ಸುಮ್ಮನೆ ವಿಷಾದ…
March 13, 2008 at 7:44 am | In ಒಡಲಾಳದ ಹಾಡು |ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ
ಈ ಬೆಳಗನ್ನ ಬಲಿಕೊಡಲೇಕೆ ನಾನು?
ಎಷ್ಟೊಂದು ಕೆಲಸವಿದೆ,
ಕಳೆದ ಫೈಲು ಹುಡುಕಬೇಕು
ನನ್ನ ಜಾಯಮಾನ ಗೊತ್ತಲ್ಲ?
ಕಳಕೊಳ್ಳುತ್ತಲೇ ಇರುವುದು…
ನಿನ್ನನೆಲ್ಲಿ ಹುಡುಕಲಿ ಹೇಳು?
ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ,
ಅದೆ ಮಾತು, ಅದೆ ನಗು
ಅದೆ ಅದೇ ದೇಹ.
ಅದರೊಳಗೆ ನೀನಿದ್ದೆ,
ಎಲ್ಲಿ ಹೋದೆ!?
ಕಾಲಮೇಲೆ ನಿಲ್ಲುವ
ತವಕಕ್ಕೆ,
ಕಾಲು ಸೋತು ಹೋಗಿದೆ
ನನ್ನ ಹೊಕ್ಕುಕ್ಕಿಸುತ್ತಿದ್ದ ಪ್ರೀತಿ
ಸೊರಗಿ ಸೋಲಿಸುತಿದೆ ಯಾಕೆ?
ದಣಿದು ಬಂದ ಪ್ರತಿ ಸಂಜೆ
ತಪ್ಪದೆ ನಡೆಯುವ ಪಾರಾಯಣ,
ಮತ್ತವೇ ಹಳೆ ಪಟ್ಟಿ-
ನಾ ಮರೆತ ನಿನ್ನ ಕೆಲಸ,
“ಪ್ರೀತಿ ಕಡಿಮೆಯಾಗಿದೆ”,
ಇತ್ಯಾದಿ…
ನೀ ಮರೆತ ನಿನ್ನ ನೆನಪು
ಎಲ್ಲಿಂದ ಹೆಕ್ಕಿ ಕೊಡಲಿ?
ಬಿಡು
ಕೆಲಸವಿದೆ, ಫೈಲು ಹುಡುಕಬೇಕು…
ಅಲ್ಲದೆ,
ಆಫೀಸಲ್ಲಿ ಅತ್ತರೆ
ಅವರಿವರು ನೋಡುವ ನಾಚಿಕೆ ನನಗೆ.
ಹೇಗೂ
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿಯಿದೆ,
ನೀ ಗೊಣಗುತ್ತೀಯೆಂದು
ಇತ್ತೀಚೆಗೆ
ಬೆಡ್ ಲೈಟೂ ಹಾಕುತ್ತಿಲ್ಲ ನಾನು.
23 Comments »
RSS feed for comments on this post. TrackBack URI
Leave a comment
Blog at WordPress.com. | Theme: Pool by Borja Fernandez.
Entries and comments feeds.
ಅಲ್ಲ ಅಕ್ಕಾ . .
ನೀ ನಿನ್ನ ದುಖ:ದ ಸಮಂದ ರಾತ್ರಿ ಏನು ಕೊಡ್ತಿ ಆದ್ರ . . ,ರಾತ್ರಿ ನಿದ್ದಿ ಮಾಡ್ಲಿಲ್ಲಾ ಅಂದ್ರ ನಾಳೆ ಮುಂಜಾನೆ ನಿಂಗ ತ್ರಾಸ ಹೌದೋ ಅಲ್ಲೋ. .ರಾತ್ರಿ ನಿದ್ದಿ ಮಾಡ್ಲಿಲ್ಲಾ ಅಂದ್ರ ಕಳದಿದ್ದ ಫೈಲ್ ಹೆಂಗ ಹುಡುಕ್ತಿ . . ನೀ ನಿನ್ನ ರಾತ್ರಿ ದುಖ:ದ ಕೈಯಾಗ್ ಕೊಟ್ಟ ಕೊಟ್ಟ ಹಿಂಗ್ ಆಗಿ . . ಅದಕ್ಕ ಹೇಳ್ತಿನಿ ಮಸ್ತ ಪೈಕಿ ನಿದ್ದಿ ಮಾಡ ಏನ್ . . ಅಕ್ಕಾ ..
