್ಚೆ ಅದರ ವಿಷಯಕ್ಕೇ ಸೀಮಿತವಾಗದೆ ವೈಯಕ್ತಿಕ ನೆಲೆಯತ್ತ ಹೊರಳಿಬಿಟ್ಟರೆ ಅಲ್ಲಿಗದು ಪಡ್ಚ! ಇರಲಿ.
ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ವಿಷಯ ಚರ್ಚೆಗೆ ಬಂದಾಗ `ಅಂಥದ್ಯಾವ ಸಮಸ್ಯೆಗಳೂ ಇಲ್ಲ. ಎಲ್ಲವೂ ಕಲ್ಪಿತ’ ಎಂಬ ಪ್ರತಿಕ್ರಿಯೆಯನ್ನು ಹಲವರಿಂದ ಕೇಳಿದ್ದೇನೆ. ನಮ್ಮ ಕಣ್ಣಿಗೆ ಸಮಸ್ಯೆ ಬಿದ್ದಿಲ್ಲ ಅಥವಾ ನಮ್ಮನುಭವಕ್ಕೆ ಬಂದಿಲ್ಲ ಎಂದ ಮಾತ್ರಕ್ಕೆ ಅಲ್ಲಿ ಸಮಸ್ಯೆಯಿಲ್ಲ ಎನ್ನಬಹುದೇ? ನಮ್ಮ ಹಿಂದಿನ ತಲೆಮಾರಿನ ಬಹಳಷ್ಟು ಜನ ವಾರಾನ್ನ ಮಾಡಿಕೊಂಡು ವ್ಯಾಸಂಗ ಮಾಡಿದ್ದರಂತೆ. ನಾವದನ್ನು ನೋಡಿಲ್ಲ, ನಮಗೀಗ ಆ ಸ್ಥಿತಿ ಇಲ್ಲ/ನಮ್ಮನುಭವಕ್ಕೆ ಬಂದಿಲ್ಲ ಎಂದಾಕ್ಷಣ ಅವರು ಕಷ್ಟಪಟ್ಟದ್ದು ಸುಳ್ಳಾಗಿ ಹೋಯಿತೆ? ಒಂದೊಮ್ಮೆ ಅವು ನಮ್ಮ ಅನುಭವದ ಪರಿಧಿಯನ್ನು ಮೀರಿದ ಸಮಸ್ಯೆಗಳಾಗಿದ್ದರೆ, ಅವುಗಳ ಬಗ್ಗೆ ಕೊಂಚ ತೆರೆದ ಮನಸ್ಸು ಹೊಂದಲು ಏನು ಅಡ್ಡಿ?
ಮಹಿಳಾಪರ ಸಂವೇದನೆಗಳಿಗೆ ಯಾವೆಲ್ಲ ಪ್ರತಿಕ್ರಿಯೆಗಳು ಬರುತ್ತವೆ ಎಂಬುದನ್ನು ಈಗಾಗಲೇ ಚೇತನಾ ಹೇಳಿದ್ದಾರೆ. ಇಂಥ ಕುಹಕಗಳನ್ನು ನಾನೂ ಸಾಕಷ್ಟು ಬಾರಿ ಕೇಳಿದ್ದೇನೆ. ಇಷ್ಟೇ ಅಲ್ಲ, ಮಹಿಳೆಯರ ಸಮಸ್ಯೆಗಳು ನಮಗೆ ಅರ್ಥವಾಗುವುದಿಲ್ಲ ಎಂಬ ನಿರ್ಲಿಪ್ತತೆ ಬಗ್ಗೆಯೂ ಬೇಸರವಾಗುತ್ತದೆ. ತೀರಾ ಖಾಸಗಿಯಾದ ನೋವು-ನಲಿವುಗಳು ಅರ್ಥವಾಗದಿದ್ದರೆ ಬೇಡ, ಆದರೆ ನಮ್ಮದೇ ಸಮಾಜದಲ್ಲಿನ ಸಹಜೀವಿಗಳ ಸಾಮಾಜಿಕ ಕಷ್ಟ-ಸುಖಗಳೂ ಗ್ರಹಿಕೆಗೆ ಬರುವುದಿಲ್ಲ ಎಂದರೆ ಹೇಗೆ? `ಸ್ತ್ರೀವಾದ’ ಎಂದರೆ ಕೆಲವರಿಗಷ್ಟೇ ಸೀಮಿತವಾದ, ಹೆಚ್ಚಿನವರಿಗೆ ಅರ್ಥವಾಗದ, ಉಳಿದವರಿಗೆ ಸಂಬಂಧಪಡದ ವಿಷಯವಲ್ಲ. ನಮ್ಮೊಡನೆ ಬದುಕುವವರ ಬಗ್ಗೆ ಗೌರವ, ತಾಳ್ಮೆ, ಕಾಳಜಿ ಹೊಂದುವ ವಿಷಯವಷ್ಟೆ.
-ಶ್ರೀಪ್ರಿಯೆ

ಪ್ರಿಯೆ,
ನಿಮ್ಮ ಮಾತೇ ನನ್ನದೂ ಆಗಿದೆ. ಯಾವಯಾವ ಸಂದರ್ಬದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಬರೆಯಲಾಗುವುದೋ ಆಗೆಲ್ಲ ಇಂಥ ‘ಹೊರಳುವಿಕೆ’ಗಳು, ವೈಯಕ್ತಿಕ ‘ತಾಗುವಿಕೆ’ಗಳು ನಡೆದಿವೆ. ಅದೇ ನನಗೆ ಬೇಸರ. ಹೀಗಾದಾಗಲೆಲ್ಲ ಅಸಲು ವಿಷಯ ಕಳೆದುಹೋಗಿಬಿಡುತ್ತದೆ.

ಸಂದೀಪ್,
ನಿಮಗೆ ಬೇಸರವಾಗಿಲ್ಲವೆಂದುಕೊಳ್ಳುವೆ. ನಾನು ‘ಬರೀ ಹೆಂಗಸರ ಕಾರ್ಪಣ್ಯವನ್ನೇ’ ಬರೆಯುವೆನೆಂಬ ನಿಮ್ಮ ಅಪಾದನೆಗೆ ಪ್ರತಿಯಾಗಿ ನನ್ನ ಇತರ ಬರಹಗಳ ಬಗ್ಗೆ ಹೇಳಿಕೊಂಡೆನಷ್ಟೆ. ಇನ್ನು ನಾನು ಈ ಸಂಗತಿಯನ್ನು ಚರ್ಚಿಸುವುದಿಲ್ಲ. – ಚೇತನಾ

ಶ್ರೀಪ್ರಿಯೆ,
ನಾನು ಯಾರದೇ ವೈಯುಕ್ತಿಕ ಬದುಕಿನ ಬಗ್ಗೆ ಮಾತಾಡಿಲ್ಲ.ನನಗೇ ಅರಿವಿಲ್ಲದೆ ಆ ಬಗ್ಗೆ ಎಲ್ಲಾದರೂ ಪ್ರಸ್ತಾವವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ.
ನನ್ನ ಉದ್ದೇಶ ಒಂದೇ ,ಅದೇನಂದರೆ ಸಂವೇದನೆಗಳು ಇರಬೇಕು .ಅದು ಮಹಿಳಾಪರ, ಮಕ್ಕಳ ಪರ ,ವಿಕಲ ಚೇತನರ ಪರ ಹುಡುಗಿಯರ ಪರ ,ಅಂತ ವಿಂಗಡಿಸೋದು ಬೇಡ . ಅನ್ಯಾಯ ಯಾರಿಗೇ ಆದರೂ ಅದು ಅನ್ಯಾಯ .
ನಾನು ಹುಟ್ಟಿ ಬೆಳೆದದ್ದು ಮಂಗಳೂರು(ನಿಮ್ಮ ಪಡ್ಚ ಶಬ್ದ ಕೇಳಿ ನೀವೂ ಅಲ್ಲಿಯವರೇ ಅನ್ನೋ ಅನುಮಾನ ನಂಗೆ) ,ಅಲ್ಲಿ ನನಗೆ ಗಮನಾರ್ಹ ಸ್ತ್ರೀ ಪರ ಸಮಸ್ಯೆಗಳು ಯಾವತ್ತೂ ಕಂಡು ಬಂದಿಲ್ಲ. ಮಂಗಳೂರಿನಲ್ಲೇನಾದ್ರೂ ಆ ರೀತಿ ಕುಡುಕ ಮೈ ಕೈ ಮುಟ್ಟಿ ಮಾತಾಡಿದ್ರೆ ಅವನ ಗ್ರಹಚಾರ ಬಿಡಿಸ್ತಿದ್ರು ಜನ.ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಅನ್ಯಾಯ ಆಗ್ತಾ ಇತ್ತು ಆದ್ರೆ ಅದಕ್ಕೆ ಲಿಂಗ ಭೇದ ಇರಲಿಲ್ಲ .ಹಾಗಾಗಿ ನನಗೆ ಸ್ತ್ರೀ ಪರ – ಪುರುಷ ಪರ ಸಂವೇದನೆಗಳು ಅಂತ ಪ್ರತ್ಯೇಕತೆಯ ಅಗತ್ಯ ಕಂಡು ಬರಲಿಲ್ಲ.ಮಂಗಳೂರಿನಲ್ಲಿ ಸ್ತ್ರೀಯರಿಗಿದ್ದ ಸ್ವಾತಂತ್ರ್ಯ ಬಿಹಾರದ ಸ್ತ್ರೀಯರಿಗೂ ದೊರೆತಿದೆಯೋ ನನಗೆ ಗೊತ್ತಿಲ್ಲ.ಹಾಗಗಿ ಸ್ತ್ರೀ ಪರ ಕಾಳಜಿ ನನ್ನಂಥವರಿಗೆ ಅರ್ಥವಾಗಿರದೇ ಇರಬಹುದು.
ಹಾಗಾಗಿ ನಮ್ಮಂತವರನ್ನು ಪರಿಗಣಿಸದೇ ,ಸ್ತ್ರೀಯರ ಪರ ದನಿ ಎತ್ತುವವರೊಡನೆ ನಿಮ್ಮ ಕೆಲಸವನ್ನು ಮುಂದುವರೆಸಲಿ ಅನ್ನೋದೆ ನನ್ನ ಆಶಯ.
ನಾನು ಬರೆದಿರೋದು Responsible comment ಹೌದೋ ಅಲ್ವೋ ಗೊತ್ತಿಲ್ಲ ನಂಗೆ.
ಇದೇ ರೀತಿಯ ಕಮೆಂಟುಗಳಿಂದ ಬೇಸರಗೊಂಡು ನರೇಂದ್ರ ಪೈ ತಮ್ಮ ಬ್ಲಾಗನ್ನೇ ಮುಚ್ಚಿ ಬಿಟ್ರು ಅಂತ ಗೊತ್ತಾಯ್ತು.
ಹಾಗಾಗ್ಬಾರ್ದು ಅನ್ನೋದೆ ನನ್ನ ಉದ್ದೇಶ.
ಕೇವಲ ಚರ್ಚೆಗೋಸ್ಕರ ಚರ್ಚೆ ಅಂತ ಆಗ್ಬಾರ್ದು.ನಾವು ಸಾಮಾಜಿಕ ಕಳಕಳಿಯ ಬಗ್ಗೆ ಪುಟ ಗಟ್ಟಲೆ ಬರೆದು ಚರ್ಚೆ ಮಾಡಿದ್ರೆ ಏನೂ ಉಪಯೋಗವಿಲ್ಲ.ಅದರ ಬದಲು ನಮ್ಮ ಕಾಳಜಿಯನ್ನು ಕಾರ್ಯರೂಪದಲ್ಲಿ ತೋರಿಸಿದ್ರೆ ಅದರಿಂದ ನಾಲ್ಕು ಜನರಿಗೆ ಉಪಯೊಗವಾಗುತ್ತೆ.ಆದ್ರೆ ಕಾರ್ಯರೂಪದಲ್ಲಿ ತೋರಿಸೋ ಸ್ಥಿತಿಯಲ್ಲಿ ಸಧ್ಯಕ್ಕೆ ನಾನಿಲ್ಲ.ನನ್ನ ಬ್ಲಾಗನ್ನು ಮೆಚ್ಚಿ ವೀಣಾ ಅನ್ನೋರು ಪ್ರತಿಕ್ರಿಯಿಸಿದ್ರು .ನಾನು ಅವರ ಬ್ಲಾಗ್ ನೋಡಿದೆ ಅದರಲ್ಲಿ ಬರೀ ಕಾರ್ಯರೂಪಕ್ಕೆ ತಂದಿರೋ ಕೆಲಸಗಳೇ ಇವೆ(http://jointhehands.blogspot.com/) .ನನ್ನ ಹಾಗೆ ಅವರು ಬರೀ ಬೊಗಳೆ ಬರೆಯೋದರಲ್ಲೆ ಸಮಯ ಕಳೆದಿಲ್ಲ.
once again ಇಂಥ ಕೆಲಸಗಳನ್ನು ನೀವೂ ಮಾಡಿರಬಹುದು ಚೇತನಾ ,ನಿಮ್ಮ ಬಗ್ಗೆ ನನಗೆ ಏನೂ ಗೊತ್ತಿಲ್ಲವಾದ್ದರಿಂದ ಅದರ ಬಗ್ಗೆ ಬರೆಯಲಾರೆ. ಪೊರಕೆ ನಮ್ಮಲ್ಲೇ ಇದೆ – ಕಸ ಗುಡಿಸುವವರು ಬೇಕಷ್ಟೆ.                     - ಸಂದೀಪ್ ಕಾಮತ್

Sandeep avare,

Thanks for writing good lines about Jointhehands team, its not just the individual but a group
of people contributing our bit to the society. I am one of the contributors of the blog too.