ನೀ ನಿದ್ದಿ ಮಾಡುದಿಲ್ಲ ಅದಕ್ಕ ಮುಂಜಾನೆ ಎದ್ದ ಮ್ಯಾಲೆ ಎಲ್ಲಾರೂ ನಿನ್ನವನಂಘ ಕಾಣ್ತಾರ . . ಅದ ಗುಂಗನಾಗ್ ನಿನ್ನ ಇಡೀ ದಿನಾ . . . ಬ್ಯಾಸರಾ ಬ್ಯಾಸರಾ ಅನಕೊಂಡ ಹೊಗ್ತದ . . ಅದಕ್ಕ ಹೇಳುದು ದುಖಿ:ಸ್ಲಿಕ್ಕೆ ರಾತ್ರಿಕಿಂತಾ ಮುಂಜಾನೆನ ಮಸ್ತ . . .ಇನ್ನ ಮ್ಯಾಲೆ ನಿನಗ ಎನರೆ ದುಖ: ಆತ ಅಂದ್ರ ಬೆಳಗಿನ ಹೊತ್ತನಾಗ ಅದನ್ನಾ ಕರಿಗಿಸಿ ಬಿಡ ಅಕ್ಕಾ . . .ರಾತ್ರಿಗೆ ಇಡ್ಲಿಕ್ಕೆ ಹೊಗ ಬ್ಯಾಡಾ . .
ನೀ ಅನ್ನ ಬಹುದು ಏನ್ ಪಾ ಇವಾ ಅಂತಾ . .
ಆದ್ರ ಅದೆನೋ ಹೇಳ್ತಾರ್ಲಾ . . .
” खुषिके पल जो होतेहेना वो फुल झडियोंकि तरहा होतेहे . .एक बार लग गयॆ और दूस्री पल मॆ ही बुझगये . . . पर येजॊ गम के पल होते हे ना येरो अगरबत्तियोंकि तरहा होतेहे दॆर तक लगे रेहेतेहे और बुझनेके बाद भि इस्का सुघंड सारि तरफ फेलेरेहेतेहे . . इस केलिये गम के पल क एहेसास खुषिके पल से बेहेतर होतेहे ”
“ಸಂತೋಷದ ಕ್ಷಣಗಳು ದೀಪಾವಳಿಯಲ್ಲಿ ಹಚ್ಚುತ್ತೇವಲ್ಲ ಕುಳ್ಳಿ(fireworks) ಹಾಗೆ ಇರುತ್ತವೆ . .ಒಂದೆ ಘಳಿಗೆಯಲ್ಲಿ ಹತಿ ಉರಿದು ಮುಗಿದು ಬಿಡುತ್ತವೆ . .ಆದರೆ ದುಖ:ದ ಕ್ಷಣಗಳು ಉದ್ದಿನಕಡ್ಡಿ(insense sticks)ಇದ್ದಹಾಗೆ . .ತುಂಬಾ ಹೊತ್ತಿನವರೆಗೂ ಉರಿಯುತ್ತಿರುತ್ತವೆ . .ಉರಿದಮೇಲೂ ಇದರ ಸುವಾಸನೆ ಕೊಣೆಯ ಎಲ್ಲೆಡೆಯಲ್ಲೂ ಹರಡಿರುತ್ತವೆ . .ಅದಕ್ಕೆ ದುಖ:ದ ಭಾವ ತುಂಬಾ ಇರುತ್ತದೆ . .”
ಅಕ್ಕಾ ನೀಹಿಂಗ ಅತ್ತ ಅತ್ತ ನಿನ್ನನ್ನಾ ನೀನು ಹೆಣ್ಣು ಅಂತಾ prove ಮಾಡಿದಿ ಬಿಡ . .ಮೊನ್ನೆ ಅದೆ ಮಹಿಳಾ ದಿನದಂದು ನಾ ನಿನ್ನ ಟಿ.ವಿ.ಒಳಗ ನೋಡಿದ್ದಕ್ಕು ಮತ್ತ ಇವತ್ತ ಈ ಕವನಾ ಬರೆದಿದ್ದಕ್ಕು ಭ್ಹಾಳ ವ್ಯತ್ಯಾಸ ಅದ ಅಕ್ಕಾ . . . ಆವತ್ತ ನೀ ಒಬ್ಬ ಧೈರ್ಯವಂತ ಮಹಿಳೆ ಅಂತ ನಾ ಅನಕೊಂಡಿದ್ದೆ ಆದ್ರ ಈ ಕವನಾ ಓದಿದ ಮ್ಯಾಲೆ ಅನಸ್ಲಿಕತ್ತದ . . ಟಿ.ವಿ.ಒಳಗ ನೀ ಸುಮ್ನ ಹೇಳಿದೆಯೋ ಅಥವಾ ಇಲ್ಲೆ ಸುಮ್ಮ ಬರೆದೇಯೋ ಗೊತ್ತಾಗ್ಲಿಕತ್ತಿಲ್ಲಾ . . ಇರ್ಲಿ ಆದ್ರು ಒಂದ ಹೇಣ್ಣಿನ ಮನಸ್ಸಿನ ಭಾವನೆನಾ ಈ ತರಹಾ ತೋರಿಸಿದಿಲಾ ಅಷ್ಟ ಸಾಕ ನಂಗ . .
- ಸಂಜು
Comment by ಸಂಜು — March 13, 2008 #
ಕವನ ಓದ್ತಾ ಇದ್ದರೆ ದುಃಖ ಉಮ್ಮಳಿಸಿ ಬರತ್ತೆ!
Comment by ವಿನಾಯಕ — March 13, 2008 #
ಬ್ಲಾಗ್ ಮಜವಾಗಿದೆ. ಪ್ರಫುಲ್ಲಿತ ಬರವಣಿಗೆ ಚೇತೋಹಾರಿ. ಕವನದ ಶೀರ್ಷಿಕೆ ಬೇರೆಯಾಗಬಹುದಿತ್ತು.
Comment by sudhanva deraje — March 13, 2008 #
ಚೇತನಾ,
ಉರುಳಿ ಬಿದ್ ಬಿಟಿದೀನಿ. ಎಷ್ಟ್ ಚೆನಾಗಿ ಬರ್ದಿದೀರಲ್ಲಾ.
ದುಃಖಿಸಲಿಕ್ಕೆ ಇಡೀ ರಾತ್ರಿ ಬಾಕಿ ಇದೆ.
ನಲ್ಮೆ,
ಸಿಂಧು
Comment by Sindhu — March 13, 2008 #
@ ಸಂಜು,
“ಈ ಬ್ಲಾಗಿನಲ್ಲಿ ಬರುವ ಕಥೆ- ಕವನ- ಸನ್ನಿವೇಶಗಳು ಕೇವಲ ಕಾಲ್ಪನಿಕ!”
@ ವಿನಾಯಕ,
ಇದಕ್ಕೇನು ಹೇಳಲಿ?
@ ಸುಧನ್ವ,
ಧನ್ಯವಾದ ಸುಧನ್ವ. ಒಪ್ಪಿಕೊಳ್ಳುವೆ, ಶಿರೋನಾಮೆಗೆ ಎರದು ನಿಮಿಷ ತಲೆ ತುರಿಸ್ಕೊಂಡಿದ್ದು ಹೌದು. ಏನೇನೋ ಸಮಜಾಯಿಸ್ಕೊಂಡು ಕೊನೆಗೆ ಈ ಮೇಲಿನದನ್ನೇ ಓಕೆ ಮಾಡಿಕೊಂಡೆ.
@ ಸಿಂಧು,
ಧನ್ಯವಾದ. ಬಿದ್ದಿದ್ದಕ್ಕಲ್ಲ! ಮೆಚ್ಚಿದ್ದಕ್ಕೆ.
ಹೌದು, ಇಡೀ ರಾತ್ರಿ ಬಾಕಿ ಇದೆ!
ನಲ್ಮೆ,
ಚೇತನಾ
Comment by chetanachaitanya — March 14, 2008 #
ದುಡಿಯುವ ಮಹಿಳೆಯ ತುಮುಲವನ್ನು ಚೆನ್ನಾಗಿ ಬಿಡಿಸಿಟ್ಟಿದ್ದೀರಾ. ಕವನ ನಿಮ್ಮ ಕಲ್ಪನೆಯೋ ಅಥವಾ ಏನಾದರೂ ಹಿನ್ನೆಲೆ ಇದೆಯೇ?
Comment by sudhesh — March 14, 2008 #
ತುಂಬಾ ಚೆನ್ನಾಗಿವೆ ಸಾಲುಗಳು. Very very wicked.