Well, about the ’stree para vaada’ which Chetana and other ladies are talking, it may be true in
lot many places and she was infact trying to emphathise the case instead of sympathising is what I presume and as she herself mentioned somewhere she writes about females and their issues in Bhaamini shatpadhi on avadhi blog too.

ondu heNNaagi avaru bahushaha haNNina samvedhaneyannu chennagi grahisaballaru
annabahudu. avaru express maaduva reethi(pada punja) adakke emotional touch koduttade which adds to the depth.

And Radhika heLida haage, bari paper tigers aadare enu upayogavilla, enaadru maadbeku annodu.
I am not sure if people know about blacknoise project(http://blog.blanknoise.org/) which is against eye teasing and I really
appreciate the grit in the team abolishing this one.

ondantu sathya, hennige tanna astitvada bagge hemme irabeku adanna tanna strength aagiTTu koLLuva taaLme irabeku. adannu bittu gaNdasina bagge sampoorna dwesha beLasikoLLuvudaadare namma saamajika abivruddige kundallave?

nanna eraDu paise.  –Veena

ಸ್ತ್ರೀಯರಿಗೆ ಮಾತ್ರ ಅನ್ವಯವಾಗುವ ಸಮಸ್ಯೆಗಳೆಂದು ಪರಿಗಣಿತವಾಗುವ ಸಾಮಾಜಿಕ ಪಿಡುಗುಗಳಲ್ಲಿ ಇದೂ ಒಂದು. ಇದನ್ನು ’eve-teasing’ ಎಂದು ಕರೆಯುವುದು ತಪ್ಪು ಎಂದು ನನ್ನ ಭಾವನೆ, ಇದನ್ನು ’sexual assault’ ಎಂದು ಕರೆಯಬೇಕು. ಇದು ಗಂಭೀರವಾಗಿ ಪರಿಗಣಿಸಬೇಕಾದ ಅಪರಾಧ.

ಇಂಥ ಪಿಡುಗುಗಳನ್ನು ನಿವಾರಿಸಲು ಸುಲಭವಾದ ಮಾರ್ಗವಿಲ್ಲ. ಆ ದಿನ ನೀವು ನಿಮ್ಮ ದನಿಯೆತ್ತಿದ್ದರೂ ಆ ಗಂಡಸು ಮುಂದೆ ಇದೇ ಅಪರಾಧವನ್ನು ಮತ್ತೆ ಮಾಡದೇ ಇರುತ್ತಿರಲಿಲ್ಲ. ಹಾಗೇ, ಆ ಹೆಣ್ಣುಮಗಳು ದುಡ್ಡು ಕೇಳುವ ಮೂಲಕ ತನಗಾದ ದೌರ್ಜನ್ಯದ ವಿರುದ್ಧ ತನ್ನದೇ ಆದ ಒಂದು ಸಣ್ಣ ದನಿಯೆತ್ತಿದಳು. ಇದೂ ಕೂಡ ಕೇವಲ ತಾತ್ಕಾಲಿಕ reaction, ಇಂಥ ಅಪರಾಧದ ನಿರ್ಮೂಲನೆಗೆ ಸಹಾಯಕವಾಗುವ ಪರಿಹಾರ ಅಲ್ಲ.

ಹಾಗಾದರೆ ಪರಿಹಾರ ಹೇಗೆ??? ಪರಿಹಾರ ಅನೇಕ ಸ್ತರಗಳಲ್ಲಿ ಆಗಬೇಕಾಗಿದೆ.
ಒಂದು, ಇದನ್ನು ಗಂಭೀರವಾದ ಅಪರಾಧ ಎಂದು ಪರಿಗಣಿಸಿ, ಕಾನೂನು ರೀತ್ಯಾ ಅಪರಾಧಿಗಳಿಗೆ ಸ್ಥಳದಲ್ಲೇ ಅರೆಸ್ಟ್ ಮಾಡಬೇಕು, ಅದೇ ದಿನ ಶಿಕ್ಷೆ ವಿಧಿಸಬೇಕು. ಈ ಸಮಸ್ಯೆಗೆಂದೇ ಪೋಲೀಸರ ಒಂದು squad ಮಾಡಬೇಕು. ಬಸ್ಸುಗಳಲ್ಲಿ ಕನಿಷ್ಠ ಇಬ್ಬರು ಪೋಲೀಸು ಸಿಬ್ಬಂದಿ (ಇವರೊಲ್ಲಬ್ಬರು ಮಹಿಳೆ) ಇರಬೇಕು. ಪೋಲೀಸು ಇಲ್ಲದಿರುವ ಬಸ್ಸುಗಳಲ್ಲಿ video camera ಇರಬೇಕು, cameraದಲ್ಲಿ recordಆದ ವಿವರಗಳನ್ನು ಆಗಾಗ ನೋಡುವುದಕ್ಕೆ (ಪ್ರತಿ ಗಂಟೆಗೂ) ಸೌಲಭ್ಯ ಕಲ್ಪಿಸಬೇಕು. ಇದರಿಂದ ಅಪರಾಧಿಗಳ ಚಿತ್ರಗಳು ಲಭ್ಯವಾಗುವುದರಿಂದ ಅವರು ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗೇ, plainclothesನಲ್ಲಿರುವ ಮಹಿಳಾ ಪೋಲೀಸರು ಆಗಾಗ ಬಸ್ಸಿನಲ್ಲಿ ಪ್ರಯಾಣ ಮಾಡಬೇಕು, ಅವರ ಮೇಲೆ ಕೈ ಮಾಡುವ ಗಂಡಸರನ್ನು ತಕ್ಷಣ ಸೆರೆಹಿಡಿಯಬೇಕು.

ಎರಡು, ಬಸ್ಸಿನಲ್ಲಿ ಓಡಾಡುವ/ಓಡಾಡದಿರುವ ಗಂಡಸರು ಮತ್ತು ಹೆಂಗಸರಿಗೆ ಈ ಪಿಡುಗಿನ ಬಗ್ಗೆ, ಇದರ ವಿರುದ್ಧ ಇರುವ ಕಾನೂನಿನ ಬಗ್ಗೆ ಸತತವಾಗಿ ಮಾಹಿತಿ ಕೊಡುತ್ತಿರಬೇಕು – ಟಿವಿ, ನ್ಯೂಸ್ ಪೇಪರ್, ಶಾಲಾಕಾಲೇಜುಗಳಲ್ಲಿ ವಿಡಿಯೋ ಹಾಗೂ lectureಗಳ ಮೂಲಕ.

ಮೂರು, ರಾಧಿಕಅವರು ಮಾಡುವಂತೆ ಚಿಕ್ಕ ಮಕ್ಕಳಿಗೆ, ಗಂಡು ಹಾಗು ಹೆಣ್ಣುಮಕ್ಕಳಿಬ್ಬರಿಗೂ, ಬೇರೆಯವರು ತಮ್ಮನ್ನು ಮುಟ್ಟುವುದರ ಬಗ್ಗೆ ಹಾಗು ಅವರು ಬೇರೆಯವರನ್ನು ಮುಟ್ಟುವುದರ ಬಗ್ಗೆ ತಿಳುವಳಿಕೆ ಹೇಳಿಕೊಡಬೇಕು. ಇದನ್ನು ಮನೆಯಲ್ಲಿ ತಂದೆ-ತಾಯಂದಿರು, ಶಾಲೆಯಲ್ಲಿ ಟೀಚರ್ ಗಳೂ, ಕಾಲೇಜಿನಲ್ಲಿ ಕೂಡ ಮತ್ತೆ ಮತ್ತೆ, ಅಂದರೆ, ಎಲ್ಲಾ ವಯಸ್ಸಿನ ಮಕ್ಕಳಿಗೂ ಹೇಳಿಕೊಡಬೇಕು. ಬಸ್ಸಿನಲ್ಲಿ ಈ ಸಮಸ್ಯೆ ಬಂದಾಗ, ಇದು ತಮಗೇ ಆಗಲಿ, ಬೇರೆಯವರಿಗೇ ಆಗಲಿ, ಇದರ ವಿರುದ್ಢ ತಕ್ಷಣ ದನಿಯೆತ್ತುವುದು ಹೇಗೆ, ಸ್ಪಷ್ಟವಾಗಿ ಏನೆಂದು ಹೇಳಬೇಕು ಎಂದು ತಿಳಿಸಿಕೊಡಬೇಕು.

ನಾಲ್ಕು, ಸಿನಿಮಾ, ಟಿವಿ, ಕಥೆ, ಕಾದಂಬರಿಗಳಲ್ಲಿ ಈ ರೀತಿಯ ಅಪರಾಧಿಗಳ ಪಾತ್ರಗಳನ್ನು ಸೃಷ್ಟಿಸಿ, ಅವರು ಮಾಡುವ ಕೃತ್ಯಗಳು ಎಷ್ಟು ಹೇಯಕರ ಎಂದು ತೋರಿಸಬೇಕು. ಹಾಗೇ ಇದರ ವಿರುದ್ಧ ದನಿಯೆತ್ತುವ ಪಾತ್ರಗಳ ಬಗ್ಗೆ ಸದಭಿಪ್ರಾಯ ಬರುವಂತೆ ಚಿತ್ರಿಸಬೇಕು. ಈ ಪಿಡುಗಿನ ಬಗ್ಗೆ ಬರೆಯುವ, ಹೋರಾಡುವ ಜನರ ಬಗ್ಗೆ ವರದಿಗಳು, documentaries ಹೊರಬರಬೇಕು.

ಐದು, ಈ ಅಪರಾಧಗಳನ್ನು ಮಾಡುವ ಗಂಡಸರ ಸಾಮಾಜಿಕ, ಆರ್ಥಿಕ, ಮಾನಸಿಕ ಹಿನ್ನೆಲೆಗಳ ಬಗ್ಗೆ ಅಧ್ಯಯನ ಮಾಡಬೇಕು. ಈ ಅಧ್ಯಯನಗಳಿಂದ ಅವರು ಈ ರೀತಿ ನಡೆದುಕೊಳ್ಳುವುದಕ್ಕೆ ಕಾರಣಗಳನ್ನು ಗುರುತಿಸಿ, ಆ ಕಾರಣಗಳಿಗೆ ತಕ್ಕಂತೆ ಪರಿಹಾರಗಳನ್ನು ಗುರುತಿಸಬೇಕು.

ಸಾಮಾಜಿಕ ಪಿಡುಗುಗಳ ಪರಿಹಾರಕ್ಕೆ ಕಾನೂನು ಹಾಗು ಸಾರ್ವಜನಿಕರ co-operation ಬೇಕು. ಇದಕ್ಕಾಗಿ ಸರ್ಕಾರದಲ್ಲಿರುವ ಗಂಡಸರೂ ಹೆಂಗಸರೂ ಹಾಗೂ ಗಂಡು ಮತ್ತು ಹೆಣ್ಣು ಪ್ರಜೆಗಳೂ ಶ್ರಮಿಸಬೇಕು.

ಕಾನೂನುಗಳನ್ನು ಪೋಲೀಸರನ್ನು ಸಬಲಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಂಘಟಿತ ಪ್ರಯತ್ನಗಳು ಬೇಕು. ಸಾರ್ವಜನಿಕರಲ್ಲಿ awareness ಮೂಡಿಸಲು ಸಮೂಹ ಮಾಧ್ಯಮಗಳು, ಸಾಮಾನ್ಯ ಜನರೂ ಪ್ರಯತ್ನಮಾಡಬೇಕು.