Comment by ಚಕೋರ — March 14, 2008 #
ಸುಧೇಶ್,
ಸಂಜು ಅವರಿಗೆ ನೀಡಿದ ಪ್ರತಿಕ್ರಿಯೆಯೇ ನಿಮ್ಮ ಪ್ರಶ್ನೆಗೂ ಅನ್ವಯಿಸುತ್ತದೆ. ಅದಕ್ಕಾಗಿ ಮೇಲಿನ ಕಮೆಂಟು ಓದಿಕೊಳ್ಳಿ!
ಚಕೋರ, ಚೆನ್ನಾಗಿವೆ-ಓಕೆ. ವಿಕ್ಕೆಡ್ ಯಾಕೆ!?
~ ಚೇತನಾ
Comment by chetanachaitanya — March 14, 2008 #
ಸಾಲುಗಳ ಬಗ್ಗೆ ಹೇಳಿದ್ದು, playful, brilliant ಈ ಥರದ ಅರ್ಥದಲ್ಲಿ. ನಿಮ್ಮ ಬಗ್ಗೆ ಅಲ್ಲ.
Comment by ಚಕೋರ — March 14, 2008 #
Chakora,
Comment by chetanachaitanya — March 15, 2008 #
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ
ಈ ಬೆಳಗನ್ನ ಬಲಿಕೊಡಲೇಕೆ ನಾನು?
ಆರಂಭದ ಸಾಲುಗಳೇ ಎಲ್ಲವನ್ನೂ ಹೇಳಿ ಬಿಡುತ್ತವೆ…ಮನಮುಟ್ಟುವ ಕವನ
Comment by venu — March 15, 2008 #
ಕವಿತೆ ಚೆನ್ನಾಗಿದೆ, ಮನಸ್ಸು ಭಾರವಾಗುತ್ತದೆ.
ನಾವಡ
Comment by navada — March 15, 2008 #
ಚೇತನ ಅಕ್ಕ….
ನಾನು ಕೇಳಿದ್ದು ಯಾವ ಅರ್ಥದಲಿ ಅ೦ದರೆ….. ನಿಮ್ಮ ಕವನದ ಸಾಲುಗಳು, ಸನ್ನಿವೇಶಗಳು ಕಾಲ್ಪನಿಕ ಸರಿ… ಆದರೆ ಅ೦ತಹ ಸನ್ನಿವೇಶವನ್ನು ಇಟ್ಟುಕೊ೦ಡು ಬರೆದ ಕವನದ ಹಿ೦ದೆ ಪ್ರೇರಣೆ, ಘಟನೆ ಇರಬಹುದಲ್ಲಾ? ಅ೦ತಹುದೇನಾದರೂ ಇದೆಯೆ ಎ೦ಬುದು ನನ್ನ ಪ್ರಶ್ನೆ….
Comment by sudhesh — March 16, 2008 #
Sudesh,
Hmmm…ondu svalpa haudu, mattu jaasti paalu illa
yours,
Chetana akka.
Comment by chetanachaitanya — March 16, 2008 #
“ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ,
ಅದೆ ಮಾತು, ಅದೆ ನಗು
ಅದೆ ಅದೇ ದೇಹ.
ಅದರೊಳಗೆ ನೀನಿದ್ದೆ,
ಎಲ್ಲಿ ಹೋದೆ!?”
- ಇವತ್ತು ಇರುವುದು ಇವತ್ತಿಗೆ ಮಾತ್ರ ಸತ್ಯ, ನಾಳೆಯ ಸತ್ಯ ಬೇರೆಯೇ ಇರಬಹುದು ಅಂತ ನನ್ನ ಥಿಯರಿ. ನಿಮ್ಮ ಭಾವವೂ ಅದೇ, ಭಾಷೆ ಮಾತ್ರ ಬೇರೆ! ಖುಶಿಯಾಯ್ತು
ಇವತ್ ನೀವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ -ಗೆ ಬರ್ತೀರಿ ಅನ್ಕೊಂಡಿದ್ದೆ, ಯಾಕೆ ಬರ್ಲಿಲ್ಲ?
Comment by ಶ್ರೀ — March 16, 2008 #
[...] ದು:ಖಿಸುವುದನ್ನು ವಿಷಾದಮಿಶ್ರಿತ ಚಾಲಾಕಿನಿಂದ ಮುಂದೆಹಾಕುವ ಚೇತನಾರ ಪದ್ಯ. [...]