ಎಲ್ಲರಿಗೂ ಎಲ್ಲ ಸ್ತರಗಳಲ್ಲೂ ಕೆಲಸ ಮಾಡಲು ಸಾಧ್ಯವಿಲ್ಲ. ಬರಹಗಾರ್ತಿಯಾದ ನೀವು ಈ ದೌರ್ಜನ್ಯದ ಬಗ್ಗೆ ಬರೆದಿದ್ದೀರ. ತಾಯಿಯಾಗಿ ರಾಧಿಕ ತಮ್ಮ ಮಗಳಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಕಾನೂನಿನಲ್ಲಿ ತರಬೇತಿ ಇರುವವರು ಈ ಪಿಡುಗಿಗೆ ಸಂಬಂಧಿಸಿದಂತೆ ಇರುವ, ಜಾರಿಗೊಳಿಸಬೇಕಾದ ಕಾನೂನುಗಳ ಬಗ್ಗೆ ಚರ್ಚಿಸಬೇಕು. ಪೋಲೀಸು ತರಬೇತಿ ಇರುವವರು ಅಪರಾಧಿಗಳನ್ನು ಗುರುತಿಸಲು, ಬಂಧಿಸಲು ಬೇಕಾಗುವ ತರಬೇತಿ, ಸಿಬ್ಬಂದಿ, ಸಮಯ, ಇಂಥ ವಿಷಯಗಳ ಬಗ್ಗೆ ಚರ್ಚಿಸಲು ಮುಂದೆ ಬರಬೇಕು. ಓದು ಬರದವರಿಗೆ, ಶಾಲೆಗೇ ಹೋಗದವರಿಗೆ ತಿಳುವಳಿಕೆ ನೀಡಲು ಸಂತೆ, ಜಾತ್ರೆಗಳಂಥ ಜನ ಸೇರುವಂಥ ಜಾಗಗಳಲ್ಲಿ ಬೀದಿ ನಾಟಕ/ಭಾಷಣ/ಹಾಸ್ಯದ ಮೂಲಕ ಜನರನ್ನು ತಟ್ಟಬೇಕು, ಇದಕ್ಕೆ ಕಲಾವಿದರ ಸಹಕಾರ ಬೇಕು.

ನಾನು list ಮಾಡಿರುವ ಪರಿಹಾರ ಮಾರ್ಗಗಳು ಹೊಸವೇನಲ್ಲ, ಬೇರೆ ಸಮಸ್ಯೆಗಳಿಗೆ ಈಗಾಗಲೇ ಇಂಥ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ.

’ಬರಹಗಳಿಂದ ಚರ್ಚೆಗಳಿಂದ ಯಾವ ಉಪಯೋಗವೂ ಇಲ್ಲ’ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಈ ರೀತಿಯ ಬರಹಗಳಿಂದ ಚರ್ಚೆಗಳಿಂದ ಸರ್ಕಾರದ, ಸಾರ್ವಜನಿಕ ಸಂಘಟನೆಗಳ ಗಮನ ಸೆಳೆದು, ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ.

ಹಾಗೇ ’ಹೆಣ್ಣಿಗೆ ತನ್ನ ಅಸ್ತಿತ್ವದ ಬಗ್ಗೆ ಇರುವ ಹೆಮ್ಮೆ’ ಮಾತ್ರದಿಂದ ಇಂಥ ಪಿಡುಗುಗಳು ನಾಶವಾಗುವುದಿಲ್ಲ. ಗಂಡಸರ ಬಗ್ಗೆ ’ಸಂಪೂರ್ಣ ದ್ವೇಷ’ ಇರುವವರು ಯಾರೋ, ಅವರೊಂದಿಗೆ ಆ ಚರ್ಚೆ ನಡೆಸಿ, ಇಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಇದು ಅಸಂಬದ್ಧ comment. ಈ ಪಿಡುಗಿನ perpetrator ಗಂಡಸಾಗಿರುವ ಕಾರಣ, ಇದು ಕೇವಲ ಸ್ತ್ರೀಯರ ಸಮಸ್ಯೆಯಲ್ಲ.

ಋತುಚಕ್ರ/ಹೆರಿಗೆ ನೋವುಗಳು ಸಾಮಾಜಿಕ ಪಿಡುಗುಗಳಲ್ಲ! ಇತರರಿಗೆ ಆಗುವ ದೈಹಿಕ ನೋವುಗಳಿಗೆ ’ಪುರುಷ’ ಯಾ ’ಸ್ತ್ರೀ’ ಸಂವೇದನೆಗಳ ಅವಶ್ಯಕತೆ ಇಲ್ಲ.

ಸ್ತ್ರೀಯರ ಮೇಲೆ ಗಂಡಸರು ಮಾಡುವ ದೌರ್ಜನ್ಯವನ್ನು ನೋಡುತ್ತಾ ಅದಕ್ಕೆ ಪರಿಹಾರದ ಮಾರ್ಗಗಳನ್ನು ಗುರುತಿಸುವ ಬದಲು ’ಅದು ನನಗೆ ಅರ್ಥವಾಗುವ ಸಮಸ್ಯೆಗಳಲ್ಲ’ ಎಂಬ ನೆಪವೊಡ್ಡುವ, ’ಬರೀ ಹೆಂಗಸರ ಸಮಸ್ಯೆಗಳ ಬಗ್ಗೆ ಯಾಕೆ ದನಿಯೆತ್ತುತ್ತೀರಿ’ ಎಂಬ ವಿತಂಡವಾದ ಎತ್ತುವ ’ಸುಶಿಕ್ಷಿತ’ ಗಂಡಸರ, ಹೆಂಗಸರ ಬಗ್ಗೆ ನನಗೆ ಬಹಳ ಖೇದವಿದೆ. ಯಾಕೆಂದರೆ, ಹೆಂಗಸರನ್ನು ಕಾಡುವ ಸಾಮಾಜಿಕ ಸಮಸ್ಯೆಗಳು ಬರೀ ಹೆಂಗಸರದಲ್ಲ.  -ವಿಕೆ (ಕನ್ನಡ ಬ್ಲಾಗ್)

ಚೇತನಾ ಅವ್ರೇ ,
ವಿಷಯದ ಚರ್ಚೆ ಎಲ್ಲೆಲ್ಲೋ ಹೋಗಿ ಮತ್ತೆ ನಾವು, ಸ್ತ್ರೀವಾದ-ಪುರುಷ ದ್ವೇಷಿ ಎನ್ನೋ ವಾದಗಳೊಳಗೇ ಗಿರಕಿಯಾಡುತ್ತಾ ಇದ್ದೇವೆ. ಅಲ್ವಾ!

ಸಂದೀಪ್ ಹೇಳಿದ ಹಾಗೆ, ಮಂಗಳೂರಲ್ಲಿ ಏನಾದ್ರೂ ಈ ಥರಾ ಆಗಿದ್ರೆ … ಅಂತ. ಕ್ಷಮಿಸಿ,ಸಂದೀಪ್ ಅವರೆ, ನಾನು ಕೂಡ ಮಂಗಳೂರಿನವಳೇ. ಆದ್ರೆ, ಅಲ್ಲಿಯ ಜನ ಖಂಡಿತವಾಗಿಯೂ ಏನೂ ಬೇರೆ ಅಲ್ಲ. ನಾನು college ಒದುತ್ತಿದ್ದಾಗ ಸ್ತ್ರೀವಾದಿ ಹೋರಾಟ,ಚಿಂತನೆ,ವಿಮರ್ಶೆ ಅಂತ ಸಾಕಷ್ಟು ಮಾಡಿದ್ದೆ. ಆಮೇಲೆ ನಿಧಾನವಾಗಿ ಅರಿವಾಯ್ತು. ಯಾವುದೇ ideology,ಇಸಂಗಳು ಇರಬಹುದು,ಅದು ವೈಯಕ್ತಿಕ – ಅಥವಾ practical ಆಗದೆ ಹೋದಾಗ, there is no value to it at all.
this is my personal opinion. i do appreciate and consider people who do all pro-women, pro-children related works. but, ಸಮಾಜವನ್ನು ಯಾರೇ ಒಬ್ಬರು ಬದಲಾಯಿಸಲು ಸಾಧ್ಯವೇ ಇಲ್ಲ. ನಾನು ಅರಿತ ಸತ್ಯಗಳನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದಲ್ಲಿ ಮಾತ್ರ ನಾನು ಅರಿತ ಸತ್ಯಕ್ಕೆ ಬೆಲೆ. otherwise it is good for nothing.

ಚೇತನಾ ಬರೆಯುವುದು,its a part of the evolution (revolution). ಅವರಂತೆ ಹಲವರು ಬರೆಯುತ್ತಾರೆ, ಕೆಲವರು ಹೋರಾಟ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ತಮ್ಮ ಮಿತಿಯೊಳಗೇ human oriented ಕೆಲಸ ಮಾಡುತ್ತಾರೆ. ನಾನು, ನೀವು , ಇಲ್ಲಿ ಬರೆಯುವ ಎಲ್ಲರೂ ಚರ್ಚೆ ಮಾಡುವುದೂ ಸಹ ಬದಲಾವಣೆಯ ಒಂದು ಭಾಗ ಅಲ್ವೇ.

ಖಂಡಿತವಾಗಿಯೂ ಸಂವೇದನೆ ಇರಲೇಬೇಕು.
ಆದ್ರೆ, ಮಹಿಳಾ ಪರ, ಮಕ್ಕಳ ಪರ ಅಂತ ವಿಭಾಗಿಸಬೇಡಿ ಅನ್ನೋದು ಅಷ್ಟು ಸಮಂಜಸ ಅನ್ಸೋದಿಲ್ಲ. ಪ್ರತಿಯೊಂದು ಕ್ರಿಯೆ – ಪ್ರಕ್ರಿಯೆಗೂ ಒಂದು ಹಿನ್ನೆಲೆ, background , ಅನುಭವ ಇದ್ದೇ ಇರುತ್ತದೆ. ವೈಯಕ್ತಿಕ ಮತ್ತು ಸಾಮಾಜಿಕವಾಗಿಯೂ ಸಹ. ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಹೇಗೆ ಸಾಧ್ಯ? we play with different psyches . isn’t it ?

ಅನ್ಯಾಯದ ವಿರುಧ್ಧ ಹೋರಾಟ ಅಗತ್ಯ. ಹಾಗಂತ,ಹೆಂಗಸರು ತೋರಿಸುವ ಸ್ತ್ರೀಪರ ಕಾಳಜಿ ಸರಿಯಾದದ್ದು , ಗಂಡಸರು ತೋರಿಸುವ sympathy ತೋರಿಕೆಗೆ ಅಂತ ಭಾವಿಸುವುದು ಯಾಕೆ.
ಎಷ್ಟೋ ಗಂಡಸರು, ನಾನು ತಿಳಿದ ಮಟ್ಟಿಗೆ, ಈ ಗೊಂದಲದಲ್ಲಿ ಇನ್ನೂ ಸಿಲುಕಿದ್ದಾರೆ.ಅಥವಾ ನಾವೂ ಹೆಂಗಸರೂ ಸಹ, ನಮ್ಮಲ್ಲೆ ದ್ವಂದ್ವ ಇನ್ನೂ ಇದೆಯಾ? ಹಲವು ಮಹಿಳೆಯರೂ ತೋರಿಕೆಯ ಸ್ತ್ರೀವಾದಿಗಳಾಗಿರುವುದೂ ನಾವು ನೋಡುತ್ತೇವಲ್ಲಾ.
ಎಷ್ಟೇ ದೊಡ್ಡ ವ್ಯಕ್ತಿ ಯಾಗಿರಲಿ, ಆತ ತನ್ನ ವೈಯಕ್ತಿಕ ಜೀವನದಲ್ಲಿ ಹೆಣ್ಣಿನ ಬಗ್ಗೆ ಹೇಗೆ ನಡೆದುಕೊಳ್ಳುತ್ತಾನೆ ಎನ್ನುವ ಆಧಾರದ ಮೇಲೆ ಆತ ಸ್ತ್ರೀಪರ ಕಾಳಜಿಯುಳ್ಳವನೇ ಅಂತ ಗೊತ್ತಾಗೋದು. ಹಾಗೆಯೇ, ಎಲ್ಲಾ ಗಂಡಸರು ಹೀಗೇ ಅನ್ನೋ prejudice ಇಟ್ಟುಕೊಳ್ಳೋದು ತಪ್ಪಲ್ವಾ.

ನನಗಿಂತ ನನ್ನ partner ಹೆಚ್ಚು ಸ್ತ್ರೀಪರ,ಮಾನವ ಪರ ಕಾಳಜಿಯುಳ್ಳ ವ್ಯಕ್ತಿ. ಹಾಗಂತ ಅವ್ನಿಗೇನಾದ್ರೂ ಹೇಳಿದ್ರೆ ವಾದ ವಿವಾದ ಆಗುತ್ತೆ. he says,why do u tag me. i am just being a sensitive human being.
ಅವನು feminist ಅನ್ನೋದ್ರಲ್ಲಿ ನನ್ನ ಗೆಲುವು ಅಹಂಕಾರ ಅಡಗಿದೆ ಅನ್ಸುತ್ತೆ ಅಲ್ವಾ. ಆದ್ರೆ ಅವ್ನೂ ಸಹ ಸೋಲು ಬಯಸೋದಿಲ್ಲ. ಇಬ್ಬರಿಗೂ ಇರುವ ಮಾನವ ಸಹಜ IGO.
ಗಂಡ-ಹೆಂಡತಿ, ಗಂಡು-ಹೆಣ್ಣು ಅನ್ನೋ stereotype roleplay ಗಳನ್ನು ಬಿಟ್ಟು ಮನುಷ್ಯ ಸಹಜವಾಗಿ ನಾವು ಬದುಕಬೇಕಲ್ಲ. ನಮ್ಮ ನಮ್ಮ IGO ಗಳ ಜತೆ.
ಜತೆಗೇ ಸಾಮಾಜಿಕ ವಸ್ತುಸ್ಥಿತಿಯ ಅರಿವು ಬೇಕಲ್ಲ. ರಾಧಿಕಾ ಈ ಹಿಂದೆ ಬರೆದ ಹಾಗೆ, ನಮ್ಮ ಮಕ್ಕಳಿಗೆ ನಾವು ಇದರ ತಿಳುವಳಿಕೆ ನೀಡಲೇಬೇಕು.
ನನ್ನ friend ಮನೆಯಲ್ಲಿ ಆದ ಘಟನೆ ಇಲ್ಲಿ ಹೇಳ್ತೇನೆ. ಆತನ ಪುಟ್ಟ ಎರಡು ವರ್ಷದ ಮಗನ birthday ಗೆಂದು ನಾವು ಒಂದು DOLLS SET gift ಕೊಟ್ಟೆವು. ಅದರಲ್ಲಿ ಒಂದು ಗಂಡು ಒಂದು ಹೆಣ್ಣು – ಹೀಗೆ ಹಲವು pair-couples ಗಳಿವೆ. ಒಂದು ಮನೆಯ ವಿನ್ಯಾಸ. ಮನೆಯ ಅಡಿಗೆ ಕೋಣೆಯಲ್ಲಿ ಒಂದು couple,ಜತೆಗೆ ಕೆಲಸ ಮಾಡುತ್ತಿದ್ದಾರೆ.ಇನ್ನೊಂದು couple,ಗಂಡು, studyರೂಮ್ ನಲ್ಲಿ laptop ಹಿಡಿದು ಕೂತಿದ್ದಾನೆ. ಹೆಣ್ಣು, computer table ಹತ್ತಿರ ಕೂತು ಕೆಲಸ ಮಾಡುತ್ತಿದ್ದಾಳೆ. ಮತ್ತೊಂದು couple, livingರೂಮ್ ನಲ್ಲಿ ಹೆಣ್ಣು TV ನೋಡುತ್ತಿದ್ದಾಳೆ. ಗಂಡು ಕಿವಿಗೆ walkman ಹಾಕಿಕೊಂಡು ಏನೋ ಬರೆಯುತ್ತಿದ್ದಾನೆ. ಇನ್ನೊಂದು couple, balconyಯಲ್ಲಿ ಜತೆಯಾಗಿ coffee ಕುಡಿತಾ ಇದ್ದಾರೆ. bedroomನಲ್ಲಿ ಇನ್ನೊಂದು couple ನಿದ್ದೆ ಮಾಡ್ತಾ ಇದೆ.
ನನಗಂತೂ ಈ DOLL SET ನೋಡಿ ಅದ್ಭುತ ಅನ್ನಿಸ್ತು. but , surprisingly my friend got offended.
because. firstly, it was a dolls set.(dolls belong to the girls.!!!)secondly, the concept on which the DOLL SET was done.
I was shocked to see their response. he said, how can i explain this to my son.
come on, now, i was offended. because,i thought he was a progressive person.
ಎರಡು ವರ್ಷದ ಮಗುವಿಗೆ ಈ concept ಈಗಲೇ ಅರ್ಥ ಆಗದೆ ಇರಬಹುದು. ಆದ್ರೆ, ನಮ್ಮ responsibility ???
we have to be gender sensitive and along with that we need to be gender conscious also. ಆಗ ಮಾತ್ರ ಪರಸ್ಪರ ಗೌರವ,ಸಹನೆ,ಪ್ರೀತಿ,ಸಹಕಾರ ಬೆಳೆಯೋದಕ್ಕೆ ಸಾಧ್ಯ.ಅಲ್ವಾ.                 - ಹೇಮ ಶ್ರೀ

ಪೊರಕೆ ಎಲ್ಲಿದೆ!? – ಮತ್ತೊಂದು ಚರ್ಚೆ

September 8, 2008 at 9:15 am | In ನಿಮ್ಮೊಂದಿಗೆ | 15 Comments
Tags:

‘ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು’ ಲೇಖನದ ವಸ್ತು ನಿಜ ಘಟನೆಯನ್ನ ಆಧರಿಸಿದ್ದು. ಇಲ್ಲಿರುವ ಕೊನೆಯ ಪ್ರಶ್ನೆ, ಪ್ರಾಮಾಣಿಕವಾಗಿ ನನ್ನ ಅಂತರಾಳದ್ದು. ಇದು ನನ್ನನ್ನ ಕಾಡುತ್ತಿರುವುದಕ್ಕೆ ಕಾರಣ ಬಹಳವಿದೆ. ಭಾಷಣ, ಬರಹ ಅಂತೆಲ್ಲ ಶುಚಿಶುಚಿಯ ಚಟುವಟಿಕೆಯಲ್ಲಿ ಮುಳುಗಿಹೋಗುವ ನನಗೆ ಏನೂ ಮಡಲಾರದವಳಾಗಿರುವೆನಲ್ಲ ಎಂಬ ನಾಚಿಕೆ ಕಾಡಿ ಅದನ್ನ ಹೇಳಿಕೊಂಡಾದರೂ ಹಗುರಾಗುವ ಎಂದಿದನ್ನ ಬರೆದೆ. ಇದನ್ನ ಬರೆದಿದ್ದು ಮೇ ತಿಂಗಳಿನಲ್ಲಿ.

ಈ ಲೇಖನ ಕೆಂಡ ಸಂಪಿಗೆಯಲ್ಲಿ ಬಂದು, ಇದೀಗ ನಿಮ್ಮೊಡನೆ ಚರ್ಚಿಸುವ ಸಲುವಾಗಿಯೆ ನನ್ನ ಬ್ಲಾಗಿಗೆ ಹಾಕಿಕೊಂಡೆ. ನೀವು ಕೂಡ ಪ್ರತಿಕ್ರಿಯಿಸುತ್ತಿರುವಿರಿ. ರಾಧಿಕ, ವಿಕಾಸ್, ಸಂದೀಪ್- ಎಲ್ಲರೂ ಚೆನ್ನಾಗಿ ಹೇಳಿದ್ದೀರಿ. ಒಳ್ಳೆಯ ಪ್ರಶ್ನೆ- ಉತ್ತರ ನೀಡಿದ್ದಿರಿ. ಅದಕ್ಕೇ, ಅವು ಕಮೆಂಟು ಬಾಕ್ಸಲ್ಲಿ ಮುಚ್ಚಿಹೋಗಬಾರದೆಂದು ಸಪರೇಟು ಪೋಸ್ಟ್ ಮಾಡಿ ಹಾಕುತ್ತಿರುವೆ. ಸಲಹೆ- ಸೂಚನೆ- ಆಕ್ಷೇಪ ಏನಾದರೂ ಇದ್ದರೆ, ಚರ್ಚೆ ಮುಂದುವರೆಸಿ.

- ಪ್ರೀತಿಯಿಂದ,

ಚೇತನಾ ತೀರ್ಥಹಳ್ಳಿ

Whatever we may talk, write FOR WOMEN when it comes to reality, we would rather be spectators! Your experience (if it’s real) reflects the society in general.

- ರಾಧಿಕಾ 

ರಾಧಿಕಾ,
ಇದು ನಿಜವಾಗಿ ನಡೆದಿದ್ದು. ಖಂಡಿತ ಇದು ಒಟ್ಟು ಸಮಾಜದ ಅಸಾಹಯಕತೆ.
ನನ್ನ ಮಟ್ಟಿಗೆ ಕ್ಲಾರಿಫಿಕೇಶನ್ನು ಕೊಡಬಹುದಾದರೆ,ಅಲ್ಲಿ ನನ್ನ ಮಾತಿಗೆ ಬೆಂಬಲ ಕೊಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಸ್ವತಃ ಆ ಹೆಂಗಸು ಕೂಡ! ಆದರೆ ಇಂತಹ ಮಾತುಗಳು ಎಲ್ಲೋ ಕೇವಲ ಸಮಜಾಯಿಶಿಯಾಗಿ ಉಳಿದುಬಿಡುತ್ತದೆ.
ಅದರೂ,
ಬಸ್ಸಲ್ಲಿ ಯಾವನದೋ ಕೈ ಸೋಕಿ ದಿನವಿಡೀ ಮೈಮೇಲೆ ಚೇಳು ಹರಿದಂತೆ ಹೀಕರಿಸಿಕೊಳ್ಳುವ ನಮಗೆ, ಬಸ್ಸಲ್ಲಿ ಅಂಥದೊಂದು ಕಿರುಕುಳಕ್ಕೆ ಒಳಗಾಗಿಯೂ ಕೊನೆಯಲ್ಲಿ, ‘ದುಡ್ ಮಡಗಿ ಹೋಗೋ’ ಎಂದು ಅರಚಿಕೊಳ್ಳುವ ಆ ಹೆಂಗಸಿನಂಥವರ ಅಸಹಾಯಕತೆ, ಅಥವಾ ಅವರ ಮನಸ್ಥಿತಿ ಅರಗಿಸಿಕೊಳ್ಳಲು ಬರುವುದೇ ಇಲ್ಲ.
ಪರಿಸ್ಥಿತಿ ಹೀಗಿರುವುದರಿಂದಲೇ ನನ್ನ ‘ಪೊರಕೆ’ಯ ಹುಡುಕಾಟ ಹಾಗೇ ನಿಂತುಬಿಟ್ಟಿದೆ.
ಈ ಬಗ್ಗೆ ನೀವು ನಿಮ್ಮ ಸಲಹೆ ಕೊಡುವುದಿದ್ದರೆ ಬಹಳ ಒಳ್ಳೆಯದು.

- ಚೇತನಾ 

Chetana, I wonder demanding money was her way of protesting against the misbehavior OR her consent for it.
I for one believe every girl should be taught from young age to resist misbehavior by men even if it’s from a family member. My daughter is all of 2.5 years – wouldn’t allow anybody(sometimes including us parents!) to kiss her or pinch her cheeks – as I’ve taught her it’s not good. We need to be equipped to face the world and fight as we cannot eliminate men who are beasts but we can keep them away for sure.