Pingback by ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿಯಿದೆ… | DesiPundit — March 17, 2008 #
ಚೇತನಾ,
ಇದು ಬರೀ ಹೆಣ್ಣಿನ ಕವಿತೆಯಲ್ಲ. ಗಂಡಸಾಗಿದ್ದರೂ ಇದೇ ಕವನ ಬರೆಯುತ್ತಿದ್ದ. ಎಲ್ಲ ದಾಂಪತ್ಯಗಳನ್ನು ದಿನನಿತ್ಯವೂ ತಿನ್ನುವ ಪ್ರಶ್ನೆಯಿದು.
“ದಣಿದು ಬಂದ ಪ್ರತಿ ಸಂಜೆ
ತಪ್ಪದೆ ನಡೆಯುವ ಪಾರಾಯಣ,
ಮತ್ತವೇ ಹಳೆ ಪಟ್ಟಿ-
ನಾ ಮರೆತ ನಿನ್ನ ಕೆಲಸ,
“ಪ್ರೀತಿ ಕಡಿಮೆಯಾಗಿದೆ”,
ಇತ್ಯಾದಿ…”
ಉತ್ತರ ಸಿಕ್ಕವರು ಮಾತ್ರ ಯಾರೂ ಇಲ್ಲ, ಸಿಕ್ಕಿದೆ ಎಂದು ಯಾರಾದರೂ ಹೇಳಿದರೆ ಅದು ಸಕ್ಕರೆ ಸುಳ್ಳು ಅಂತ ನನ್ನ ಅಭಿಪ್ರಾಯ.
-ಕೇಶವ
Comment by ಕೇಶವ — March 17, 2008 #
ಶ್ರೀ,
ಖುಶಿಗೆ ಖುಶಿ.
ಪ್ರೋಗ್ರಾಮ್ ಗೆ ಬರೋ ತಯಾರಿ ಯಾವತ್ತಿಂದ ಇತ್ತು. ಆದ್ರೆ ನನ್ ಚಿಕ್ಕಮ್ಮ ಅಡ್ಮಿಟ್ ಆಗಿದ್ರು, ಅಲ್ಗೆ ಹೋಗಬೇಕಾಯ್ತು. ಜೊತೆಗೆ, ನನ್ನ ಕಣ್ಣೂ ಕಣ್ ಚಿಟ್ಲೆ ಆಗಿ ಊದಿಕೊಂಡಿತ್ತು. ಹೀಗಾಗಿ ಬರ್ಲಿಲ್ಲ.
ದೇಸೀ ಪಂಡಿತ್?
ಧನ್ಯವಾದ.
ಕೇಶವ,
ನಿಮ್ಮ ಮಾತನ್ನು ಒಪ್ಪುವೆ. ಅದು ಹಾಗೂ ಇರಬಾರದೆಂದೇನಿಲ್ಲ. ಆದರ ಆ ಸಂಕಟದ ಪ್ರಾಮುಖ್ಯತೆ- ಪರಿಣಾಮ ಎರಡೂ ಮಗ್ಗುಲಲ್ಲಿ ಬೇರೆಬೇರೆಯಾಗಿರುತ್ತೆ ಅಂದುಕೊಳ್ಳುತ್ತೇನೆ.
Comment by chetanachaitanya — March 17, 2008 #
‘ಗಂಡಸಿಗೆ ಅಳುವ ಅವಕಾಶವು ಇಲ್ಲ,
ಹುಡುಕಬೇಕಿದೆ ಅವನು ದುಖ ಹೋರಹಾಕುವ ದಾರಿ
ಅಮ್ಮನ ಮಡಿಲಲ್ಲೂ, ಗೇಳತಿಯ ಭುಜಕ್ಕೆ ಒರಗಿಯೋ
ಎರಡು ಸಿಗದಿದ್ದರೆ ಪಾಯಿಖಾನೆಯಲ್ಲಿಯೋ, ಮಧುಖಾನೆಯಲ್ಲೋ.
ಅಳುವ ತನ್ನ ತಾನೇ ಕಂಡರೆ ನಾಚಿಕೆ ಅವನಿಗೆ
ಅವರಿವರು ಕಂಡರೆ ಹೆಣ್ಣಿಗ, ದುಖ ಹೋರಹಾಕದಿದ್ದರೆ ಕಲ್ಲು ಮನಸಿನವ.’