- ರಾಧಿಕಾ

 

  • ಕೊನೆಯಲ್ಲಿ ದುಡ್ ಮಡಗಿ ಹೋಗೋ ಎಂಬುದು ’ಅಸಹಾಯಕತೆ’ಯನ್ನು encash ಮಾಡಿಕೊಳ್ಳುವ ಬುದ್ದಿವಂತನಿಕೆಯೋ!! ಭೇಷ್.ನಿಜ, ನಮ್ಮ ಕೋಟೆಯೊಳಗೇ ನಾವಿದ್ದಾಗ ಹೊರಗೆ ಏನು ನೆಡೆಯುತ್ತಿದೆ ಎಂಬುದು ಸರಿಯಾಗಿ ಕಾಣುವುದೇ ಇಲ್ಲ, ಕಂಡರೂ ಸರಿಯಾಗಿ ಗೊತ್ತಾಗುವುದೇ ಇಲ್ಲ! ಕಿಂಡಿಯಲ್ಲೇ ಕಂಡದ್ದನ್ನು ಇಡೀ ಜಗತ್ತಿಗೆ ಅನ್ವಯಿಸಿ ಜೆನೆರಲೈಸ್ ಮಾಡಿಬಿಡುತ್ತೇವೆ.
  • ವಿಕಾಸ್ 

  • ದುಡ್ ಮಡಗಿ ಹೋಗೋ’ ಅನ್ನೋದು ಯಾವ ದೃಷ್ಟಿಯಿಂದಲೂ ಅಸಾಹಯಕತೆ ಅಲ್ಲ!
    ಇಂಥ ಗಂಡಸರ ಬಗ್ಗೆ ನನಗೂ ಸಿಟ್ಟು ಇದೆ .
    ನಂಗೆ ನೀವು ಹುಡುಗಿಯರ ಕಷ್ಟ ಖಂಡಿತ ಅರ್ಥ ಆಗುತ್ತೆ!
    ಯಾಕಂದ್ರೆ ನಾವು ’ಗಂಡಸರೂ’ ಇಂಥ ಕಷ್ಟ ಬಸ್ ನಲ್ಲಿ ಅನುಭವಿಸ್ತೀವಿ.ಅದು ’ಗೇ ’ಗಳಿಂದ!
    .ನಿಮಗೆ ಇದು ಮಹಾ ಸಮಸ್ಯೆ ಅನ್ನಿಸದಿರಬಹುದು .ಆದ್ರೆ ನಮಗೆ ಇದು ದೊಡ್ಡ ಸಮಸ್ಯೆ .ಯಾಕಂದ್ರೆ ನೀವು ಸ್ವಲ್ಪ ಧೈರ್ಯ ಪಟ್ಟು ಧ್ವನಿ ಎತ್ತಿದ್ರೆ ಅಲ್ಲೇ ಇರೋ ಕೆಲವು ಗಂಡಸರಾದ್ರೂ ಧರ್ಮದೇಟು ನೀಡದೆ ಇರುವುದಿಲ್ಲ ಅಂಥ ಕಾಮುಕರಿಗೆ.ಆದ್ರೆ ನಾವು ಧ್ವನಿ ಎತ್ತಿದ್ರೆ ಯಾರೂ ನಂಬಲ್ಲ ನಮ್ಮನ್ನ ( ಇಷ್ಟವಿಲ್ಲದ ಸ್ಪರ್ಷ ಯಾವತ್ತಿದ್ರೂ ಅಸಹ್ಯ ಅಲ್ವ??  (ಅಂದ ಹಾಗೆ ಗೇ ಗಳು ಯಾವ ರೀತಿ ಕಾಟ ಕೊಡುತ್ತಾರೆ ಅನ್ನೋದನ್ನು ಇಲ್ಲಿ ಬರೆಯಲು ಅಸಾಧ್ಯ ! ಅದರ ಕಷ್ಟ ಅನುಭವಿರೋರಿಗೆ ಗೊತ್ತು) ರಾಧಿಕಾ ರವರ ಸಲಹೆ ತುಂಬಾ ಚೆನ್ನಾಗಿದೆ.ಹುಡುಗಿಯರು ಚಿಕ್ಕವರಿರುವಾಗ್ಲೇ ಇಂಥ ಕಿರುಕಳದ ಬಗ್ಗೆ ಸರಿಯಾದ ಮಾಹಿತಿ ನೀಡ್ಬೇಕು .ಬೇಸರದ ಸಂಗತಿ ಅಂದ್ರೆ ಇಂಥ ಕೆಲಸ ಪರಿಚಿತರಿಂದ್ಲೇ ಆಗೋದು !
    ಇಲ್ಲಿ ಇನ್ನೊಂದು ವಿಷಯನ್ನು ಗಮನಿಸಬೇಕು ! ಈ ರೀತಿ ಪುಟ್ಟ ಹುಡಿಗಿಯರಿಗೆ ತಿಳುವಳಿಕೆ ನೀಡೋದೇನೋ ಸರಿ ,ಆದ್ರೆ ಇದನ್ನೆ ’ಅಸಹ್ಯ ’ ,ತಪ್ಪು ಅಂತ ಪದೇ ಪದೇ ಹೇಳ್ತಾ ಇದ್ರೆ ಹುಡುಗಿಯರು ಅದನ್ನೇ ಮನಸ್ಸಲ್ಲಿ ಅಚ್ಚೊತ್ತಿ ಬಿಡ್ತಾರೆ ! ಆಮೇಲೆ ಕಷ್ಟ ಪಡೋದು ಗಂಡ ! ಗಂಡನನ್ನು ಕೂಡಾ ಅವರು ಹತ್ತಿರ ಬಿಟ್ಟು ಕೊಡಲ್ಲ !

    - ಸಂದೀಪ್ ಕಾಮತ್ 

    @Sandeep, your concern about child developing aversion to ALL people may be true to some extent. BUT the need of the hour is educate the child what is good or bad at that age. Otherwise we may be just mute spectators to violence happening within the family many times.

    - ರಾಧಿಕಾ

  • ವಿಕಾಸ್ ಗೆ ಉತ್ತರ ಕೊಡೋದು ನಂಗೆ ಸ್ವಲ್ಪ ಕಷ್ಟ. ಅವರು ಯಾವುದೆಲ್ಲವನ್ನು ಯಾವೆಲ್ಲ ರೀತಿ ಗ್ರಹಿಸುತ್ತ ಬಂದಿದಾರೆ ಅನ್ನೋದನ್ನ ಕಳೆದ ಕೆಲವು ದಿನಗಳಿಂದ ಗಮನಿಸ್ತ ಬಂದಿದೇನೆ. (ಅವರ ಬ್ಲಾಗಲ್ಲಿ ಕೂಡ ಅದಕ್ಕೆ ಪುರಾವೆ ಇದೆ) ಹೀಗಾಗಿ ‘ಅಸಹಾಯಕತೆಯನ್ನು ಎನ್ ಕ್ಯಾಶ್’ ಮಾಡಿಕೊಳ್ಳುವುದಕ್ಕೆ ಅವರಿತ್ತ ವ್ಯಂಗ್ಯಕ್ಕೆ ಉತ್ತರವಿದ್ದರೂ,ಇಲ್ಲಿ ಅದನ್ನು ಪ್ರಸ್ತಾಪಿಸುವುದಿಲ್ಲ.
    ಆದರೆ ವಿಕಾಸ್,
    ಎಲ್ಲರೂ ಎಲ್ಲಾ ಕಾಲದಲ್ಲೂ ಎಲ್ಲದರ ಬಗ್ಗೆಯೂ ಮಾತಾಡಲು ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ. ಇಷ್ಟಕ್ಕೂ ‘ಜನರಲೈಸ್’ ಮಾಡುವುದು ಅಂದರೆ ಏನು? ಭಾರತದಲ್ಲಿ ಕುಂತ ರಿಪೋರ್ಟರು ‘ಜಪಾನಲ್ಲಿ ಭಾರೀ ಭೂಕಂಪ’ ಅಂತ ಹೆಡ್ಡಿಂಗ್ ಕೊಟ್ಟರೆ, ಅದನ್ನ ನೀವು ‘ಇಡಿಯ ಜಪಾನ್ ಗಡಗಡ ನಡುಗಿತು’ ಅಂದುಕೊಳ್ತೀರೇನು? ಸಾವಧಾನದಿಂದ ಓದಿದಾಗ ಎಲ್ಲೆಲ್ಲಿ? ಏನು ಸಂಗತಿ? ಎಲ್ಲ ಅರ್ಥವಾಗುವುದು. ಹಾಗೇ ‘ಗಂಡಸು’ ಅಂದಾಗ ಆ ಕಾನ್ಸೆಪ್ಟಿನಲ್ಲಿ, ಆ ಕಥೆ-ಸಂದರ್ಭದಲ್ಲಿ ಬರುವ ‘ಅವನಂಥವರು’ ಎಂದು ಮಾತ್ರ ಅರ್ಥ.
    ನಾನು ನಿಮ್ಮನ್ನೊಮ್ಮೆ ಖಂಡಿತ ಭೇಟಿಯಾಗಲೇಬೇಕು. ನೀವು ಸ್ತ್ರೀಪರ ದನಿಯನ್ನು ಅನುಮಾನ ಮತ್ತು ವ್ಯಂಗ್ಯದಿಂದ ನೋಡುತ್ತಿರುವಿರಿ ಎಂದು ನನಗನಿಸುತ್ತಿದೆ. ಪರಸ್ಪರ ಚರ್ಚೆಯಿಂದ ಪೂರ್ವಗ್ರಹಗಳನ್ನು ಸರಿಪಡಿಸಿಕೊಳ್ಳಬಹುದು.
    ರಾಧಿಕಾ,
    ನಿಮ್ಮ ಸಲಹೆ ಸರಿಯಾಗಿಯೇನೋ ಇದೆ. ಆದರೆ, ಮಗುವಿಗೆ ‘ಸ್ಪರ್ಷ’ದ ಬಗ್ಗೆ ತಿಳುವಳಿಕೆ ನೀಡಲು ಹೋಗಿ ಸಂದೀಪ್ ಹೇಳಿದ ಹಾಗೆ ದ್ವೇಷ ಹುಟ್ಟುವಂತೆ ಆಗದಿರಲಿ ಅನ್ನುವುದಕ್ಕೆ ನನ್ನದೂ ಸಹಮತವಿದೆ.ಮತ್ತೊಂದು ಸಂಗತಿ,ನನ್ನ ಈ ಲೇಖನದ ಚಿಂತನೆ ಬಸ್ಸಿನ ಹೆಂಗಸಿನ ಕುರಿತಾದದ್ದು ಅನ್ನುವುದು ಎಂದು ಸ್ಪಷ್ಟ ಪಡಿಸಬಯಸುತ್ತೇನೆ. ಆಕೆಯಂಥ, ಅಂತಹ ಹಿನ್ನೆಲೆಯ (ಅವರು ಸದಾ ಊರೂರು ಅಲೆಯುತ್ತ ಕೆಲಸ ಮಾಡುವ ಜನ) ಹೆಣ್ಣುಮಕ್ಕಳನ್ನ ಯಾರು, ಹೇಗೆ ಎಜುಕೇಟ್ ಮಾಡಬಹುದು? ದಿಕ್ಕು ದೆಸೆ ಇಲ್ಲದವಳಾದರೂ ಸಹ ಅಕೆಗೆ ತನ್ನತನ ಇದ್ದೇ ಇರುತ್ತದೆ. ಯಾವನದೋ ಮುಟ್ಟುವಿಕೆ ಅಸಹ್ಯ ತರಿಸಿದರೂ ಅವಳು ತನ್ನ ‘ಅಂತರಂಗ’ದ ಭಾವ ಸರಿಯಾಗಿ ವ್ಯಕ್ತಪಡಿಸಲಾರದವಳಾಗಿರು ತ್ತಾಳೆ. ಇಲ್ಲಿ ನನಗೆ ಆಕೆಯ ಸ್ಥಿತಿಯ ಬಗ್ಗೆ ಮರುಕವಿದೆ. ಆದರೆ, ಅದಕ್ಕೊಂದು ಪರಿಹಾರ ಹುಡುಕುವ ದಾರಿ ಗೊತ್ತಿಲ್ಲ. ಇಂತಹ ನನ್ನ ಸೋಲಿನ ಬಗ್ಗೆಯೂ ನನಗೆ ಮರುಕವಿದೆ.
    ನಾನು ಬಿಳಿ ಸೀರೆಯ (ಅಂದರೆ ಇಲ್ಲಿ ಸೂಚ್ಯವಾಗಿ ನಾಗರಿಕ ಅಥವಾ ವೈಟ್ ಕಾಲರ್ ಅರ್ಥದ) ಹುಡುಗಿಯರಿಗೆ ಭಾಷಣ ಮಾಡಿ ನಮ್ಮ ಸಂಸ್ಕೃತಿಯ ಬಗ್ಗೆ ಹೇಳಬಲ್ಲೆ. ಆತ್ಮ ರಕ್ಷಣೆ, ಆತ್ಮಾಭಿಮಾನದ ಬಗ್ಗೆ ಭಾಷಣ ಬಿಗಿಯಬಲ್ಲೆ. ಲೇಖನದ ಕೊನೆಯಲ್ಲಿನ ಅಮ್ಮನ ಮಾತಿನಂತೆ ಹಾಲುಕರೆಯುವ ಕೆಲಸ ನನ್ನದು. ಯಾವುದೇ ರಿಸ್ಕಿಲ್ಲದ, ಶ್ರಮವಿಲ್ಲದ ಕೆಲಸ! ಆದರೆ ಕೊಟ್ಟಿಗೆ ಗುಡಿಸುವುದು? ತಾನು- ತನ್ನ ಪಾಡಿನ, ಅನಕ್ಷರಸ್ತ ಕೂಲಿ ಹೆಂಗಸಿನ- ಅಂತಹವರ ದನಿಯಾಗಬೇಕೆನ್ನುವ ಹಂಬಲವಿದ್ದರೂ ದಾರಿ ತಿಳಿಯದೆ ಹೋಗಿದೆ ಅನ್ನುವುದೇ ನನ್ನ ಕೊರಗು.

    - ಚೇತನಾ 

  • Chetana, I think the problem is the other way round. The people whom we think are uneducated (rather illiterate) have voice in them to raise against atrocities than the literate community. In a similar situation a college going girl OR any other woman from the privileged class would go away (in most cases) from the man than try shouting and create a scene.
  •                                                                                                          – ರಾಧಿಕಾ

  • ರಾಧಿಕಾರ ಈ ಮಾತಿಗೆ ನನ್ನ ಸಹಮತ ಇದೆ. ಆದರೂ ಎರಡೂ ವಿಭಾಗಗಳಲ್ಲಿ ಅಪವಾದಗಳಿವೆ. ಕೆಲವೊಮ್ಮೆ ಬಡತನ, ಅನಾಥ ಪ್ರಜ್ಞೆ ಕೂಡ ಹೆಂಗಸರನ್ನ ಮೂಕವಾಗಿಸತ್ತೆ. ಹಾಗೆಯೇ ಶ್ರೀಮಂತಿಕೆಯ ಮರ್ಯಾದೆ, ಕೂಗಾಡಿದರೆ ಎಲ್ಲಿ ಡಿಸಿಪ್ಲಿನ್ನಿಗೆ ತೊಂದರೆಯೋ ಎನ್ನುವ ಹುಸಿ ಬಿನ್ನಾಣಗಳು ಕೂಡ, ಕೆಲವೊಮ್ಮೆ ಜೀವ ಭಯ ಕೂಡ ಮೌನಕ್ಕೆ ಕಾರಣವಾಗುತ್ತದೆ. ಜೊತೆಗೆ, ಅದೇ ಆ ಕುಡುಕನ ಬದಲು ನೀಟಾದ ಹುಡುಗನೋ ಇನ್ಯಾರೋ ಹಾಗೆಲ್ಲ ಮಾಡಿದ್ದರೆ ಆಕೆಯ ರೆಸ್ಪಾನ್ಸ್ ಹೇಗಿರುತ್ತಿತ್ತು ಅನ್ನುವ ಪ್ರಶ್ನೆ ಕೂಡ ನನ್ನ ಕಾಡಿದೆ. ಇಲ್ಲಿ, ಸಂದೀಪರ ‘ಇಷ್ಟವಾಗಬಲ್ಲ/ ಆಗದ ಸ್ಪರ್ಶ’ ಅನ್ನುವ ಕಾನ್ಸೆಪ್ಟು ಏನಾದರೂ ಪರಿಹಾರ ಒದಗಿಸಿಕೊಡಬಲ್ಲದೇ?  ಇದು ‘ಆಕೆ’ಗೆ ಮಾತ್ರ ಸೀಮಿತಗೊಳಿಸಬಹುದಾದ ಪ್ರಶ್ನೆಯೋ ಅಥವಾ ಜನರಲೈಸ್ ಮಾಡಬಹುದೋ? ತಿಳಿಯುತ್ತಿಲ್ಲ…
  •                                                                                                                      - ಚೇತನಾ 
  • ಇಷ್ಟ ಇದ್ರೆ ಕುಡುಕ ಮುಟ್ಟಿದ್ರೂ ಮೈಯೆಲ್ಲ ರೋಮಾಂಚನ
    ಇಷ್ಟ ಇಲ್ಲ ಅಂದ್ರೆ ಶಾರೂಕ್ ಖಾನ್ ಮುಟ್ಟಿದ್ರೂ ಅಷ್ಟೆ ಸಲ್ಮಾನ್ ಖಾನ್ ಮುಟ್ಟಿದ್ರೂ ಅಷ್ಟೆ!

                                                                                                            ಸಂದೀಪ್

    ಅಕ್ಕಾ,
    ಕೊಂಚ ತಡವಾಗಿ ನಿಮ್ಮ ಬ್ಲಾಗನ್ನು ತಾಕಿದೆ.
    ಚರ್ಚೆ ಶುರು ಮಾಡಿ ಸಾವಕಾಶವಾಗಿ, ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗುವ ನಿಮ್ಮ ಕೌಶಲ್ಯ ಮೆಚ್ಚುಗೆಯಾಗುತ್ತದೆ.
    ಹಿಂದೆಲ್ಲಾ ಹೆಣ್ಣಿನ ಬಗ್ಗೆ ಚರ್ಚೆ ನಡೆಸುವಾಗ, ಹೆಣ್ಣಿನ ಹಕ್ಕು, ಹೆಣ್ಣಿನ ಸ್ಥಾನಮಾನ, ಸಮಾನತೆಯ ಬಗ್ಗೆ ಚರ್ಚೆ ನಡೆಯುವಾಗ ನಾನು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೆ ಎಂಬುದನ್ನು ಹೇಳುತ್ತೇನೆ. ಇದಕ್ಕೆ ನನಗೆ ಸರಿಯಾದ ಉದಾಹರಣೆಯಾಗಿ ಇನ್ನೊಂದು ಬಗೆಯ ಚರ್ಚೆ ಸಹಾಯಕ್ಕೆ ಬರಬಹುದು ಎಂದು ಭಾವಿಸುತ್ತೇನೆ. ಈಗ ಎರಡು ಕೋಮುಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದುಕೊಳ್ಳಿ. ನಾನು ಹಿಂದೂ, ಚರ್ಚೆಯಲ್ಲಿನ ಇನ್ನೊಂದು ಕೋಮು ಮುಸ್ಲೀಮರದು ಎಂದುಕೊಳ್ಳೋಣ. ನಾನು ಎಷ್ಟೇ ಪ್ರಾಮಾಣಿಕನಾಗಿದ್ದರೂ, ಇನ್ನೊಬ್ಬನ ವಾದದಲ್ಲಿನ ಸತ್ವವನ್ನು ಗುರುತಿಸುವ ಎಚ್ಚರವನ್ನು ಹೊಂದಿದ್ದರೂ ಸಹ ನಾನು ‘ನನ್ನ ಧರ್ಮ ಆತನದ್ದಕ್ಕಿಂತ ಉದಾತ್ತವಾದದ್ದು, ಶ್ರೇಷ್ಠವಾದದ್ದೆ, ಆರ್ಷೇಯವಾದದ್ದು, ಪುರಾತನವಾದದ್ದು, ಜಗತ್ತಿನ ನನ್ನ ಧರ್ಮದಿಂದ ಸಿಕ್ಕ ಕೊಡುಗೆ ದೊಡ್ಡದು’ ಎಂಬ ಭಾವದಿಂದ ಹೊರಬಂದು ಚರ್ಚಿಸಲು ಸಾಧ್ಯವಾಗದು.

    ಇದು ಒಂದು ಸಮಸ್ಯೆ. ಮತ್ತೊಂದು ಸಮಸ್ಯೆಯೆಂದರೆ, ಕೆಲವೊಮ್ಮೆ ನನ್ನ ಧರ್ಮದ ಬಗೆಗಿನ ಹೆಮ್ಮೆಯ ಭಾವವನ್ನು ತಗ್ಗಿಸಿಕೊಂಡು, ನಾನು ಕೊಂಚ ಇನ್ ಫೀರಿಯರ್ ಆಗಿ, ನನ್ನಿಂದಲೇ ತೊಂದರೆ ನಡೆಯುತ್ತಿದೆ ಎಂದು ಒಪ್ಪಿಕೊಂಡು ಚರ್ಚೆಗೆ ಅನುವಾದರೆ ನನ್ನೊಂದಿಗೆ ವಾದಿಸುವ ಮುಸ್ಲೀಮನು ತನ್ನ ಧರ್ಮವೇ ಶ್ರೇಷ್ಠ, ತನ್ನ ದೇವರೊಬ್ಬನೇ ಸತ್ಯ, ತನ್ನ ಧಾರ್ಮಿಕ ಗ್ರಂಥವೊಂದೇ ದೇವರಿಂದ ಬಂದದ್ದು, ಉಳಿದವರೆಲ್ಲಾ ಅಪವಿತ್ರರು ಎಂಬ ಭಾವದಿಂದ ಬಿಡುಗಡೆ ಪಡೆದು ಮಾತನಾಡುತ್ತಿದ್ದಾನೋ ಇಲ್ಲವೋ ಎಂಬ ಸಂಶಯ ಬರುತ್ತದೆ. ಒಮ್ಮೆ ಆ ಅನುಮಾನ ಬಂದಾಗ ನಾನು ನನ್ನೆಲ್ಲಾ ಅಭಿಮಾನ, ಹೆಮ್ಮೆಯನ್ನು ಬಿಟ್ಟು, ತಪ್ಪು ನನ್ನಲ್ಲೇ ಇರಬಹುದು ಎಂದು ಪ್ರಾಮಾಣಿಕನಾಗಿ ವಾದಕ್ಕೆ ಬಂದದ್ದು ನನ್ನ ಅಸಹಾಯಕತೆಯಾಗಿವಿಡುತ್ತದೆ. ಯುದ್ಧದಲ್ಲಿ ಎಲ್ಲಾ ಶಸ್ತ್ರಾಸ್ತ್ರ ಬಿಟ್ಟು ಬರಿಗೈಲಿ ನಾನು ಹೋರಾಟಕ್ಕೆ ಹೋದಾಗ ಎದುರಾಳಿ ನನಗೆ ತಿಳಿಯದೆ ಬೆನ್ನ ಹಿಂದೆ ಕತ್ತಿ ಅಡಗಿಸಿಕೊಂಡಿರಬಹುದಾ ಎಂಬ ಸಂಶಯದಂತೇ ಇದು. ಆಗ ನಾನು ನನ್ನ ರಕ್ಷಣೆಗೆ ನನ್ನ ಧರ್ಮದ ಅಭಿಮಾನ, ಹೆಮ್ಮೆ, ಪ್ರತಿಷ್ಠೆ ಎಂಬ ಕವಚವನ್ನಿಟ್ಟುಕೊಂಡೆ ಮುಂದುವರೆಯುತ್ತೇನೆ. ನಾನು ಹೀಗೆ ಎಚ್ಚರನಾಗಿರುವುದಕ್ಕೆ ಎದುರಾಳಿಯಲ್ಲಿನ ಹುಳುಕುಗಳೇ ಕಾರಣ ಎಂದು ವಾದಿಸುತ್ತೇನೆ.

    ಬಹುಶಃ ಇದೇ ಅನಿಸಿಕೆ ಹೆಣ್ಣಿನ ಬಗ್ಗೆ ಹೆಣ್ಣು ಹಾಗೂ ಗಂಡಿನ ನಡುವೆ ನಡೆಯುವ ಚರ್ಚೆಗಳಲ್ಲಿ ಆವರಿಸಿರುತ್ತದೆ ಅನ್ನಿಸುತ್ತದೆ. ನನ್ನ ನಿಲುವಿನ ಬಗ್ಗೆ, ನನ್ನ ನಿಲುವಿನಲ್ಲಿನ ಪ್ರಾಮಾಣಿಕತೆಯ ಬಗ್ಗೆ ಸ್ಪಷ್ಟತೆ ಪಡೆಯದೆ ಯಾವ ಚರ್ಚೆಯನ್ನೂ ಮಾಡಬಾರದು ಎಂಬ ಕಾರಣದಿಂದ ಇಷ್ಟು ಹೇಳಿದೆ.