ಇದು ಕೇವಲ ನಿಮ್ಮ ಮೇಲಿನ ಅನಸಿಕೆಗೆ, ಗಂಡಿನ ಸಂಕಟದ ಪ್ರಾಮುಖ್ಯತೆ- ಪರಿಣಾಮ ಈ ರೀತಿಯಾಗಿರುತ್ತದೆ ಅಂದುಕೊಳ್ಳುತ್ತೇನೆ. (ಗಂಡು ಮತ್ತು ಹೆಣ್ಣು ಪೈತಾಗೋರಸನ ಪ್ರಮೇಯವಲ್ಲವಲ್ಲ ಎಲ್ಲೆಲ್ಲೂ, ಎಲ್ಲ ಸಮಯದಲ್ಲೂ, ಯಾವಾಗಲೂ ಒಂದೇ ಉತ್ತರ ಬರಲು).
ಕವನ ಚೆನ್ನಾಗಿದೆ, ಮನಸ್ಸಿನಲ್ಲಿರುವುದನ್ನೆ ತೆಗೆದು ಪೋಣಿಸಿಟ್ಟಂತಿದೆ. ಬೆಳಿಗ್ಗೆ ಬೆಳಿಗ್ಗೆನೆ ಮೂಡ ಖರಾಬಾದಾಗ, ಹಳೆಯ ನೆನಪುಗಳು ಪುಟಿದೆದ್ದು ಕಣ್ಮುಂದೆ ಕುಣಿದಾಗ ನನಗೆ ನಾನೆ ಹೇಳಿಕೊಳ್ಳುವುದು ಅದನ್ನೇ,
“ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ
ಈ ಬೆಳಗನ್ನ ಬಲಿಕೊಡಲೇಕೆ ನಾನು?”
ಪ್ರೀತಿಯಿರಲಿ
ಶೆಟ್ಟರು
Comment by ಶೆಟ್ಟರು (Shettaru) — March 17, 2008 #
(ಗಂಡು ಮತ್ತು ಹೆಣ್ಣು ಪೈತಾಗೋರಸನ ಪ್ರಮೇಯವಲ್ಲವಲ್ಲ ಎಲ್ಲೆಲ್ಲೂ, ಎಲ್ಲ ಸಮಯದಲ್ಲೂ, ಯಾವಾಗಲೂ ಒಂದೇ ಉತ್ತರ ಬರಲು).
ShettarE, saalu sogasaagide!
DhanyavAda.
-Chetana
Comment by chetanachaitanya — March 17, 2008 #
ಸಖತ್ ಕವಿತೆ, ಒಂಥರಾ ಗಝಲ್ ಫೀಲ್ ಇದೆ, ಜೊತೆಗೆ ಫೈಲುಗಳನ್ನ ಹುಡುಕೋ ಹುಡುಗಿ ಬದುಕಿಗೆ ಹತ್ತಿರಾಗಿಸ್ತಾಳೆ…ನಂಗೆ ಈ ಶೈಲಿ-ವಿಷಯಗಳನ್ನ ಹೊಂದಿಸಿರೋ ರೀತಿ ಇಷ್ಟ ಆಯ್ತು. ಅಂದ್ ಹಾಗೆ ಇಲ್ಲೀವರೆಗೆ ನಿಮ್ಮ ಬರಹಗಳನ್ನ ಅವಧಿಯಲ್ಲಷ್ಟೇ ಓದ್ತಿದ್ದೆ,(ಅದ್ರಿಂದಲೇ ನಿಮ್ಗೆ ಪಟ್ಟ ಕಟ್ಟಿದ್ದು:P)ಯಾವ್ದೋ ಚಿಲ್ರೆ ಕಿತ್ತಾಟದ ನೆಪದಲ್ಲಿ ಒಂದಷ್ಟು ಒಳ್ಳೇ ಬ್ಲಾಗ್‍ಗಳನ್ನ ಓದೋ ಹಾಗಾಯ್ತು ಅಂತ ಸಮಾಧಾನ!
Comment by Sree — March 21, 2008 #
Welcome Sree,
neevu hELiddu nija. santOSh ge thanx hELale bEku. ee nevadalli nAnu sAkaShtu blogs suttADide
barta iri.
nalme,
Chetana
Comment by chetana chaitanya — March 21, 2008 #
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ
ಈ ಬೆಳಗನ್ನ ಬಲಿಕೊಡಲೇಕೆ ನಾನು?
Tumba mecchige aada sAlugaLu
Comment by Rohini — April 12, 2008 #