    ಇನ್ನು ನೀವು ಪ್ರಸ್ತಾಪಿಸಿರುವ ಘಟನೆಯನ್ನು ಅವಲೋಕಿಸಿದರೆ ನನಗೆ ಒಂದು ಸಂಗತಿಯ ಬಗ್ಗೆ ಆಶ್ಚರ್ಯವಾಯ್ತು. ಅಭಿವ್ಯಕ್ತಿಯನ್ನು ಆಯ್ದುಕೊಂಡವರು, ಅಂದರೆ ಬರಹಗಾರರು, ಮಾತುಗಾರರು, ಚಿಂತಕರು, ಪತ್ರಕರ್ತರು, ಹೋರಾಟಗಾರರು ಇಡೀ ಸಮಾಜದ ಧ್ವನಿಯಾಗಲು ಹವಣಿಸುವುದು ಏತಕ್ಕೆ? ಧ್ವನಿಯಿಲ್ಲದವರಿಗೆ ಧ್ವನಿಯಾಗುವುದು ಎಂಬುದರಲ್ಲೇ ‘ನಮ್ಮ ಗಂಟಲಿನ’ ಅಹಂಕಾರ ಬೆರೆತಿರುತ್ತದಾ ಎಂಬ ಸಂಶಯ ನನ್ನದು. ಹಲವು ಸಂದರ್ಭದಲ್ಲಿ ನನಗೆ ಇಂಥ ಅನುಭವವಾದದ್ದಿದೆ. ಟ್ರೈನಿನಲ್ಲಿ ಕೂತು ಒಬ್ಬ ಸಿಗರೇಟು ಹೊತ್ತಿಸಿರುತ್ತಾನೆ. ಟ್ರೇನಿನಲ್ಲಿ ಸಿಗರೇಟು ಸೇದುವುದು ಅಪರಾಧ, ಅದಕ್ಕೆ ದಂಡವಿದೆ ಎಂಬ ಮಾಹಿತಿ ನನಗಿದೆ. ನಾನು ಆತನಿಗೆ ಅದನ್ನು ಆರಿಸುವಂತೆ ಹೇಳಬೇಕು. ಹಾಗೆ ಹೇಳಿದರೆ ಆತ ಏನು ಹೇಳಬಹುದು, ಉಳಿದವರು ನನ್ನ ನೆರವಿಗೆ ಬರುತ್ತಾರಾ? ನಾನು ಒಬ್ಬಂಟಿಯಾದರೆ ಹೇಗೆ? ಎನ್ನಿಸತೊಡಗುತ್ತದೆ. ಇದಕ್ಕೆ ಕಾರಣ ನಾನು ಅಲ್ಲಿ ರೇಲ್ವೆ ಬೋಗಿಯಲ್ಲಿದ್ದವರೆಲ್ಲರ ಪರವಾಗಿ ಮಾತನಾಡಬೇಕು ಎಂದು, ಅವರೆಲ್ಲರ ನೈತಿಕ ಪ್ರಜ್ಞೆಯಾಗಬೇಕು ಎಂದು ಭಾವಿಸುವುದು. ಸುಮ್ಮನೆ ನಾನು ಒಬ್ಬ ಸಾಮಾನ್ಯ ಮನುಷ್ಯನಾಗಿ ಆತನಿಗೆ ‘ಆರಿಸಯ್ಯಾ ಸಿಗರೇಟು, ಕಾಣಲ್ವಾ ಕೂತಿರೋದು’ ಎಂದು ಹೇಳುವುದಕ್ಕೆ, ಅದನ್ನು ವೈಯಕ್ತಿಕ ನೆಲೆಯಲ್ಲಿ ನಿಭಾಯಿಸುವುದಕ್ಕೆ ಏಕೆ ಸಾಧ್ಯವಾಗದು ಎಂದು ಯೋಚಿಸಿದ್ದೇನೆ. ಅಲ್ಲೇ ಪಕ್ಕದಲ್ಲಿ ಕೂತಿದ್ದ ಕೂಲಿ ಹೆಂಗಸೊಬ್ಬಳು ದಬಾಯಿಸಿ ಸಿಗರೇಟು ಬಂದ್ ಮಾಡಿಸಿದಾಗ ನಾನು ಆಕೆಯ ವ್ಯಕ್ತಿತ್ವದಲ್ಲಿ ಹೇಗೆ ಅಂಥ ಗಟ್ಟಿತನ ಬಂತು, ನಾಯಕನಾಗುವನಿಗೆ ಇಂಥ ಗಟ್ಟಿತನ ಎಷ್ಟು ಆವಶ್ಯಕ ಎಂದು ಯೋಚಿಸುತ್ತಾ ಕೂತುಬಿಡುತ್ತೇನೆ.

    ಪ್ರತಿಕ್ರಿಯೆ ದೀರ್ಘವಾಯ್ತು, ಅಪ್ರಸ್ತುತ ಅನ್ನಿಸಿದರೆ ಕಟ್ ಮಾಡಿಬಿಡಿ!

    -ಸುಪ್ರೀತ್

    Bottom line is most of the times, we are paper tigers being mute spectators to what happens around us ) - ರಾಧಿಕಾ

    ಮೊದಲಿಗೆ, ಸಂದೀಪರ ಮಾತಿಗೆ ಸಹಮತ. ನಂಗೆ ಅಮೃತ ಮತಿ ನೆನಪಾಯ್ತು. ಆದ್ರೆ, ಆ ಕಥೆಯ ಹಿಂದಿನ ಸೈಕಾಲಜಿಯೇ ಬೇರೆ ಅಲ್ವಾ?

    ಸುಪ್ರೀ,
    ನೀನು ಹೇಳಿದೆಯಲ್ಲ, ರೈಲುಬೋಗಿಯ ಎಕ್ಸಾಂಪಲ್ಲು, ನನ್ನದೂ ಅದೇ ಹಣೆಬರಹ. ಮತ್ತು ಮೊದಲಲ್ಲಿ ನೀ ಹೇಳಿದ ಹಾಗೆ “ಎಲ್ಲರೂ ಎಲ್ಲವನ್ನೂ ಯಾಕೆ ಹೇಳಲೇಬೇಕು?”ಅನ್ನುವ ಪ್ರಶ್ನೆ ನಂದೂ ಕೂಡ. ಆದ್ರೂ ಕೆಲವೊಂದ್ ಸಾರ್ತಿ ನಮ್ಮ ಅಸಹಾಯಕತೆ, ಸೀಮಿತತೆಗಳು ಒಳಗೊಳಗೆ ಪೀಡಿಸಲು ಶುರುವಿಡುತ್ತವೆ. ಈ ಘಟನೆ ಖುದ್ದು ಆ ಹೆಂಗಸಿಗೇ ನೆನಪಿದೆಯೋ ಇಲ್ಲವೋ? ಅಥವಾ ಇಂಥದನ್ನು ಅವಳೆಷ್ಟು ನುಂಗಿ ನೊಣೆದಿರುವಳೋ? ನಾನು ಮಾತ್ರ ಅದನ್ನು ನೆವವಾಗಿಟ್ಟುಕೊಂಡು ಪಾಠ ಕಲಿಯುತ್ತಿರುವೆ. ಎಲ್ಲವನ್ನೂ ಮಾಡಿಬಿಡಬೇಕೆನ್ನುವ, ಮಾಡುವೆನೆನ್ನುವ ಭ್ರಮೆ ನನಗಿಲ್ಲವಾದರೂ ಹಾಗೆ ನೋಡಿಕೊಂಡು ಸುಮ್ಮನುಳಿಯುವ ನಿರ್ಲಿಪ್ತತೆಯೂ ಇಲ್ಲದಿರುವುದೇ ಸದ್ಯದ ಸಮಸ್ಯೆ. ನನಗೆ ಗೊತ್ತು, ಮನಸ್ಸು ಇನ್ನೂ ಸಾಕಷ್ಟು ಪ್ರೌಢವಾಗದ ಕಾರಣ ಇಂಥದೆಲ್ಲ ಆಲೋಚನೆಗಳು ಹುಟ್ಟಿ ನಮ್ಮ ತಲೆ ಮೇಲೇ ಬೀಳುತ್ತಿದೆಯೇನೋ ಎಂಬ ಚಿಂತನೆಗೆ ನಮ್ಮನ್ನು ದೂಡುತ್ತವೆಯೆಂದು!

    ನೀನು ಶುರುವಲ್ಲಿ ಹಾಕಿದ ಪೀಠಿಕೆ ಸರಿಯಾಗಿದೆ. ಅದನ್ನು ನಾನು ಸ್ವಲ್ಪ ತಿರುಚಿ ಔಟ್ ಆಫ್ ದ ಸಬ್ಜೆಕ್ಟ್ ಮಾಡಬಹುದಾದರೆ, ‘ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಭಯೋತ್ಪಾದಕರಲ್ಲಿ ಬಹುತೇಕರು ಮುಸ್ಲಿಮರೇ’ ಎನ್ನುವ ಮಾತು ಹೇಳುವಾಗ ನಡೆಯುವ ಕೋಲಾಹಲವನ್ನು ಗಮನಿಸಬೇಕು. ಈ ಮಾತನ್ನು ಅದು ಯಾರೇ ಹೇಳಿದರೂ (ಒಬ್ಬ ಹಿಂದೂ ಹೇಳಿದರೆ ಆತ ‘ಕೋಮುವಾದಿ’ ಎಂದು ಗುರುತಿಸಲ್ಪಡುವನು, ಮುಸ್ಲಿಮನೆ ಹೇಳಿದರೆ ‘ಕಾಫಿರ’ನಾಗುವನು) ಪಾರ್ಥ ತಪ್ಪಿದ್ದಲ್ಲ.
    ಹಾಗೆಯೇ,
    ಹೆಂಗಸರ ಬಗ್ಗೆ ಯಾರೇ ಮಾತಾಡಲಿ, ಅವರನ್ನು ‘ಸ್ತ್ರೀವಾದಿ’ ಎಂದು ಕರೆದು ‘ಸ್ತ್ರೀವ್ಯಾಧಿ’ ಎಂದು ಕುಹಕವಾಡುವುದು; ಗಂಡಸರು ಮಾತಾಡಿದರೆ ‘ಮಹಿಳಾಪರ ಕಾಳಜಿ’ ಎಂದು ದ್ವಂದ್ವಾರ್ಥ ಹೊರಡಿಸುವುದು ಸಾಮಾನ್ಯ.
    ಆದರೆ, ಈ ಲೇಖನದಲ್ಲಿ ನಾನು ಹೆಂಗಸಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕಿಂತ ಹೆಚ್ಚಾಗಿ ಆಕೆಯನ್ನು ಒಂದು ವರ್ಗದ ಪ್ರತಿನಿಧಿಯಾಗಿ ತೆಗೆದುಕೊಂಡು ಅದರ ಹಿಂದಿನ ಕಷ್ಟ ಸುಖಗಳ ಬಗ್ಗೆ ಯೋಚಿಸಲು ಹೊರಟಿದ್ದೆ. ಅದಕ್ಕೇ, ಬಿಳಿ ಸೀರೆ/ಪಂಚೆಯ ಹುಡುಗ- ಹುಡುಗಿಯರು ಮತ್ತು ಬಸ್ಸಿನ ಹುಳ್ಳಗಿನ ಜನರು ನನಗೆ ಬೇರೆ ಬೇರೆ ಲೋಕದವರಾಗಿ ಕಂಡರು. ಜೊತೆಗೇ, ನನ್ನ ಜಗತ್ತು ನಾನು ಕಂಡಷ್ಟು ಮಾತ್ರವಾಗಿಬಿಟ್ಟಿತ್ತಲ್ಲ! ಎಂದು ಸೋಜಿಗವೂ ಆಯಿತು.
    ಹೌದಲ್ವಾ? ನಮ್ಮ ಜಗತ್ತು, ಅನುಭವ ಅದೆಷ್ಟು ಸೀಮಿತ!

    (ಕ್ಷಮೆಯಿರಲಿ. ಸುಪ್ರೀತ್ ಮಾತಿಗೆ ಸಿಕ್ಕುಬಿಟ್ಟರೆ ನಾನಂತೂ ಸದ ಔಟ್ ಆಫ್ ಟಾಪಿಕ್ ಹೊರಟುಬಿಡ್ತೀನಿ. ಇದ್ರಲ್ಲಿ ನನ್ ತಪ್ಪೇನೂ ಇಲ್ಲ!)

     

    ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು…

    September 6, 2008 at 5:13 am | In ಕಥೆ ಥರ... | 9 Comments
    Tags: , , ,

    ಬೆಂಗಳೂರಿಂದ ಹೊರಟು ಹೊಸಕೋಟೆ ಸ್ಟಾಪಲ್ಲಿಳಿದಾಗ ನೀಲಿ ಕಲರಿನ ಸ್ವಾಗತ್ ಬಸ್ಸು ರೊಂಯ್… ರೊಂಯ್ಯ್ಯ್ಯ್ ಅಂತ ಸದ್ದು ಮಾಡುತ್ತ, ಇನ್ನೇನು ನೀ ಬರುವುದರಳೊಗೆ ಹೊರಟೇಬಿಟ್ಟೆ ಅಂತ ಹೆದರಿಸ್ತ ನಿಂತಿತ್ತು. ಟಾಕೀಸಿನೆದುರು ದೊಂಬರಾಟದ ಮಜ ತೊಗೊಳ್ತ ಹೆಜ್ಜೆಯೆಣಿಸ್ತಿದ್ದವಳಿಗೆ ಅದು ಕಂಡು ಎದ್ದೆನೋ ಬಿದ್ದೆನೋ ಅಂತ ದಾಪುಗಾಲುಹಾಕಿ ನಡೆದೆ, ಮತ್ತೆ ನೂರಾ ಅರವತ್ತೇಳನೇ ಸಾರ್ತಿ ಮೋಸ ಹೋಗಿದ್ದೆ!
    ಮತ್ತಿನ್ನೇನು!? ಹಾಗೆ ಹೊಸಕೋಟೆಯಿಂದ ಹೊರಡುವ ಪ್ರತಿ ಬಸ್ಸೂ ಸ್ಟಾರ್ಟ್ ಮಾಡಿಕೊಂಡಾದಮೇಲೂ ಅರ್ಧ ಗಂಟೆ ಕಾದು ತನ್ನ ಟಾಪು ಭರ್ತಿಯಾಗುವ ತನಕವೂ ನಿಂತಿರುತ್ತದೆ ಅನ್ನೋದು ಗೊತ್ತಿದ್ದೂ….

    ಆ ಬೆಳಗಿನ ಒಂಬತ್ತು ಗಂಟೆಗೇ ಬಸ್ಸು ಹುಳ್ಳಗಾಗಿತ್ತು. ಒಂಥರಾ ಹಾಳಾದ ಹುಳಿ ಮಜ್ಜಿಗೆ ವಾಸನೆ. ದೊಗಲೆ ಡ್ರಾಯರ್ರು ಹಾಕಿ ಅದು ಕಾಣುವಷ್ಟು ಮೇಲೆ ಲುಂಗಿ ಎತ್ತಿ ಕಟ್ಟಿ, ಹೆಗಲ ಮೇಲೊಂದು ಶಾಲು, ಟವೆಲು… ಅವರವರ ಅಂತಸ್ತಿಗೆ ತಕ್ಕ ಹಾಗೆ. ಅದಾಗಲೇ ಒಂದಷ್ಟು ತಾವೂ ಹುಳ್ಳಗಾಗಿ ಬೀಡಿ ಸೇದುತ್ತಲೋ ನಶ್ಯ ನುರಿಯುತ್ತಲೋ ಬಸ್ಸು ಹೊರಡೋದನ್ನೇ ಕಾಯುತ್ತ ಬಸ್ಸಿನ ತುಂಬ ಚಡಪಡಿಸ್ತಿದ್ದರು ಒಂದಷ್ಟು ಗಂಡಸರು.
    ಝರಿಝರಿಯ ಸೀರೆ ಉಟ್ಟು, ಬಾಯಿ ತುಂಬ ತಂಬಾಕು- ಎಲೆ ತುಂಬಿಕೊಂಡು ಕಚಪಚ ಮಾಡುತ್ತ ಬಸ್ಸು ಊರು ಮುಟ್ಟೋದು ತಡವಾದಷ್ಟೂ ಚೆನ್ನ ಅಂತ ಹಾರೈಸ್ತ ಕೂತಿದ್ದರು ಹೆಂಗಸರು.
    ಅವರೆಲ್ಲರ ನಡುವೆ ಕಿಸಿಕಿಸಿ ಅನ್ನುತ್ತ ಕಂಡಕ್ಟರನ ಕಟಾಕ್ಷಕ್ಕೆ ಪೈಪೋಟಿ ನಡೆಸ್ತಿದ್ದ ಹರೆಯದ ಒಂದಷ್ಟು ಹೆಣ್ಣುಗಳು. ಇವೆಲ್ಲವನ್ನೂ ಮೀರಿ, ಡ್ರೈವರನ ಪಕ್ಕದ ಮೂಲೆಯಲ್ಲೊಂದು ಭಾರೀ ಸೈಜಿನ ಟೀವಿ ಅಲ್ಲಿದ್ದವರೆಲ್ಲರನ್ನೂ ಒಟ್ಟಾಗಿ ಸೆಳೆಯುತ್ತಿತ್ತು. ಅದರಲ್ಲೊಂದು ತೆಲುಗು ಸಿನೆಮಾ. ದಪ್ಪಕೆ ತೀಡಿದ ಹುಬ್ಬಿನ ಹೀರೋ ಹೀರೋಇನ್ನಿನ ಕೆನ್ನೆ ತಿನ್ನುತ್ತಿದ್ದ. ನೋಡುತ್ತ ಕುಂತಿದ್ದ ಹೆಂಗಸರೆಲ್ಲ ‘ಅಯ್ಯಾ…. ತಗಿ ತಗೀ… ’ ಅನ್ನುತ್ತಲೇ ಎಲೆಯಡಿಕೆ ಜಗಿತದ ವೇಗ ಹೆಚ್ಚಿಸ್ಕೊಂಡು ಮುಸಿನಗತೊಡಗಿದರು. ಅವರ ಸಂಕೋಚಕ್ಕೆ ಸವಾಲಾಗಿ ಬಸ್ಸಿನ ಬಾರು ಹಿಡಿದು ನೇತಾಡ್ತಿದ್ದ ಹುಡುಗರು ಪೋಲಿ ಪೋಲಿ ತೆಲುಗು ಡೈಲಾಗು ಹೊಡೆಯುತ್ತ ವಾತಾವರಣವನ್ನ ಮತ್ತಷ್ಟು ನಶೀಲಾ ಆಗಿಸತೊಡಗಿದರು. ಇವೆಲ್ಲದರ ಮಧ್ಯೆ ಬಸ್ಸು ಹೊರಟಿದ್ದೇ ಯಾರ ಗಮನಕ್ಕೂ ಬರಲಿಲ್ಲ!

    ಬಸ್ಸು ತೆವಳುತ್ತ ನಿಲ್ಲುತ್ತ ಏದುಸಿರು ಬಿಡುತ್ತ ಹೋಗುತ್ತಲೇ ಇತ್ತು. ನಡುವಲ್ಲೊಂದು ಯನಗುಂಟೆ ಸ್ಟಾಪು. ಅಲ್ಲಿ ಸುಮಾರು ಎಂಟು- ಹತ್ತು ವಡ್ಡರ ಹೆಂಗಸರು ಹತ್ತಿಕೊಂಡರು. ಅವರೊಳಗೊಬ್ಬ ದುಂಡುದುಂಡನೆಯ ಹೆಣ್ಣು. ಹರಿದ ಉದ್ದನೆ ಜಾಕೀಟಿನ ಕೆಳಗೆ ಎಂಥದೋ ಬಗೆಯ ಲಂಗ ಹಾಕಿದ್ದಳು. ಅವಳು ಬಂದು ನಿಂತಿದ್ದೇ ಹೆಂಡದ ಮತ್ತಲ್ಲಿ ತೇಲಾಡ್ತಿದ್ದ ಕೆಲವರಿಗೆ ಏನೋ ಹುಕ್ಕಿ ಬಂದ ಹಾಗಾಯ್ತು. ಅವಳ ಹಿಂದಿನ ಸೀಟಿಗೆ ಆತುಕೊಂಡು ನಿಂತಿದ್ದ ಮುದುಕ ಮುಂದೆ ಬಂದು ಹೆಚ್ಚೂ ಕಡಿಮೆ ಅವಳಿಗೆ ಅಂಟಿಕೊಂಡೇ ನಿಂತ. ಬಹುಶಃ ಅವನ ಕೈ ಎಲ್ಲೆಲ್ಲೋ ತಡಕಾಡಿರಬೇಕು… “ಏ ಥೂತ್….” ಅಂತ ಅವಳು ಕ್ಯಾಕರಿಸಿ ಉಗಿದಿದ್ದು ಸ್ವಲ್ಪ ಮುಂದೆ ಕುಂತಿದ್ದ ನನ್ನ ವರೆಗೂ ಸಿಡಿಯಿತು.
    ಅವಳ ಉಗಿತ ಅವನಿಗೆ ಮತ್ತಷ್ಟು ಹುರುಪು ತುಂಬಿರಬೇಕು, ಎಲ್ಲರೆದುರೇ ತನ್ನ ಲೀಲೆಗೆ ಶುರುವಿಟ್ಟ. ಹೌದು… ಎಲ್ಲರೆದುರೇ!!
    ಬಸ್ಸಲ್ಲಿ ಕುಂತಿದ್ದವರೆಲ್ಲರೂ ನಾನೂ ಅದನ್ನ ನೋದಿಯೂ ನೋಡದವರಂತೆ ಇದ್ದುಬಿಟ್ಟಿದ್ದೆವು. ಆ ಹೆಂಗಸು “ತೆಗೆಯಲಾ ಮಾದರ್ ಛೋತ್…” ಅಂತೆಲ್ಲ ಅನ್ನುತ್ತ ಕೊಸರಾಡ್ತಲೇ ಇದ್ದಳು. ಅಂವ ಕೊನೆಗೂ ಏನೂ ಮಾಡಲಾಗದೆ ಸುಸ್ತು ಹೊಡೆದು ಅತ್ತಿಬೆಲೆಯಲ್ಲಿ ಇಳಿಯಹೊರಟಾಗ ‘ಮಡಗಲಾ ದುಡ್ನ’ ಅಂತ ಕಂಕುಳಲ್ಲಿ ಅವನ ಕುತ್ತಿಗೆ ಅವುಚಿ ನಿಂತುಬಿಟ್ಟಳು!

    ಇವೆಲ್ಲ ರಂಪಾಟ ಮುಗಿಯುವ ಹೊತ್ತಿಗೆ ಕೆಯಿಬಿಯೆದುರು ಬಸ್ಸು ನಿಂತು ನಾನು ಇಳಿದುಕೊಂಡೆ. ಅಲ್ಲಿ ನನಗಾಗಿ ಕಾದು ನಿಂತಿದ್ದ ಬಿಳಿ ಪಂಚೆ ಹುಡುಗರು, ಸೀರೆ- ತುರುಬಿನ ಹೆಂಗಸರು, ಮನೆಯೊಳಗಿಂದ ತೇಲಿ ಬರುತ್ತಿದ್ದ ಧೂಪದ ಘಮ, ಅಂಗಳದ ಹಾದಿಯುದ್ದಕ್ಕೂ ನೆಟ್ಟಿದ್ದ ಧ್ಯೇಯ ವಾಕ್ಯಗಳು…. ಇವೆಲ್ಲವೂ ಟೀವಿಯಲ್ಲಿ ತೋರುವ ಹಾಗೆ ಕಾಣತೊಡಗಿ, ಬರೀ ಬಸ್ಸಿನ ತುಂಬ ತುಂಬಿದ್ದ ಜನರೇ ಸುತ್ತ ಮುತ್ತ ಆವರಿಸತೊಡಗಿದರು. ನನ್ನದೇ ಒಂದು ಚಿಕ್ಕ ಕೋಟೆ ಕಟ್ಟಿಕೊಂಡು ಜಗತ್ತೆಲ್ಲ ಅದರಲ್ಲೇ ಇದೆ ಅಂದುಕೊಂಡಿದ್ದ ಭ್ರಮೆ ಕಳಚತೊಡಗಿತು.
    ಒಳಗೆಲ್ಲೋ ಅಮ್ಮನ ದನಿ ಜೋರಾಗಿ ಕೇಳ್ತಿತ್ತು. “ಹಾಲು ಕರಿಯೋ ಮೊದಲು ಕೊಟ್ಟಿಗೆ ತೊಳೀಬೇಕು… ಓಹೋ…!! ಮೈಕೈ ಕೊಳೆಯಾಗದ ಕೆಲಸಕ್ಕೆ ಬಂದ್ಬಿಡ್ತಾರೆ ಇವ್ರು!”
    ಹೌದಲ್ಲ!?
    ಹಾಲು ಕರೆಯುವ ಮೊದಲು ಕೊಟ್ಟಿಗೆ ಗುಡಿಸಬೇಕು. ಆದರೆ, ಪೊರಕೆ ಎಲ್ಲಿದೆ!?

    (ಇದು ಕೆಂಡ ಸಂಪಿಗೆಗಾಗಿ ಬರೆದಿದ್ದು)

    Blog at WordPress.com. | Theme: Pool by Borja Fernandez.
    Entries and comments feeds.